ಇದೀಗ ಭಾರತೀಯ ಚಿತ್ರರಂಗದ ಮೂವಿ ಮೇಕಿಂಗ್ ತುಂಬಾ ಬದಲಾಗಿದೆ, ಹಲವು ಇಂಡಸ್ಟ್ರಿ ಗಳು ಸಿನಿಮಾವನ್ನ ಕೇವಲ ಪ್ರಾದೇಶಿಕತೆ ಗೆ ಅಷ್ಟೆ ಸೀಮಿತವಲ್ಲದೆ, ಇಡೀ ಭಾರತದಾದ್ಯಂತ ಸಿನಿಮಾ ಬಿಡುಗಡೆ ಮಾಡಲು ಮಂದಾಗುತ್ತಿದ್ದಾರೆ. ಕನ್ನಡದಲ್ಲೂ ಸಹ ಪ್ಯಾನ್ ಇಂಡಿಯ ಮೂವಿಗಳ ಸಂಖ್ಯೆ ಏನೂ ಕಡಿಮೆಯಾಗಿಲ್ಲ ಕೆಜಿಎಫ್ ನಂತರ ಹಲವು ಸಿನಿಮಾಗಳು ತಾಮುಂದು ನಾ ಮುಂದು ಎನ್ನುವಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಯಶ್ ಉಪೇಂದ್ರ ಸುದೀಪ್ ಸೇರಿದಂತೆ ಹಲವು ನಟರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರಗಳನ್ನ ಮಾಡುತ್ತಿದ್ದಾರೆ.
ಈ ಸಾಲಿಗೆ ಈಗ ಸೆಂಚುರಿ ಸ್ಟಾರ್ ಶಿವಣ್ಣ ಸಹ ಸೇರಿಕೊಂಡಿದ್ದಾರೆ. ಹಿಂದೆ ನಟ ಡಾ ಶಿವರಾಜ್ ಕುಮಾರ್ ಅಭಿನಯದ ಹಲವು ಸಿನಿಮಾಗಳು ಕನ್ನಡ ಅಲ್ಲದೆ ತೆಲುಗಿನಲ್ಲಿ ರಿಲೀಸ್ ಆಗಿದ್ದವು. ಇದೇ ಮೊದಲ ಭಾರಿಗೆ ಪ್ಯಾನ್ ಇಂಡಿಯಾ ಲೆವಲ್ ನ ಸಿನಿಮಾದಲ್ಲಿ ನಟಿಸಲು ಶಿವಣ್ಣ ಹೂಂ ಅಂದಿದ್ದಾರಂತೆ. ಉಪೇಂದ್ರ ಅವರಿಗೆ ಬುದ್ದಿವಂತ 2 ಚಿತ್ರ ನಿರ್ದೇಶಸುತ್ತಿರುವ ನಿರ್ದೇಶಕ ಆರ್ ಜಯರಾಂ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. 1970 ಇಸವಿಯ ರೆಟ್ರೋ ಶೈಲಿ ಕಥೆಯನ್ನ ಒಳಗೊಂಡಿರುವ ಸಿನಿಮಾದ ಸ್ಟೋರಿಯನ್ನ ಶಿವಣ್ಣ ಹೂ ಅಂದಿದ್ದಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಚಂದನ್ ಶೆಟ್ಟಿ ಮತ್ತು ರಚಿತಾ ರಾಮ್ ಅಭಿನಯದ ಲಕ ಲಕ ಲ್ಯಾಂಬೋರ್ಗಿನಿ ಹಾಡಿಗೆ ಬಂಡವಾಳ ಹೂಡಿದ್ದ ಆರ್ ಕೇಶವ್ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಬಿಂದಾ ಮೂವಿಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.