ಇದು ನಿಮ್ಮ ಸೌತ್ ಸೂಪರ್ ಸ್ಟಾರ್ ಗಳ ಶೈಕ್ಷಣಿಕ ವಿದ್ಯಾರ್ಹತೆ
ಹಿಂದೆ ಭಾರತೀಯ ಸಿನಿಮಾ ಅಂದ್ರೆ ಕೇವಲ ಬಾಲಿವುಡ್ ಅಂತಿದ್ರೂ ಈಗ ಕಾಲ ಬದಲಾಗಿದೆ. ಈಗ ದಕ್ಷಿಣದ ತಾರೆಯರು ಕೂಡ ಜನಪ್ರಿಯತೆಯ ವಿಚಾರದಲ್ಲಿ ಬಾಲಿವುಡ್ ತಾರೆಯರಿಗೆ ಪೈಪೋಟಿ ನೀಡುತ್ತಿದ್ದಾರೆ. ಅಂದಹಾಗೆ, ನಾವು ಈ ಸ್ಟಾರ್ ಗಳ ಜನಪ್ರಿಯತೆಯ ಬಗ್ಗೆ ಹೇಳಲು ಹೊರಟಿಲ್ಲ ಆದರೆ ಈ ಸ್ಟಾರ್ ವಿಧ್ಯಾಬ್ಯಾಸ, ಶೈಕ್ಷಣಿಕ ಅರ್ಹತೆಯ ಬಗ್ಗೆ ಹೇಳಲು ಹೊರಟಿದ್ದೇವೆ. ಸಿನಿಮಾ ನೋಡೊ ಮಂದಿ ಸಹ ಸೌತ್ ಸಿನಿಮಾದ ಸೂಪರ್ ಸ್ಟಾರ್ ಗಳ ಎಜುಕೇಷನ್ ಏನು ಅನ್ನುವುದನ್ನ ಇದ್ದನ್ನ ನೋಡಿ ತಿಳಿಯಬಹುದು
‘ಪುಷ್ಪ’ ಚಿತ್ರದಲ್ಲಿ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಅಲ್ಲು ಅರ್ಜುನ್, ಚೆನ್ನೈನ ಸೇಂಟ್ ಪ್ಯಾಟ್ರಿಕ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದಿದ್ದಾರೆ. ಇದರ ನಂತರ ಅವರು ಹೈದರಾಬಾದ್ನ ಎಂಎಸ್ಆರ್ ಕಾಲೇಜಿನಲ್ಲಿ ಬಿಬಿಎ (ಬ್ಯಾಚುಲರ್ ಇನ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್) ಮುಗಿಸಿದ್ದಾರೆ.
ಕೆಜಿಎಫ್ ಮೂಲಕ ದೇಶಾದ್ಯಂತ ಹವಾ ಎಬ್ಬಿಸಿರುವ ನಟ ಯಶ್ ಮೈಸೂರಿನಲ್ಲಿ 12 ನೇ ತರಗತಿಯವರೆಗೆ ಓದಿದ್ದಾರೆ ಆದರೆ ನಂತರ ಹೆಚ್ಚಿನ ವ್ಯಾಸಂಗ ಕೈ ಬಿಟ್ಟು ನಟನಾಗಲು ಬೆಂಗಳೂರಿಗೆ ಬಂದರು
ತಮಿಳು ನಟ ಧನುಷ್ ಓದಿದ್ದು 12ನೇ ತರಗತಿವರೆಗೆ ಮಾತ್ರ. ತಂದೆ ಕಸ್ತೂರಿ ರಾಜಾ ಬಯಸಿದ್ದು ಇದೇ ಎಂದು ಚಿಕ್ಕವಯಸ್ಸಿನಲ್ಲೇ ನಟನೆಯ ಜಗತ್ತಿಗೆ ಕಾಲಿಟ್ಟಿದ್ದರಿಂದ ಕಾಲೇಜಿಗೆ ಹೋಗಲಾಗಲಿಲ್ಲ. ನಟನಾ ಲೋಕಕ್ಕೆ ಕಾಲಿಟ್ಟ ಧನುಷ್ ದೂರಶಿಕ್ಷಣದಿಂದ ಬಿಸಿಎ (ಬ್ಯಾಚುಲರ್ ಆಫ್ ಕಂಪ್ಯೂಟರ್ ಎಜುಕೇಶನ್) ಮಾಡಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಪ್ರಭಾಸ್ ಕೂಡ ಒಬ್ಬರು. ಬಿ.ಟೆಕ್ ಮುಗಿಸಿದ ನಂತರ ನಟನೆಗೆ ಧುಮುಕಿ ಯಶಸ್ಸು ಕಂಡಿದ್ದಾರೆ.
