ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ಬಾಲಿವುಡ್ ಸ್ಟಾರ್ ಗಳಿವರು….
ಇತ್ತೀಚೆಗಷ್ಟೆ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದುಕೊಂಡು ಸುದ್ದಿಯಾಗಿದ್ದರು, ಬಾಲಿವುಡ್ ಗೂ ಬಾಡಿಗೆ ತಾಯ್ತನಕ್ಕೂ ಬಿಡದ ನಂಟಿದೆ, ಅಮೀರ್ ಮತ್ತು ಶಾರುಖ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಬಾಡಿಗೆ ತಾಯ್ತನದಿಂದ ಮಗು ಪಡೆದುಕೊಂಡಿದ್ದಾರೆ. ಬಾಡಿಗೆ ತಾಯ್ತನದ ಚಿತ್ರಗಳ ಮೂಲಕ ತಮ್ಮ ಮಗುವನ್ನು ಸ್ವಾಗತಿಸುವ ಬಾಲಿವುಡ್ ತಾರೆಯರು ಮತ್ತು ಪಟ್ಟಿ ಇಲ್ಲಿದೆ.
ಬಹುಭಾಷಾ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ಶುಕ್ರವಾರ, ಜನವರಿ 21 ರಂದು, ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ್ದಾಗಿ ಘೋಷಿಸಿದ್ದರು.
ನಟ ಶಾರುಖ್ ಖಾನ್ ಮತ್ತು ಗೌರಿ ಖಾನ್ 2013 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮೂರನೇ ಮಗುವನ್ನು ಹೊಂದಿದ್ದರು.
ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರ ಮಕ್ಕಳಾದ ಯಶ್ ಮತ್ತು ರೂಹಿ ಕೂಡ ಬಾಡಿಗೆ ತಾಯ್ತನದಲ್ಲಿ ಜನಿಸಿದವರು
ಅಮೀರ್ ಖಾನ್ ಮತ್ತು ಕಿರಣ್ ರಾವ್ ಬಾಡಿಗೆ ತಾಯ್ತನದಲ್ಲಿ ಆಜಾದ್ ಎಂಬ ಪುತ್ರನನ್ನ ಪಡೆದುಕೊಂಡಿದ್ದರು.
ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ ತಮ್ಮ ಮೊದಲ ಪುತ್ರಿ ನಿಶಾಳನ್ನು ದತ್ತು ಪಡೆದರು. ನಂತರ ಆಶರ್ ಮತ್ತು ನೋಹನಿ ಎಂಬ ಮಕ್ಕಳಾದರು.
ನಿರ್ದೇಶಕಿ ಫರಾ ಖಾನ್ ಪ್ರಾಣಳ್ ಶಿಶು ವ್ಯವಸ್ಥೆಯ ಮೂಲಕ ಮೂರು ಮಕ್ಕಳನ್ನು ದತ್ತು ಪಡೆದಿದ್ದಾರೆ.
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಸ್ವಾಗತಿಸಿದ್ದರು.
ಇತ್ತೀಚೆಗೆ, ನಟಿ ಪ್ರೀತಿ ಜಿಂಟಾ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಕುಟುಂಬಕ್ಕೆ ಸ್ವಾಗತಿಸಿದರು.
ನಿರ್ಮಾಪಕಿ ಏಕ್ತಾ ಕಪೂರ್ ಕೂಡ ಬಾಡಿಗೆ ತಾಯ್ತನದಿಂದ ಮಗು ಪಡೆದಿದ್ದಾರೆ.