ಮಗಳು ಐರಾಗೆ ಅ ಆ ಇ ಈ ಹೇಳಿಕೊಟ್ಟ ಯಶ್… (ವೀಡಿಯೋ )
ನಟ ರಾಕಿಂಗ್ ಸ್ಟಾರ್ ಯಶ್ ಸಿನಿಮಾಗೆ ಎಷ್ಟು ಪ್ರಾಮುಖ್ಯತೆ ಕೊಡ್ತಾರೋ ಅಷ್ಟೇ ಆದ್ಯತೆ ತಮ್ಮ ಕುಟುಂಬಕ್ಕೂ ಕೊಡ್ತಾರೆ. ಪತ್ನಿ ರಾಧಿಕಾ ಪಂಡಿತ್, ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ಯಶ್ ಸಮಯ ಕಳೆಯುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತವೆ. ಇದನ್ನ ಪತ್ನಿ ರಾಧಿಕಾ ಹಾಗಾಗ ಸೋಶಿಯಲ್ ಮಿಡಿಗಳಲ್ಲಿ ಶೇರ್ ಮಾಡುತ್ತಿರುತ್ತಾರೆ.
ಇದೀಗ ಪುತ್ರಿ ಐರಾಗೆ ಯಶ್ ಕನ್ನಡದ ಅ ಆ ಇ ಈ ಹೇಳಿಕೊಟ್ಟಿದ್ದಾರೆ, ಯಶ್, ಮಗಳು ಐರಾಳನ್ನ ತೊಡೆಯ ಮೇಲೆ ಕೂರಸಿಕೊಂಡು ಕನ್ನಡ ವರ್ಣಮಾಲೆಯ ಅಕ್ಷರಗಳನ್ನ ಹೇಳಿಕೊಟ್ಟಿರುವ ವೀಡಿಯೋವನ್ನ ನಟಿ ರಾಧಿಕಾ ಪಂಡಿತ್ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ವೀಕೆಂಡ್ ಸ್ಪೆಷಲ್ ಕ್ಲಾಸ್ ಎಂದು ಬರೆದುಕೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಡಿಯೋವನ್ನ ವಿಕ್ಷಿಸಿದ್ದಾರೆ.
ಎರಡು ವಾರಗಳ ಹಿಂದಯಷ್ಟೆ ನಟ ಯಶ್ ಬರ್ತಡೇ ಆಚರಿಸಿಕೊಂಡಿದ್ದು 36 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ, ಕೋವಿಡ್ ಕಾರಣದಿಂದಾಗಿ ಅಭಿಮಾನಿಗಳ ಜೊತೆ ಗುರುತಿಸಿಕೊಂಡಿಲ್ಲ, ಯಶ್ ಹುಟ್ಟುಹಬ್ಬದಂದು ಕೆಜಿಎಫ್ ಚಿತ್ರತಂಡ ಸ್ಪೆಷಲ್ ಪೋಸ್ಟರ್ ಅನ್ನ ರಿಲೀಸ್ ಮಾಡಿತ್ತು. ಕೆಜಿಎಫ್ ಚಾಪ್ಟರ್ 2 ಗಾಗಿ ಇಡೀ ಚಿತ್ರರಂಗ ಕಾಯುತ್ತಿದ್ದು ಏಪ್ರಿಲ್ 14 ಕ್ಕೆ ತೆರೆಗೆ ಬರಲಿದೆ.