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರು ತಮ್ಮ ಶಾಲಾ ಶಿಕ್ಷಣವನ್ನು ಚೆನ್ನೈನ ಸೇಂಟ್ ಫ್ಲೀಟ್ ಆಂಗ್ಲೋ ಇಂಡಿಯನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಾಡಿದರು. ಇದರ ನಂತರ, ಅವರು ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ಪದವಿ ಪಡೆದರು. ಪದವಿ ಪಡೆದ ಕೆಲವೇ ತಿಂಗಳುಗಳಲ್ಲಿ ನಟನೆಯ ತರಬೇತಿ ಪಡೆದು ನಟನಾಗುವತ್ತ ಹೆಜ್ಜೆ ಹಾಕಿದರು.
ದಳಪತಿ ವಿಜಯ್ ದಕ್ಷಿಣ ಚಿತ್ರರಂಗದಲ್ಲೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬ 12 ನೇ ತರಗತಿಯವರೆಗೆ ಓದಿದ ನಂತರ, ಅವರು ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ವಿಷುಯಲ್ ಕಮ್ಯುನಿಕೇಶನ್ನಲ್ಲಿ ಪದವಿಗೆ ಸೇರಿಕೊಂಡರು, ಆದರೆ ಅವರ ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಟನೆಯ ಮೇಲಿನ ಆಸಕ್ತಿಯಿಂದಾಗಿ, ಅವರು ತಮ್ಮ ಅಧ್ಯಯನವನ್ನು ಮಧ್ಯದಲ್ಲಿಯೇ ಬಿಟ್ಟರು.
‘ಲೈಗರ್’ ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಲು ಹೊರಟಿರುವ ಸ್ಟಾರ್ ವಿಜಯ್ ದೇವರಕೊಂಡ, ಬಿಕಾಂ ಮಾಡಿ ನಂತರ ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದಾರೆ.
ರಜನಿಕಾಂತ್ ಈ ಹಿಂದೆ ಬೆಂಗಳೂರಿನ ಗವಿಪುರಂ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಓದಿದ್ದರು. ಇದರ ನಂತರ ಅವರ ಸಹೋದರ ರಾಮಕೃಷ್ಣ ಮಠಕ್ಕೆ ಅಧ್ಯಯನ ಮಾಡಲು ಕಳುಹಿಸಿದರು, ಅಲ್ಲಿ ಅವರು ವೇದ ಮತ್ತು ಇತಿಹಾಸವನ್ನು ಅಧ್ಯಯನ ಮಾಡಿ ಇಲ್ಲಿಂದ ನಟನೆಯಲ್ಲಿ ಆಸಕ್ತಿ ಮೂಡಿದ ಅವರು ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿ ಸಾಕಷ್ಟು ಪರಿಶ್ರಮದ ನಂತರ ನಟರಾದರು.
‘ಜೈ ಭೀಮ್’ ನಂತಹ ಅತ್ಯುತ್ತಮ ಸಿನಿಮಾದಲ್ಲಿ ಮಿಂಚಿರುವ ತಮಿಳು ನಟ ಸೂರ್ಯ ಪದವಿವರೆಗೆ ಓದಿದ್ದಾರೆ. ಬಿ ಕಾಂ ಮುಗಿಸಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ.