ಬಾಲಿವುಡ್ ನ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ , ಅಮೆರಿಕಾದ ಖ್ಯಾತ ಪಾಪ್ ಸಿಂಗರ್ ನಿಕ್ ಜಾನಸ್ 6 ತಿಂಗಳಿಗೆ ಹುಟ್ಟಿದ ಹೆಣ್ಣು ಮಗುವಿಗೆ ತಂದೆ ತಾಯಿಯಾಗಿದ್ದಾರೆ..
ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮೀಡಿಯಾ ಮೂಲಕ ತಾವು ಹಾಗೂ ನಿಕ್ ಬಾಡಿಗೆ ತಾಯ್ತನದ ಮೂಲಕ ತಂದೆ ತಾಯಿಯಾಗ್ತಿರುವ ವಿಚಾರವನ್ನ ಬಹಿರಂಗ ಪಡಿಸಿದ್ದರು.
ಬಾಡಿಗೆ ತಾಯಿ 27 ವಾರಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಅಂದ್ಹಾಗೆ ಏಪ್ರಿಲ್ನಲ್ಲಿ ಪ್ರಿಯಾಂಕ ತಾಯಿ ಆಗುವ ನಿರೀಕ್ಷೆಯಲ್ಲಿದ್ದರು. ಆದರೆ 12 ವಾರಗಳ ಮೊದಲೇ ಹೆಣ್ಣು ಮಗು ಅಮೆರಿಕದ ಲಾಸ್ ಎಂಜಲೀಸ್ ಆಸ್ಪತ್ರೆಯಲ್ಲಿ ಜನಿಸಿದೆ.
6 ತಿಂಗಳಿಗೆ ಹುಟ್ಟಿದ ಪ್ರೀ-ಮೆಚ್ಯೂರ್ ಬೇಬಿಯಾಗಿರುವುದರಿಂದ ಮಗು, ಬಾಡಿಗೆ ತಾಯಿ ವಾರ ಆಸ್ಪತ್ರೆಯಲ್ಲೇ ವೈದ್ಯರ ನಿಗಾದಲ್ಲಿ ಇರಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಮಗುವನ್ನು ಹೊಂದಲು ಬಯಸಿದ್ದರು. ಆದರೆ ಅವರಿಬ್ಬರ ಬ್ಯುಸಿ ಶೆಡ್ಯೂಲ್ ನಿಂದಾಗಿ ಪಿಗ್ಗಿಗೆ 39 ವಯ್ಯಸು ಆಗಿರುವುದರಿಂದಲೂ ಎಲ್ಲ ಸಮಸ್ಯೆಗಳಿಂದ ಬಾಡಿಗೆ ತಾಯ್ತನದ ಮೊರೆ ಹೋಗಿದ್ದಾರೆ.
ಇವರು ಬಾಡಿಗೆ ತಾಯ್ತನದ ಮೂಲಕವಾಗಿ ಮಗುವನ್ನು ಪಡೆಯಲು ಒಬ್ಬ ಮಹಿಳೆಯನ್ನು ಭೇಟಿಯಾಗಿದ್ದರು ಎನ್ನಲಾಗಿದೆ. ಇದು ಆ ಮಹಿಳೆಗೆ ಐದನೇ ಸರೋಗಸಿಯಾಗಿತ್ತು ಎನ್ನಲಾಗಿದೆ. ಏಪ್ರಿಲ್ ನಲ್ಲಿ ಮಗು ಪಡೆಯಲು ಪ್ರಿಯಾಂಕಾ ಚೋಪ್ರಾ ಪ್ಲಾನ್ ಮಾಡಿದ್ದರು.
ಸರೋಗಸಿ ಮೂಲಕ ನಾವು ಮಗುವನ್ನು ಸ್ವಾಗತಿಸಿದ್ದೇವೆ. ನಾವು ಕುಟುಂಬದ ಕಡೆಗೆ ಈ ವಿಶೇಷ ಸಮಯದಲ್ಲಿ ಹೆಚ್ಚಿನ ಗಮನ ಕೊಡಬೇಕಾಗಿರೋದರಿಂದ ನಮಗೆ ಪ್ರೈವಸಿ ಬೇಕಿದೆ. ಧನ್ಯವಾದಗಳು ಎಂದು ಪ್ರಿಯಾಂಕಾ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.