ತೆಲುಗು ಹಾಗೂ ತಮಿಳು ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಕನ್ನಡತಿ ಪೂಜಾ ಹೆಗ್ಡೆ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಅಷ್ಟೇ ಹಣ ಸಂಪಾದನೆ ಮಾಡುತ್ತಾ , ಯಶಸ್ಸಿನ ಶಿಖರವನ್ನೇರುತ್ತಿದ್ದಾರೆ..
ಪೂಜಾ ಹೆಗ್ಡೆ ಈಗಾಗಲೇ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.. ಇನ್ನೂ ಅವರ ಅಭಿನಯದ ಪ್ರಭಾಸ್ ನಾಯಕರಾಗಿರುವ ರಾಧೆ ಶ್ಯಾಮ್ ಸಿನಿಮಾ ರಿಲೀಸ್ ಆಗಬೇಕಿದೆ.. ಜನವರಿ 14 ಕ್ಕೆ ರಿಲೀಸ್ ಆಗಬೇಕಿತ್ತು. ಕೋವಿಡ್ ಕಾರಣದಿಂದಾಗಿ ಪೋಸ್ಟ್ ಪೋನ್ ಆಗಿದೆ. ಬಾಲಿವುಡ್ ನಲ್ಲೂ ಗುರುತಿಸಿಕೊಂಡಿರುವ ಪೂಜಾ ಹೆಗ್ಡೆ ಅತಿ ಹೆಚ್ಚು ಸಂಭಾವನೆ ಪಡೆಯುವ ಸೌತ್ ಇಂಡಿಯಾ ನಟಿಯರ ಪೈಕಿ ಒಬ್ಬರಾಗಿದ್ದಾರೆ.. ಇವರು ಈಗ ತಮ್ಮ ಕನಸಿನ ಮನೆ ಕಟ್ಟಿಸಿ ಗೃಹಪ್ರವೇಶದ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.. ಮುಂಬೈನಲ್ಲಿ ತಮ್ಮ ಮನೆ ಕಟ್ಟಿಸಿದ್ದಾರೆ.
ಇನ್ಸ್ಟಾದಲ್ಲಿ ಟ್ರೆಡಿಷನಲ್ ಡ್ರೆಸ್ ನಲ್ಲಿ ತೆಂಗಿನ ಕಾಯಿ ಹಿಡಿದು ದೇವರಿಗೆ ನಮಸ್ಕರಿಸುತ್ತುರುವ ಫೋಟೋ ಹರಿಬಿಟ್ಟು ಮನೆ ಕಟ್ಟುವ ನನ್ನ ಕನಸು ನನಸಾಗಿದೆ. ನಿಮ್ಮ ಆತ್ಮಸಾಕ್ಷಿ ಮತ್ತು ಕಠಿಣ ಪರಿಶ್ರಮವನ್ನು ನಂಬಿರಿ. ಈ ಜಗತ್ತು ನಿಮ್ಮನ್ನು ಪ್ರೀತಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಕರಾವಳಿ ಬೆಡಗಿಗೆ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇನ್ನೂ ಇತ್ತೀಚೆಗೆ ಪೂಜಾ ತಮಿಳಿನ ಸ್ಟಾರ್ ನಟ ವಿಜಯ್ ಬಹುನಿರೀಕ್ಷೆಯ ಬೀಸ್ಟ್ ಸಿನಿಮಾದ ಶೂಟಿಂಗ್ ಕೂಡ ಮುಗಿಸಿದ್ದು , ಈ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಇದೇ ವರ್ಷ ರಿಲೀಸ್ ಅಗಲಿದೆ.