ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ Rakshith Shetty ಅಭಿನಯದ ಬಹುನಿರೀಕ್ಷಿತ ಚಿತ್ರ ‘777 ಚಾರ್ಲಿ’ 777 Charlie ಸಿನಿಮಾ, ಸೆನ್ಸಾರ್ ಮುಗಿಸಿಕೊಂಡಿದೆ. ಚಿತ್ರ ಸೆನ್ಸಾರ್ನಲ್ಲಿ ಪಾಸ್ ಆಗಿದ್ದು, ಯು/ಎ ಸರ್ಟಿಫಿಕೆಟ್ ಪಡೆದುಕೊಂಡಿದೆ. ಹಾಡುಗಳು ಮತ್ತು ಮೇಕಿಂಗ್ ನಿಂದ ಗಮನ ಸೆಳೆದಿರುವ 777 ಚಾರ್ಲಿ ಶೀಘ್ರದಲ್ಲೇ ತೆರೆಗೆ ಬರಲಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ನಾಯಿಯ ಆಗಮನದಿಂದ ಆತನ ಬಾಳಲ್ಲಿ ನಡೆಯುವ ಬದಲಾವಣೆಗಳು ಏನೇನೂ ಅನ್ನುವುದನ್ನ ಈ ಚಿತ್ರದಲ್ಲಿ ನಾವು ಕಾಣಬಹುದು, ಕಳೆದ ಎರಡು ವರ್ಷಗಳಿಂದ ಚಿತ್ರೀಕರಣದ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲು ರೆಡಿಯಾಗುತ್ತಿದೆ.
ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಸಂಗೀತ ಶೃಂಗೇರಿ ನಟಿಸಿದ್ದಾರೆ, ರಾಜ್ ಬಿ ಶೆಟ್ಟಿ Raj B Shetty ದಾನಿಷ್ ಸೇಠ್ Danish Sait ಬಾಸಬಿ ಸಿಂಹ್ ಬೇಭಿ ಶಾರ್ವರಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ನಿರ್ದೇಶಕ ಕಿರಣ್ ರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅರವಿಂದ್ ಕಶ್ಯಪ್ ಛಾಯಾಗ್ರಹಣದ ಹೊಣೆ ಹೊತ್ತಿದ್ದರೆ ನೊಬಿನ್ ಪೌಲ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 21 ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು ಆದರೆ ಓಮಿಕ್ರಾನ್ ಆತಂಕದಿಂದ ಚಿತ್ರಮಂದಿರ ವಿಳಂಬವಾಗಿತ್ತು. ಈ ಕುರಿತು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ ತಿಳಿಸಿದ್ದರು. “ ನಿಮ್ಮ ಪ್ರೀತಿ ಬೆಂಬಲಕ್ಕೆ ನಾವು ಅಭಾರಿ ನಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನ ಮುಂದಡಲಾಗಿದೆ ಎಂದು ತಿಳಿಸಿದ್ದರು, ಪರಮ್ ವಾ ಸ್ಟೂಡಿಯೋಸ್ Paramvah Studios ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಚಿತ್ರದ ಹೊಸ ರೀಲೀಸ್ ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.