ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಅಲ್ಲು ಅರ್ಜುನ್ ಕ್ರೇಜ್ ಭಾರತದಾದ್ಯಂತ ಜೋರಾಗಿಯೇ ಇದೆ.. ಅವರಿಗೂ ಅವರದ್ದೇ ಆದ ದೊಡ್ಡ ಅಭಿಮಾನಿಗಳ ಬಳಗವಿದೆ. ಪುಷ್ಪರಾಜನಾಗಿ ವಿಭಿನ್ನ ಲುಕ್ , ಮ್ಯಾನರಿಸಮ್ ಟ್ರೈ ಮಾಡಿ ಸೈ ಎನಿಸಿಕೊಂಡಿರುವ ಅಲ್ಲುಗೆ ಫ್ಯಾನ್ ಪಾಲೋವರ್ಸ್ ಕಡಿಮೆಯೇನಿಲ್ಲ.. ಅವರ ಪುಷ್ಪ 2 ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಮತ್ತೊಂದೆಡೆ ಈಗಾಗಲೇ ಬಾಹುಬಲಿ ದಂತಹ ಸೂಪರ್ ಹಿಟ್ ಸೆನ್ಷೇಷನ್ ಬ್ಲಾಕ್ ಬಾಸ್ಟರ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಪ್ರಭಾಸ್ ಕ್ರೇಜ್ ಕೂಡ ಏನ್ ಕಮ್ಮಿ ಇಲ್ಲ.. ಸದ್ಯ ರಾಧೆ ಶ್ಯಾಮ್ , ಆದಿಪುರುಷ್ , ಸ್ಪಿರಿಟ್ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ರಾಧೆ ಶ್ಯಾಮ್ ಸಿನಿಮಾ ರಿಲೀಸ್ ಆಗಗಬೇಕಿದ್ದು , ಭಾರತೀಯ ಸಿನಿಮಾರಂಗದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ ಕೂಡ ಹೌದು..
ಇಬ್ಬರೂ ಸ್ಟೈಲೀಶ್ ಆಗಿಯೂ , ಮಾಸ್ ಆಗಿಯೂ ಗುರತಿಸಿಕೊಂಡವರೇ.. ಟಾಲಿವುಡ್ ಮೂಲಕವೇ ಸ್ಟಾರ್ರ ಆಗಿ ಈಗ ಭಾರತದ ಬಿಗ್ ಸ್ಟಾರ್ ಆಗಿ ಗುರುತಿಸಿಕೊಂಡವರು.. ಆದ್ರೀಗ ಪ್ರಭಾಸ್ ಹಾಗೂ ಅಲ್ಲು ಫ್ಯಾನ್ಸ್ ನಡುವೆ ಇದ್ದಕ್ಕಿದ್ದಂತೆ ಕಿಚ್ಚು ಹೊತ್ತಿದೆ.. ಇಬ್ಬರ ಫ್ಯಾನ್ಸ್ ಗಳು ಸಹ ಪರಸ್ಪರ ಮತ್ತೊಬ್ಬ ಸ್ಟಾರ್ ಗಳ ಮೇಲೆ ಕಿಡಿಕಾರುತ್ತಾ ಟ್ರೋಲ್ ಮಾಡಲಾರಂಭಿಸಿದ್ದಾರೆ.. ಅಷ್ಟಕ್ಕೂ ಸೌತ್ ಇಂಡಿಯಾ ತಾಕತ್ತನ್ನ ಬಾಲಿವುಡ್ ಗೆ ತೋರಿಸಿದ ಈ ಇಬ್ಬರು ಸ್ಟಾರ್ ಗಳ ಫ್ಯಾನ್ಸ್ ವಾರ್ ಗೆ ಕಾರಣವೇನು..??
allu arjun real star , prabhas lottery star – fan war
ಅಲ್ಲು ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಪ್ರಭಾಸ್ ರನ್ನ ಲಾಟ್ರಿ ಫ್ಯಾನ್ಸ್, ಅಲ್ಲು ರಿಯಲ್ ಫ್ಯಾನ್ಸ್ ಎಂದು ಹೇಳಲಾರಂಭಿಸಿದ್ದಾರೆ. ಮತ್ತೊಂದೆಡೆ ಪ್ರಭಾಸ್ ಫ್ಯಾನ್ಸ್ ಕೂಡ ಅಲ್ಲು ಅರ್ಜುನ್ ಅವರನ್ನ ತೆಗಳುತ್ತಾ ಅವರ ಅಭಿಮಾನಿಗಳ ವಿರುದ್ಧ ಮುಗಿಬಿದ್ದಿದ್ದಾರೆ. ಪುಷ್ಪ ಸಿನಿಮಾ ಬಾಲಿವುಡ್ ನಲ್ಲಿ ಬಾಕ್ಸ್ ಆಫೀಸ್ ನಲ್ಲಿ 80 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿದೆ. ಒಟ್ಟಾರೆ ವಿಶ್ವಾದ್ಯಂತ ಸುಮಾರು 400 ಕೋಟಿ ಕಲೆಕ್ಷನ್ ಮಾಡಿದೆ.. ಆದ್ರೆ ಸದ್ಯಕ್ಕಂತೂ ಯಾವುದೇ ಸೌತ್ ಅಲ್ಲ ಬಾಲಿವುಡ್ ಸಿನಿಮಾಗಳಿಂದಲೂ ಬಾಹುಬಲಿ ಸಿನಿಮಾದ ರೆಕಾರ್ಡ್ ಅಳಿಸಿ ಹಾಕೋದಕ್ಕೆ ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಇದೇ ಸಿನಿಮಾದಿಂದಲೇ ಪ್ರಭಾಸ್ ಇಂಡಿಯಾದ ಬಿಗ್ ಸ್ಟಾರ್ ಆದ್ರು..
