ರಾಜ್ಕುಮಾರ್ ರಾವ್ ಮತ್ತು ಭೂಮಿ ಪೆಡ್ನೇಕರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಬದಾಯಿ ದೋ ಚಿತ್ರದ ಟ್ರೈಲರ್ ಮಂಗಳವಾರ ಬಿಡುಗಡೆಯಾಗಿದ್ದು, ಭರವಸೆ ಮೂಡಿಸಿದೆ. ಚಿತ್ರದಲ್ಲಿ ಪಾತ್ರಗಳೆರಡೂ LGBTQ+ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 30 ರ ಹರೆಯದ ಎರಡೂ ಪಾತ್ರಗಳು ತಮ್ಮ ತಮ್ಮ ಪ್ರೀತಿಯ ಆಸಕ್ತಿಗಳೊಂದಿಗೆ ಇರಲು ಬಯಸುತ್ತಿದ್ದರೇ ಜೊತೆಗೆ ಮದುವೆಯಾಗಲು ಸಾಮಾಜಿಕ ಒತ್ತಡಕ್ಕೆ ಸಿಲುಕಿರುವ ಕಥೆ ಇದಾಗಿದೆ.
ರಾಜ್ಕುಮಾರ್ ರಾವ್, ಸಲಿಂಗಕಾಮಿ ಪೋಲೀಸ್ ಪಾತ್ರದಲ್ಲಿ, ಭೂಮಿ ಪೆಡ್ನೇಕರ್ ಇನ್ನೊಬ್ಬ ಮಹಿಳೆಯೊಂದಿಗೆ ಡೇಟಿಂಗ್ ಮಾಡುತ್ತಿರುವ ರೀತಿ ಟ್ರೇಲರ್ ನಲ್ಲಿ ತೋರಿಸಲಾಗಿದೆ. ಭೂಮಿ ಪೆಡ್ನೇಕರ್ ಮತ್ತು ರಾಜ್ಕುಮಾರ್ ರಾವ್ ಹೊರತುಪಡಿಸಿ, ಬಧಾಯಿ ದೋ ಸೀಮಾ ಪಹ್ವಾ, ಶೀಬಾ ಚಡ್ಡಾ, ಲವ್ಲೀನ್ ಮಿಶ್ರಾ, ನಿತೇಶ್ ಪಾಂಡೆ, ಶಶಿ ಭೂಷಣ್, ಚುಮ್ ದರಾಂಗ್ ಮತ್ತು ದೀಪಕ್ ಅರೋರಾ ಪ್ರಮುಖ ಪಾತ್ರಗಳಲ್ಲಿದ್ದಾರೆ.a