ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿದ್ದಾರೆ ಆ ನೋವನ್ನ ಇಡೀ ರಾಜ್ ಕುಟುಂಬವಷ್ಟೆ ಅಲ್ಲ ಅಭಿಮಾನಿಗಳಿಗೂ ಮರೆಯುದಕ್ಕೆ ಸಾಧ್ಯವಾಗುತ್ತಿಲ್ಲ. ಕೊನೆಯದಾಗಿ ಅಪ್ಪು ಅವರನ್ನ ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್ ಚಿತ್ರಿಕರಣವನ್ನ ಮುಗಿಸಿಕೊಂಡು ತೆರೆಗೆ ಬರಲು ರೆಡಿಯಾಗಿದೆ. ಚಿತ್ರದ ಪ್ರಚಾರಾರ್ಥವಾಗಿ ಚಿತ್ರತಂಡ ಸಿನಿಮಾದ ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡುತ್ತಿದೆ. 26 ನೇ ಜನವರಿ ಬುಧವಾರದಂದು ಅಂದ್ರೆ ನಾಳೆ 11 ಗಂಟೆಗೆ ಅಪ್ಪು ಅಭಿನಯದ ಜೇಮ್ಸ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.
ಇನ್ನೂ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗು ರಾಗವೇಮದ್ರ ರಾಜ್ ಕುಮಾರ್ ಅವರು ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ರಾಜ್ ಕುಟುಂಬದ ಮೂರು ಮಕ್ಕಳು ಒಂದೇ ಚಿತ್ರದಲ್ಲಿ ನಟಿಸಬೆಕು ಎನ್ನುವುದು ಪಾರ್ವತಮ್ಮ ರಾಜ್ ಕುಮಾರ್ ಅವರ ಕನಸಾಗಿತ್ತಂತೆ. ಅಪ್ಪು ಕೊನೆಯ ಚಿತ್ರದ ಮೂಲಕ ಈ ಆಸೆ ಈಡೇರಲಿದೆ
ಈ ಬಗ್ಗೆ ಮಾತನಾಡಿರುವ ಶಿವಣ್ಣ ನಾವು ಈ ಚಿತ್ರದಲ್ಲಿ ನಟಿಸಿರುವುದು ಪ್ರಚಾರಕ್ಕಾಗಿ ಅಲ್ಲ ಅಪ್ಪು ಚಿತ್ರಕ್ಕೆ ಪ್ರಚಾರ ಮಾಡುವವರು ಯಾರು ಇಲ್ಲ ಜೇಮ್ಸ್ ಚಿತ್ರದಲ್ಲಿ ಈ ಪಾತ್ರಗಳು ಮೊದಲೇ ಫಿಕ್ಸ್ ಆಗಿದ್ವು ಎಂದು ಶಿವಣ್ಣ ಸ್ಪಷ್ಟಪಡಿಸಿದ್ದಾರೆ. ಇನ್ನ ಅಪ್ಪು ಪತ್ನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಅವರ ಪಿ ಆರ್ ಕೆ ಬ್ಯಾನರ್ ನಡಿಯಲ್ಲಿ ನಿರ್ಮಿಸಲಾಗುತ್ತಿದ್ದ ಚಿತ್ರಗಳನ್ನ ನೊಡಿಕೊಳ್ಳುತ್ತಿದ್ದಾರೆ. ಆ ಸಿನಿಮಾಗಳನ್ನ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆ ಗೊಳಿಸಲು ಸಜ್ಜಾಗುತ್ತಿದ್ದಾರೆ…