ಕಿಚ್ಚನ ‘ವಿಕ್ರಾಂತ್ ರೋಣ’ ಫೆಬ್ರವರಿ 24 ಕ್ಕೆ ರಿಲೀಸ್ ಆಗುವುದು ಪಕ್ಕಾ…!!!
ಕಿಚ್ಚ ಸುದೀಪ್ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾ ಫೆಬ್ರವರಿ 24 ಕ್ಕೆ ರಿಲೀಸ್ ಆಗಲಿದೆ ಎಂದು ಕೋವಿಡ್ 3 ನೇ ಅಲೆ ವಕ್ಕರಿಸುವ ಮುನ್ನವೇ ಸಿನಿಮಾ ತಮಡವು ಅಧಿಕೃತವಾಗಿ ಅನೌನ್ಸ್ ಮಾಡಿತ್ತು..
ಹಾಲಿವುಡ್ ರೇಂಜ್ ಗೆ ಸೌಂಡ್ ಮಾಡೋದಕ್ಕೆ ರೆಡಿಯಿರುವ 14 ಭಾಷೆಗಳಲ್ಲಿ ರಿಲೀಸ್ ಆಗಲು ರೆಡಿಯಾಗಿರುವ ವಿಕ್ರಾಂತ್ ರೋಣ ಸಿನಿಮಾ ಪೋಸ್ಟ್ ಪೋನ್ ಆಗಲಿದೆ ಎನ್ನಲಾಗಿತ್ತು.. ಪ್ಯಾಂಡೆಮಿಕ್ ನಿಂದಾಗಿ ಥಿಯೇಟರ್ ಗಳು ಬಂದ್ , 50 % ಸೀಟಿಂಗ್ ಭೀತಿಯಿಂದ RRR , ರಾಧೆ ಶ್ಯಾಮ್ ಮಾದರಿಯಲ್ಲೇ ಪೋಸ್ಟ್ ಪೋನ್ ಆಗುತ್ತದೆ ಎನ್ನಲಾಗಿತ್ತು.. ಹಾಗಾದ್ರೆ ಹೊಸ ರಿಲೀಸ್ ದಿನಾಂಕ ಯಾವಾಗ ಎಂಬ ಸವಾಲು ಎದ್ದಿತ್ತು ಇದೀಗ ಎಲ್ಲಾ ಸವಾಲುಗಳಿಗೂ ಉತ್ತರ ಸಿಕ್ಕಿದೆ..
ಅಂದ್ಹಾಗೆ ನಿಗದಿತ ದಿನಾಂಕ ಫೆಬ್ರವರಿ 24 ಕ್ಕೆ ವಿಕ್ರಾಂತ್ ರೋಣ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವುದು ಕನ್ ಫರ್ಮ್,.. ಈ ವಿಚಾರವನ್ನ ಖುದ್ದು ನಿರ್ಮಾಪಕ ಜಾಕ್ ಮಂಜು ಅವರೇ ಬಹಿರಂಗ ಪಡಿಸಿದ್ದಾರೆ. ರಂಗಿತರಂಗ ಖ್ಯಾತಿಯ ನಿರ್ಮಾಪಕ ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಥ್ರಿಲ್ಲರ್ , ಸಸ್ಪೆನ್ಸ್ ಫ್ಯಾಂಟಸಿ ಸಿನಿಮಾ ವಿಕ್ರಾಂತ್ ರೋಣ ಸಾಕಷ್ಟು ವಿಚಾರಗಳಿಂದ ಸದ್ದು ಮಾಡಿದೆ. ಬುರ್ಜ್ ಖಲೀಫಾದಲ್ಲಿ ಟೈಟಲ್ ಲಾಂಚ್ ಮೂಲಕ ವಿಶ್ವದ ಗಮನ ಸೆಳೆದ ವಿಕ್ರಾಂತ್ ರೋಣನ ಗ್ಲಿಂಪ್ಸ್ ರೋಮಾಂಚನಗೊಳಿಸುತ್ತೆ.. 3ಡಿಯಲ್ಲಿ ಬರುತ್ತಿರುವುದು ಒಂದು ಹೈಲೈಟ್ ಆದ್ರೆ , 14 ಭಾಷೆಗಳಲ್ಲಿ ರಿಲೀಸ್ ಆಗ್ತಿರೋದು ಸೆನ್ಷೇಶನಲ್ ಅನ್ನಬಹುದು..
ಅಂದ್ಹಾಗೆ ಈ ಸಿನಿಮಾಗೆ ಒಟಿಟಿಯಿಂದ 100 ಕೋಟಿ ರೂಪಾಯಿ ಆಫರ್ ಬಂದಿತ್ತು ಎಂದು ನಿರ್ಮಾಪಕರು ಹೇಳಿ ಕೊಂಡಿದ್ದರು. ಆದರೆ ಈ ಆಫರ್ ಬೇಡ ಎಂದು ಚಿತ್ರತಂಡ ನಿರಾಕರಿಸಿತ್ತು. ಚಿತ್ರವನ್ನು ಓಟಿಟಿ ಬದಲಿದೆ ಚಿತ್ರಮಂದಿರಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಇದೀಗ ಸಿನಿಮಾ ಪಕ್ಕಾ ಫೆಬ್ರವರಿ 24 ಕ್ಕೆ ರಿಲೀಸ್ ಆಗಲಿದೆ ಎನ್ನಲಾಗಿದ್ದು , ಕಿಚ್ಚ ಸುದೀಪ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ..