ಬಾಲಿವುಡ್ Bollywood ನಾ ಬ್ಯೂಟಿಫುಲ್ ಬೆಡಗಿ ಕತ್ರಿನಾ ಕೈಫ್ Katrina Kaif ಪ್ರಸ್ತುತ ಮಾಲ್ಡೀವ್ಸ್ನಲ್ಲಿದ್ದಾರೆ, ಜಾಹೀರಾತುಗಾಗಿ ಶೂಟಿಂಗ್ ಗಾಗಿ ಮಾಲ್ಡೀವ್ಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಮಾಲ್ಡೀವ್ಸ್ Maldives ನ ಸುಂದರ ಪೋಟೋ ಗಳನ್ನ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಾಲಡ್ವೀಸ್ ನ ರೆಸಾರ್ಟ್ ಒಂದರಲ್ಲಿ ಕತ್ರಿನಾ ತನ್ನ ಕೈಯಲ್ಲಿ ಕೆಲವು ಗಿಳಿಗಳು ಕುಳಿತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕೈಯಲ್ಲಿ ಕಾಳುಗಳನ್ನು ಹಿಡಿದುಕೊಂಡು ಗಿಳಿಗಳಿಗೆ ಆಹಾರ ನೀಡುತ್ತಿರುವ ವೀಡಿಯೋ ಇದಾಗಿದೆ. ಅಲ್ಲದೆ, ವರ್ಣರಂಜಿತ ಬಿಕಿನಿಯಲ್ಲಿರುವ ಚಿತ್ರಗಳನ್ನು ಸಹ ನಟಿ ಹಂಚಿಕೊಂಡಿದ್ದಾರೆ ಮತ್ತು ಪೋಸ್ಟ್ಗೆ “ಸೀಸ್ ದಿ ಡೇ” ಎಂದು ಶೀರ್ಷಿಕೆ ನೀಡಿದ್ದಾರೆ.
ಕತ್ರಿನಾ ಅವರ ಪತಿ ವಿಕ್ಕಿ ಕೌಶಲ್ Vicky ಅವರು ಸಾರಾ ಅಲಿ ಖಾನ್ Sara Ali Khan ಅವರೊಂದಿಗೆ ಲಕ್ಷ್ಮಣ್ ಉಟೇಕರ್ ಅವರ ಮುಂದಿನ ಚಿತ್ರದ ಚಿತ್ರೀಕರಣಕ್ಕಾಗಿ ಇಂದೋರ್ನಲ್ಲಿ ಬೀಡು ಬಿಟ್ಟಿದ್ದಾರೆ.ಕತ್ರಿನಾ ಮತ್ತು ವಿಕ್ಕಿ ಕಳೆದ ವರ್ಷ ಡಿಸೆಂಬರ್ 9 ರಂದು ಸವಾಯಿ ಮಾಧೋಪುರದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ವಿವಾಹವಾಗಿದ್ದರು. ವರದಿಗಳ ಪ್ರಕಾರ, ಕತ್ರಿನಾ ಟಿವಿ ಜಾಹೀರಾತಿನ ಚಿತ್ರೀಕರಣಕ್ಕಾಗಿ ಮಾಲ್ಡೀವ್ಸ್ಗೆ ಹೋಗಿದ್ದಾರೆ. ಅವರು ಇಲ್ಲಿ ತಂಪು ಪಾನಿಯಾ ಒಂದರ ಬ್ರಾಂಡ್ ಶೂಟಿಂಗ್ ಮಾಡಲಿದ್ದಾರೆ. ಕತ್ರಿನಾ ಈ ಬ್ರಾಂಡ್ನೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದು, ಕೆಲವು ದಿನಗಳ ಕಾಲ ಇಲ್ಲಿಯೇ ಇದ್ದು ನಂತರ ಭಾರತಕ್ಕೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.