ಅಲ್ಲು ಅರ್ಜುನ್ 100 ಕೋಟಿ ಸಂಭಾವನೆ ಚಿತ್ರಕ್ಕೆ ನಿರ್ದೇಶಕ ಫಿಕ್ಸ್!
ಆದ್ರೀಗ ಇದೇ ವಿಚಾರವಾಗಿ ಅಲ್ಲು ಫ್ಯಾನ್ಸ್ ಪ್ರಭಾಸ್ ಅವರನ್ನ ಲಾಟ್ರಿ ಸ್ಟಾರ್ ಲಕ್ಕಿ ಸ್ಟಾರ್ ಅಂತೆಲ್ಲಾ ಟ್ರೋಲ್ ಮಾಡ್ತಿದ್ದಾರೆ.. ರಾಜಮೌಳಿಯಿಂದಲೇ ಪ್ರಭಾಸ್ ಗೆ ಬಿಗ್ ಸ್ಟಾರ್ ಆಗಿದ್ದು ಅಂತಿದ್ದಾರೆ. ಇದು ಪ್ರಭಾಸ್ ಅಭಿಮಾನಿಗಳನ್ನ ಕೆರಳಿಸಿದೆ. ಅಲ್ಲು ಅಭಿಮಾನಿಗಳು ವಾದಿಸುವುದು , ಬಾಹುಬಲಿ ಸಿನಿಮಾಗಿಂತ ಮುಂಚೆ ಪ್ರಭಾಸ್ ದಕ್ಷಿಣ ಬಾರತದವರಿಗಷ್ಟೇ ಗೊತ್ತಿದ್ರು ಎನ್ನುವುದು.. ಆದ್ರೆ ಅಲ್ಲು ಪುಷ್ಪ ಗಿಂತಲೂ ಮುಂಚೆಯಿಂದಲೇ ಇಡೀ ಭಾರತದಾದ್ಯಂತ ಪರಿಚಯವಾಗಿದ್ದರು.. ಪ್ರಭಾಸ್ ಗೆ ಗಿಂತಲೂ ಅಲ್ಲು ಒಳ್ಳೆ ಡ್ಯಾನ್ಸರ್ , ಒಳ್ಳೆ ನಟ , ಆಲ್ ರೌಂಡರ್ ಎನ್ನುವುದು.. ಹೀಗಾಗಿ ಅಲ್ಲು ರಿಯಲ್ ಸ್ಟಾರ್ , ಪ್ರಭಾಸ್ ಲಾಟರಿ ಸ್ಟಾರ್ ಎಂದು ಟ್ರೋಲ್ ಮಾಡ್ತಿದ್ಧಾರೆ..
ಮತ್ತೊಂದೆಡೆ ಪ್ರಭಾಸ್ ಅವರನ್ನ ಟಾರ್ಗೆಟ್ ಮಾಡ್ತಿರೋದಕ್ಕೆ ಸಿಟ್ಟಾಗಿರುವ ಪ್ರಭಾಸ್ ಫ್ಯಾನ್ಸ್ ಅಲ್ಲು ಅರ್ಜುನ್ ಗೆ ನಾವು ಸದಾ ಗೌರವ ಕೊಟ್ಟಿದ್ದು , ನೀವೂ ಕೂಡ ಗೌರವಿಸಿ ಎಂದು ಅಸಮಾಧಾನ ಹೊರ ಹಾಕ್ತಿದ್ದಾರೆ.. ಅಷ್ಟೇ ಅಲ್ದೇ ಕೆಲ ಪ್ರಭಾಸ್ ಅಭಿಮಾನಿಗಳು ಇನ್ಮುಂದೆ ಅಲ್ಲು ಸಿನಿಮಾಗಳನ್ನ ನೋಡುವುದಿಲ್ಲ ಎಂದೂ ಸಹ ಹೇಳ್ತಿದ್ರೆ , ಮತ್ತೆ ಕೆಲವರು ಅಲ್ಲು ಅವರನ್ನ ತಮ್ಮ ಕಮೆಂಟ್ ನಲ್ಲಿ ಟ್ಯಾಗ್ ಮಾಡಿ ವಾಗ್ದಾಳಿ ನಡೆಸ್ತಾಯಿದ್ದಾರೆ. ಅಲ್ಲದೇ ಇನ್ನೂ ಅನೇಕರು ಸಾಹೋ ಹಾಗೂ ಪುಷ್ಪ ಕಲೆಕ್ಷನ್ಸ್ , ಒಟಿಟಿಯಲ್ಲಿ ರೇಟಿಂಗ್ಸ್ ಎಲ್ಲವನ್ನೂ ತಾಳೆ ಹಾಕ್ತಾ ಇದ್ರೆ , ದಿನದಿಂದ ದಿನಕ್ಕೆ ಫ್ಯಾನ್ ವಾರ್ ಕಾವು ಪಡೆಯುತ್ತಲೇ ಇದೆ.