ಟಿ. ಎಸ್ ನಾಗಾಭರಣ ಅವರ ಸಿನಿಮಾ ಜರ್ನಿ..!!
ಚಂದನವನದ ಸ್ಟಾರ್ ನಿರ್ದೇಶಕ ಕಂಟೆಂಟ್ ಸಿನಿಮಾಗಳ ಮಾಸ್ಟರ್ ಮೈಂಡ್ ಟಿ. ಎಸ್. ನಾಗಾಭರಣ ಅವರಿಗೆ ಹುಟ್ಟುಹಬ್ಬದ ಸಂಭ್ರಮ.. 69 ವರ್ಷದ ನಟ ಹಾಗೂ ನಿರ್ದೇಶಕರಾದ ನಾಗಾಭರಣ ಅವರಿಗೆ ಗಣ್ಯರು , ಸಿನಿಮಾ ತಾರೆಯರು ,ಆಪ್ತರು , ನೆಟ್ಟಿಗರು ಶುಭಾಷಯಗಳ ಮಹಾಪೂರ ಹರಿಸುತ್ತಿದ್ದಾರೆ.
ಸುಮಾರು 36 ಸಿನಿಮಾಗಳನ್ನ ಮಾಡಿರುವ ನಾಗಾಭರಣ ಅವರು 10 ರಾಷ್ಟ್ರೀಯ ಪ್ರಶಸ್ತಿ , 23 ರಾಜ್ಯ ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡಿದ್ದಾರೆ..ಇವರ ಸಾರಥ್ಯದ 8 ಸಿನಿಮಾಗಳು ಪನೋರೋಮಾ ಅಂತರಾಷ್ಟ್ರೀಯ ಚಲನಚಿತ್ರ ಉತ್ಸವಕ್ಕೆ ಪ್ರವೇಶ ಪಡೆದಿದ್ದವು.
ಅಂದ್ಹಾಗೆ ಟಿ. ಎನ್ ನಾಗಾಭಾರಣ ಅಂದ್ರೆ ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಅವರು ನಿರ್ದೇಶನದ ಜೊತೆಗೆ ನಟನೆ , ರಚನೆ ,ನಿರ್ಮಾಣ, ರಂಗಮಂದಿರದಲ್ಲೂ ಗುರುತಿಸಿಕೊಂಡಿದ್ದಾರೆ. ಹಲವು ಧಾರಾವಾಹಿಗಳನ್ನ ನಾಗಾಭರಣ ಅವರು ನಿರ್ಮಿಸಿದ್ದಾರೆ. ದೂರದರ್ಶನ ವಾಹಿನಿಯಲ್ಲಿನ ಅನೇಕ ಕಾರ್ಯಕ್ರಮಳಿಗೂ ಬಂಡವಾಳ ಹೂಡಿದ್ದಾರೆ.
ಇವರ ಜನುಮದ ಜೋಡಿ ಸಿನಿಮಾ ಅಂತು ಸೂಪರ್ ಹಿಟ್ ಆಗಿದ್ದು ಸುಮಾರು 1 ವರ್ಷ ಥಿಯೇಟರ್ ಯಶಸ್ವಿ ಪ್ರದರ್ಶನ ಕಂಡಿತ್ತು. ಅವರು ನಿರ್ದೇಶಿಸಿರುವ ಒಟ್ಟಾರೆ 36 ಸಿನಿಮಾಗಳ ಪೈಕಿ 18 ಸಿನಿಮಾಗಳಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. 4 ಮಕ್ಕಳ ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ. 7 ಬಾರಿ ಫಿಲ್ಮ್ ಫೇರ್ ಅವಾರ್ಡ್ ಗಳನ್ನ ಪಡೆದಿದ್ದಾರೆ. ಚಿನ್ನಾರಿ ಮುತ್ತ ಸಿನಿಮಾ ಕೂಡ ಇವರ ಸಿನಿಮಾಗಳ ಪೈಕಿ ದೊಡ್ಡ ಯಶಸ್ಸು ತಂದುಕೊಟ್ಟ , ಅವಾರ್ಡ್ ವಿನ್ನಿಂಗ್ ಸಿನಿಮಾಗಳ ಪೈಕಿ ಒಂದು..
ಮೈಸೂರು ಮಲ್ಲಿಗೆ , ಚಿಗುರಿದ ಕನಸು , ನಾಗಮಂಡಲ, ಕಲ್ಲರಳಿ ಹೂವಾಗಿ ಅಂತಹ ಸಿನಿಮಾಗಳಿಗೆ ಜನರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ ಇವರ ಈ ಸಿನಿಮಾಗಳು ಬಾಲಿವುಡ್ ನಲ್ಲಿ ಬಂದ 1942 ಲವ್ ಸ್ಟೋರಿ , ಸ್ವದೇಶ್ , ಪಹೇಲಿ, ಭಜರಂಗಿ ಭಾಯ್ ಜನ್ ನಂತಹ ಸೂಪರ್ ಹಿಟ್ ಸಿನಿಮಾಗಳ ಸ್ಟೋರಿ ಲೈನ್ ಗೆ ಇನ್ಸಪಿರೇಷನ್ ಎನ್ನಲಾಗಿದೆ.
