ಪ್ರೀತಿಸಿ ಮದುವೆಯಾಗಿದ್ದ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಮೊದಲ ಮಗಳು ಐಶ್ವರ್ಯಾ ಹಾಗೂ ಸ್ಟಾರ್ ನಟ ಧನುಶ್ ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಇದೀಗ ಎಳ್ಳುನೀರು ಬಿಟ್ಟಿದ್ದಾರೆ. 18 ವರ್ಷಗಳ ನಂತರ ಡಿವೋರ್ಸ್ ಪಡೆಯಲು ನಿರ್ಧರಿಸಿರುವ ಶಾಕಿಂಗ್ ಸತ್ಯವನ್ನ ಧನುಷ್ ಹಾಗೂ ಐಶ್ವರ್ಯ ಇಬ್ರೂ ಸಹ ಇತ್ತೀಚೆಗೆ ಸೋಷಿಯಲ್ ಮೀಡಿಯಾ ಮೂಲಕ ರಿವೀಲ್ ಮಾಡಿದ್ದರು.
ಈ ಸುದ್ದಿ ಅವರ ಅಭಿಮಾನಿಗಳಿಗೆ ಬರಸಿಡಿಲಂತೆ ಅಪ್ಪಳಿಸಲಿದೆ.. ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ.. ಯಾರೂ ಕೂಡ ಇದನ್ನ ನಿರೀಕ್ಷೆ ಮಾಡಿರಲಿಲ್ಲ.. ಯಾಕಂದ್ರೆ ಧನುಶ್ ಹಾಗೂ ಐಶ್ವರ್ಯ ಸದಾ ಒಟ್ಟಾಗಿ ಅನ್ಯೋನ್ಯವಾಗಿಯೇ ಕಾಣಿಸಿಕೊಳ್ತಿದ್ದವರು. ಆದ್ರೆ ಅವರ ಈ ಧೀಡೀರ್ ನಿರ್ಧಾರ ಎಲ್ರನ್ನೂ ಅಚ್ಚರಿಗೀಡು ಮಾಡಿದೆ.
ಇದೀಗ ಈ ಬಗ್ಗೆ ಧನುಷ್ ತಂದೆ , ತಮಿಳು ಸಿನಿಮಾ ನಿರ್ಮಾಪಕ ಕಸ್ತೂರಿ ರಾಜ ಅವರು ಪ್ರತಿಕ್ರಿಯಿಸಿ ಸೋಷಿಯಲ್ ಮೀಡಿಯಾದಲ್ಲಿ ಜಂಟಿ ಹೇಳಿಕೆ ಪ್ರಕಟಿಸಿದ್ದಾರೆ. ಧನುಷ್-ಐಶ್ವರ್ಯಾ ಒಂದಾಗಬಹುದು ಎಂಬ ಆಶ್ವಾಸನೆ ನೀಡಿದ್ದಾರೆ. ಅಲ್ಲದೇ ಮ್ಯಾಗಝಿನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಧನುಷ್ ಮತ್ತು ಐಶ್ವರ್ಯಾರ ಈ ನಿರ್ಧಾರ ಕೇವಲ ಕೌಟುಂಬಿಕ ಕಲಹವಷ್ಟೆ.
ಪ್ರತಿ ಸಂಸಾರಗಳಲ್ಲಿ ಹೇಗೆ ಮನಸ್ತಾಪಗಳು ಉಂಟಾಗುತ್ತೊ, ಅಂತೆಯೇ ಧನುಷ್ ಮತ್ತು ಐಶ್ವರ್ಯ ನಡುವೆಯೂ ಕಲಹಗಳು ಉಂಟಾಗಿದೆ. ಹೀಗಾಗಿ ಇವರಿಬ್ಬರ ಈ ನಿರ್ಧಾರ ಸಾಮಾನ್ಯವಾಗಿ ದಂಪತಿಗಳ ನಡುವೆ ನಡೆಯುವ ಕಲಹ ಮಾತ್ರ. ಇದು ವಿಚ್ಛೇದನ ಅಲ್ಲಾ ಎಂದಿದ್ದಾರೆ. ಅಲ್ಲದೇ ಧನುಷ್ ಮತ್ತು ಐಶ್ವರ್ಯ ಸದ್ಯ ಚೆನೈನಲ್ಲಿ ಇಲ್ಲಾ. ಇಬ್ಬರೂ ಕೂಡ ಹೈದರಾಬಾದ್ ನಲ್ಲಿ ಇದ್ದಾರೆ. ಹೀಗಾಗಿ ಇಬ್ಬರ ಬಳಿಯೂ ನಾನು ಮಾತನಾಡಿದ್ದು ಅವರಿಬ್ಬರಿಗೂ ಸಲಹೆಯನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುವ ನಿರೀಕ್ಷೆ ಕೂಡ ಇದೆ ಎಂದು ಹೇಳಿದ್ದಾರೆ. ಕಸ್ತೂರಿ ರಾಜ ಅವರ ಈ ಹೇಳಿಕೆ ಅಭಿಮಾನಿಗಳಲ್ಲಿ ಒಂದು ಭರವಸೆ ಮೂಡಿದೆ. 2004 ರಲ್ಲಿ ಮದುವೆಯಾಗಿದ್ದ ಈ ಜೋಡಿ ಈಗ ಡಿವೋರ್ಸ್ ಗೆ ಮುಂದಾಗಿದೆ..