Ambareesh fans oppose to Renaming one of the Bangalore road as Puneeth Rajkumar road
ಬೆಂಗಳೂರು: ನಟ ರೆಬಲ್ ಸ್ಟಾರ್ ಅಂಬರೀಷ್ Ambareesh ಮತ್ತು ಪವರ್ ಸ್ಟಾರ್ ಪುನೀತ ರಾಜಕುಮಾರ Puneeth Rajkumar ಕನ್ನಡ ಚಿತ್ರರಂಗದ ಶ್ರೇಷ್ಠ ನಟರು. ಹಾಗೇ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯವಿತ್ತು. ಆದರೆ ಇವರ ಅಭಿಮಾನಿಗಳ ಮಧ್ಯೆ ರಸ್ತೆಗೆ ಹೆಸರಿಡುವ ವಿಚಾರದಲ್ಲಿ ಶೀತಲ ಸಮರ ಶುರುವಾದಂತೆ ಕಾಣುತ್ತಿದೆ. Cini Bazaar
ಹೌದು ಅಕ್ಟೋಬರ್ 29 ರಂದು ನಟ ಪುನಿತ ರಾಜಕುಮಾರ ಮರಣ ಹೊಂದಿದರು. ಇವರು ತೀರಿಕೊಂಡ ಬಳಿಕ ಅನೇಕ ರಸ್ತೆಗಳಿಗೆ ಇವರ ಹೆಸರನ್ನು ಇಡಲಾಗಿದೆ. ಈಗ ಪುನಿತ ಹೆಸರನ್ನು ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಇಡಲು ಅಭಿಮಾನಿಗಳು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಬಿಬಿಎಂಪಿ ಒಪ್ಪಿದ್ದು, ಈ ಬಗ್ಗೆ ಇತ್ತೀಚಿಗೆ ಜಾಹೀರಾತು ನೀಡಿತ್ತು. ಈ ನಿರ್ಧಾರಕ್ಕ ಆಕ್ಷೇಪಣೆಗಳಿದ್ದರೆ ಜನೆವರಿ 29ರ ಒಳಗೆ ಸಲ್ಲಿಸಬಹುದು ಎಂದು. ಇದಕ್ಕೆ ಅಂಬಿ ಅಭಿಮಾನಿಗಳು ಆಕ್ಷೇಪಣೆ ಸಲ್ಲಿಕೆ ಮಾಡಿದ್ದರೆ. ಇದು ಪುನೀತ ಹಾಗೂ ಅಂಬರೀಷ್ ಅಭಿಮಾನಿಗಳ ಮಧ್ಯೆ ಶೀತಲ ಸಮರ ಶುರುವಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಪುನಿತ, ಅಂಬರೀಷ್ ಅವರನ್ನು ಮಾಮ ಅಂತ ಕರೆಯುತ್ತಿದ್ದರು. ಇವರಿಬ್ಬರು ಒಂದೇ ಮನೆಯವರಂತೆ ಇದ್ದರು.
ಆದರೆ ಇಬ್ಬರೂ ಮೃತಪಟ್ಟ ನಂತರ ರಸ್ತೆಗೆ ಹೆಸರಿಡುವ ವಿಚಾರದಲ್ಲಿ ಅಭಿಮಾನಿಗಳ ಮಧ್ಯೆ ಪ್ರತಿಷ್ಠೆ ಶುರುವಾಗಿದೆ.‘ನಾಯಂಡಹಳ್ಳಿಯಿಂದ NayandaHalli ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್ ಹೆಸರು ಇಡಬಾರದು. ಇದಕ್ಕೆ ಅಂಬಿ Ambi Fans ಹೆಸರು ಇಡಬೇಕು. ಸದ್ಯ ಈ ವಿಚಾರ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವುದೇ ಸಮಯದಲ್ಲಿ ಸ್ಪೋಟಗೊಳ್ಳುವ ಸಾಧ್ಯತೆ ಇದೆ. ಈ ವಿಚಾರಕ್ಕೆ ಅಂಬರೀಷ್ ಪತ್ನಿ, ನಟಿ, ಸಂಸದೆ ಸುಮಲತಾ ಅಂಬರೀಷ್ ಯಾವ ರೀತಿಯಾಗಿ ಪ್ರತಿಕ್ರಯಿಸುತ್ತಾರೆ ಕಾದು ನೋಡಬೇಕಿದೆ.