ಸುಮಾರು 4 ದಶಕಗಳಿಂದ ನಾಗಾಭರಣ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ಧಾರೆ. ಪ್ರಸ್ತುತ ಇವರು ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ.
ಮೊದಲಿಗೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ನಾಗಾಭರಣ ಅವರು ಅನೇಕ ನಾಕಕಗಳನ್ನ ನಿರ್ದೇಶಿಸಿದ್ದಾರೆ, ನಟಿಸಿದ್ದಾರೆ. ಸಂಗ್ಯಾ ಬಾಲ್ಯ, ಕಥಾಲೇ ಬೆಳಕು, ಶಕರಣ ಸಾರೋಟು, ಜೋಕುಮಾರಸ್ವಾಮಿಯಂತಹ ನಾಟಕಗಳಿಗೆ ಹೆಸರುವಾಸಿ.
ವಿದ್ಯಾರ್ಥಿಯಾಗಿದ್ದಾಗಲೇ ರಾಷ್ಟ್ರಪ್ರಶಸ್ತಿ ಪಡೆದ ಗಿರೀಶ್ ಕಾರ್ನಾಡ್ ನಿರ್ದೇಶನದ ಕಾಡು ಚಿತ್ರದ್ದಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಚೋಮನ ದುಡಿ ಚಿತ್ರಕ್ಕೆ ಬಿ ವಿ ಕಾರಂತರ ಜೊತೆಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ವಿದ್ಯಾರ್ಥಿಯಾಗಿ ಅವರು ತಮ್ಮ ಮೊದಲ ಚಲನಚಿತ್ರವನ್ನು ನಿರ್ದೇಶಿಸಿದರು, ಇದು 1979 ರ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್ ದತ್ ಪ್ರಶಸ್ತಿ, ಅತ್ಯುತ್ತಮ ಚಿತ್ರಕಥೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನೂ ಸಹ ನಾಗಾಭರಣ ಪಡೆದಿದ್ದಾರೆ.
ನಾಗಾಭರಣ ಅವರು ತೆರೆಮರೆಯಲ್ಲಿಯೂ ಕೆಲಸ ಮಾಡಿದ್ದಾರೆ, ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಬಿ.ವಿ.ಕಾರಂತ್, ಚಂದ್ರಶೇಖರ ಕಂಬಾರ ಮತ್ತು ಗಿರೀಶ್ ಕಾರ್ನಾಡರಂತಹ ಪ್ರಮುಖ ರಂಗಕರ್ಮಿಗಳೊಂದಿಗೆ ನಾಗಾಭರಣ ಅವರು ಒಡನಾಟವನ್ನು ಹೊಂದಿದ್ದರು.
ರಂಗಭೂಮಿಯಲ್ಲಿನ ಅವರ ಸಾಧನೆಗಾಗಿ ಅವರು ಭಾರತ ಸರ್ಕಾರದಿಂದ ಚಿನ್ನದ ಪದಕವನ್ನು ಪಡೆದಿದ್ದಾರೆ. ಅವರು ಬೆನಕ ಎಂಬ ನಾಟಕ ಸಂಸ್ಥೆಯ ಸ್ಥಾಪಕರು ಆಗಿದ್ದಾರೆ.
ಧಾರಾವಾಹಿಗಳು
ಆನ್ ಇಂಡಿಯನ್ ಇನ್ ಅಮೆರಿಕಾ, ಸಹಸ್ರಪಾನ್, ತೆನಾಲಿ ರಾಮ , ಓ ನನ್ನ ಬೆಳಕೇ , ಗಾನಯೋಗಿ ಪಂಚಾಕ್ಷರಿ ನಂತಹ ಧಾರಾವಾಹಿಗಳನ್ನ ಮಾಡಿದ್ದಾರೆ.
ಸಿನಿಮಾಗಳು
ಗ್ರಹಣ , ಬಂಗಾರದ ಜಿಂಕೆ , ಅನ್ವೇಷಣೆ, ಪ್ರಾಯ ಪ್ರಾಯ ಪ್ರಾಯ , ಬ್ಯಾಂಕರ್ ಮರ್ ಗಯಾ, ಸೇಡಿನ ಸಂಚು , ಆಸ್ಫೋಟ , ಸಂತ ಶಿಶುನಾಳ ಶರೀಫ , ಪ್ರೇಮಯೋಗಿ , ಆಕಸ್ಮಿಕ ಇನ್ನೂ ಹೀಗೆ ಒಟ್ಟು 36 ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ.
ನಟನೆ
ಇನ್ನೂ ಆಕ್ಸಿಡೆಂಟ್ , ನೀಲ , ಮಿ. ಗರಗಸ, ಕಿರಾತಕ , ಕೆಜಿಎಫ್ , ಆದಿ ಶಂಕರಾಚಾರ್ಯ , ಉಪ್ಪಿನ ಕಾಗದ , ಜೈಲಲಿತಾ, ಕಂಸಾಲೆ ಕೈಸಾಲೆ, ವಸುಂಧರಾ ಸಿನಿಮಾಗಳಲ್ಲಿ ನಟಿಸಿದ್ದಾರೆ.