ಗಾಯಕ Singer ಸಿದ್ ಶ್ರೀರಾಮ್ Sid Sriram ಬಗ್ಗೆ ವಿಶೇಷವಾಗಿ ಹೇಳುವುದೇ ಬೇಕಾಗಿಲ್ಲ . ತಮ್ಮ ಧ್ವನಿಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವಂತಹ ಧ್ವನಿಯಿಂದ ಹೊಸ ತಲೆಮಾರಿನ ಗಾಯಕರಲ್ಲಿ ಚಿರಪರಿಚಿತರಾಗಿದ್ದಾರೆ. ತಮಿಳುನಾಡಿನಲ್ಲಿ ಹುಟ್ಟಿ ಅಮೆರಿಕದಲ್ಲಿ ಬೆಳೆದ ಸಿದ್ ಶ್ರೀರಾಮ್ ತೆಲುಗಿನಲ್ಲಿ ತಮ್ಮದೇ ಶೈಲಿಯಲ್ಲಿ ಹಾಡುಗಳನ್ನು ಹಾಡುವ ಮೂಲಕ ಸಂಗೀತ ಪ್ರಿಯರ ಮನಸ್ಸು ಗೆದ್ದಿದ್ದಾರೆ.
‘ಡಿಯರ್ ಕಾಮ್ರೇಡ್’ Dear Comrade ಸಿನಿಮಾದಿಂದ ಆರಂಭವಾದ ಸಿದ್ ಶ್ರೀರಾಮ್ ಅವರ ಹವಾ ಪುಷ್ಪದ ಪುಷ್ಪಾದ ಶ್ರೀವಲ್ಲಿವರೆಗೆ Srivalli ತಮದು ನಿಲ್ಲಿಸಿದೆ. ಸಮಾಜವರಗಮನದಿಂದ ಹಿಡಿದು ಇತ್ತೀಚಿನ ಪುಷ್ಪ Pushpa ಚಿತ್ರದಲ್ಲಿನ ಶ್ರೀವಲ್ಲಿ ವರೆಗೆ ಹಾಡುಗಳೆಲ್ಲ ಸೂಪರ್ ಹಿಟ್ Super Hit ಆಗಿವೆ. ಅವರು ಹಾಡಿದ ಹಾಡುಗಳು ಯೂಟ್ಯೂಬ್ ದೊಡ್ಡ ಮಟ್ಟದ ಸದ್ದು ಮಾಡುತ್ತಿವೆ. ಸಿದ್ ಶ್ರೀರಾಮ್ ದಕ್ಷಿಣ ಚಿತ್ರರಂಗದ ಟಾಪ್ ಮೋಸ್ಟ್ ಗಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮುತ್ತಿದ್ದಾರೆ.
ಈಗ ಟಾಲಿವುಡ್ Tollywood ಚಿತ್ರರಂಗದಲ್ಲಿ ಸಿದ್ ಶ್ರೀರಾಮ್ ಹಾಡುಗಳ ಹವಾ ಮುಂದುವರೆದಿದೆ. ಆದರೆ, ಸಿದ್ ಶ್ರೀರಾಮ್ ಅವರ ಹಾಡುಗಳ ಸಂಭಾವನೆ ವಿಚಾರ ಇದೀಗ ಸಿನಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿದ್ ಶ್ರೀರಾಮ್ ಒಂದು ಹಾಡಿಗಾಗಿ ರೂ. 5 ಲಕ್ಷದಿಂದ ರೂ. 7 ಲಕ್ಷದವರೆಗೆ ಸಂಭಾವನೆ ತೆಗೆದುಕೊಳ್ಳುತ್ತಾರೆ. ವಾಸ್ತವವಾಗಿ ಗಾಯಕರು ಇಷ್ಟು ದೊಡ್ಡ ಮೊತ್ತದ ಸಂಭಾವನೆ ತೆಗೆದುಕೊಳ್ಳುವುದು ಬಹಳ ಅಪರೂಪ. ಸಿದ್ ಶ್ರೀರಾಮ್ ಅವರ ಸದ್ಯದ ಕ್ರೇಜ್ ಗಮನಿಸಿ, ಅವರು ಹಾಡೊಂದನ್ನು ಹಾಡಿದರೆ ಅದಕ್ಕೆ ಬರುವ ಪ್ರತಿಕ್ರಿಯೆಯನ್ನು ಗಮನಿಸಿ ನಿರ್ಮಾಪಕರು ದೊಡ್ಡ ಸಂಭಾವನೆ ನೀಡಲು ಸಿದ್ಧರಾಗಿದ್ದಾರೆ. ಕನ್ನಡದಲ್ಲೂ ಕೂಡ ಹಾಯಾಗಿದೆ ಮತ್ತು ಭಜರಂಗಿ ಚಿತ್ರದ ನೀ ಸಿಗೋವರೆಗೂ ಸೇರದಂತೆ ಹಲವು ಹಾಡುಗಳನ್ನು ಸಹ ಕನ್ನಡದಲ್ಲಿ ಹಾಡಿದ್ದಾರೆ…