ಹಾಲಿವುಡ್ ನಟ ಅರ್ನಾಲ್ಡ್ ಅವರ ಕಾರು ಅಪಘಾತ… ನಟ ಬಚಾವ್
ಹಾಲಿವುಡ್ನ ಜನಪ್ರಿಯ ಚಿತ್ರ ‘ಟರ್ಮಿನೇಟರ್’ ಖ್ಯಾತಿಯ ನಟ ಅರ್ನಾಲ್ಡ್ ಅವರ ಕಾರು ಸರಣಿ ಅಫಘಾತಕ್ಕೆ ಒಳಗಾಗಿದೆ. ಈ ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಯಾವುದೇ ಗಾಯಗಳಿಲ್ಲದೆ ಬಚಾವ್ ಆಗಿದ್ದಾರೆ. ಸರಣಿ ಅಪಘಾತದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಪಘಾತದ ಬಗ್ಗೆ ವಿವರಿಸಿದ ಸ್ಥಳಿಯ ಜನರು, ಈ ಅಪಘಾತವು ಚಲನಚಿತ್ರದ ಭಯಾನಕ ಸಾಹಸದಂತೆಯೇ ಕಾಣಿಸುತ್ತಿತ್ತು ಎಂದು ಹೇಳಿದ್ದಾರೆ.
ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ಅಧಿಕಾರಿ ಡ್ರೇಕ್ ಮ್ಯಾಡಿಸನ್ ಅವರ ಪ್ರಕಾರ “ಸಂಜೆ 4:35 ಗಂಟೆಗೆ, ಸನ್ಸೆಟ್ ಮತ್ತು ಅಲೆನ್ಫೋರ್ಡ್ನ ನಾಲ್ಕು ಕಾರುಗಳು ಡಿಕ್ಕಿ ಹೊಡೆದವು. ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಕ್ಯಾಲಿಫೋರ್ನಿಯಾದ ಮಾಜಿ ಗವರ್ನರ್, ಅರ್ನಾಲ್ಡ್ ಶ್ವಾರ್ಜಿನೆಗ್ಗರ್, ಎಸ್ಯುವಿಯೊಳಗಿನ ಏರ್ಬ್ಯಾಗ್ ತೆರೆದುಕೊಂಡಿದ್ದರಿಂದ ಅಪಘಾತದಲ್ಲಿ ಗಾಯಗೊಂಡಿಲ್ಲ. 74 ವರ್ಷದ ಅರ್ನಾಲ್ಡ್, ಕಪ್ಪು ಯುಕಾನ್ ಕಾರನ್ನು ಚಾಲನೆ ಮಾಡುತ್ತಿದ್ದರು, ಮಹಿಳೆ ಕೆಂಪು ಟೊಯೊಟಾ ಪ್ರಿಯಸ್ ಅನ್ನು ಡ್ರೈವ್ ಮಾಡುತ್ತಿದ್ದಳು. ಎಂದು ತಿಳಿಸಿದ್ದಾರೆ.
ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಪ್ರತಿನಿಧಿ ಹೇಳಿಕೆ ಪ್ರಕಾರ ಅವರು ಸಂಪೂರ್ಣವಾಗಿ ಚೆನ್ನಾಗಿದ್ದಾರೆ ಮತ್ತು ಗಾಯಗೊಂಡ ಮಹಿಳೆಯ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಅಪಘಾತದಲ್ಲಿ ಮಹಿಳೆಯನ್ನು ಹೊರತುಪಡಿಸಿ ಯಾರಿಗೂ ಗಾಯಗಳಾಗಿಲ್ಲ. ಕಾನೂನು ಮೂಲಗಳ ಪ್ರಕಾರ, ಆರ್ನಾಲ್ಡ್ ಅವರ ತಪ್ಪಿನಿಂದ ಕಾರು ಅಪಘಾತ ಸಂಭವಿಸಿದೆ ಎಂದು ವರದಿ ಹೇಳುತ್ತದೆ. ಎಂದು ತಿಳಿಸಿದ್ದಾರೆ.
ಇತ್ತೀಚೆಗೆ, ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರು ತಮ್ಮ ಪತ್ನಿ ಮಾರಿಯಾ ಶ್ರೀವರ್ ಅವರಿಂದ ವಿಚ್ಛೇದನದಿಂದಾಗಿ ಸುದ್ದಿಯಲ್ಲಿದ್ದರು, ಮದುವೆಯಾದ 35 ವರ್ಷಗಳ ನಂತರ ಅರ್ನಾಲ್ಡ್ ಮತ್ತು ಮಾರಿಯಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ.