ಕೆಜಿಎಫ್ KGF , ಬಾಹುಬಲಿಯಂತಹ ಸಿನಿಮಾಗಳಿಂದ ಬಾಲಿವುಡ್ ಗೆ ಸೌತ್ ಸಿನಿಮಾ ಇಂಡಸ್ಟ್ರಿಯ ತಾಕತ್ತು ತಿಳಿದಿತ್ತು.. ಇತ್ತೀಚೆಗೆ ರಿಲೀಸ್ ಆದ ಅಲ್ಲು ಅಭಿನಯದ ಪುಷ್ಪ Pushpa ಕೂಡ ಬಾಲಿವುಡ್ ನಲ್ಲಿ ಭಾರಿಯಾಗೇ ಸೌಂಡ್ ಮಾಡಿದೆ.. ಪುಷ್ಪಾ ಸಿನಿಮಾ ಯಶಸ್ಸಿನ ನಂತರ, ಬಾಲಿವುಡ್ ನ ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ Kangana ಅವರು ದಕ್ಷಿಣದ ತಾರೆಯರು ಯಾಕೆ ಪವರ್ ಫುಲ್ ಎಂದು ವಿವರಿಸುವ ಜೊತೆಗೆ ಯಶ್ , ಅಲ್ಲು ಅರ್ಜುನ್ Allu Arjun ಸೇರಿದಂತೆ ದಕ್ಷಿಣ ಬಾರತದ ಸ್ಟಾರ್ ಗಳು ಅವರನ್ನ ಬಾಲಿವುಡ್ ಭ್ರಷ್ಟಗೊಳಿಸಲು ಅನುಮತಿಸಬಾರದು ಎಂದಿದ್ದಾರೆ.. Instagram ನಲ್ಲಿ ಪೋಸ್ಟ್ ಮಾಡಿರುವ ನಟಿ ಪುಷ್ಪ: ದಿ ರೈಸ್ ಚಿತ್ರದಲ್ಲಿನ ಸಮಂತಾ ಅವರ ಊ ಅಂತವಾ ಹಾಡನ್ನು ಸಹ ಸೇರಿಸಿದ್ದಾರೆ.
ಅಷ್ಟೇ ಅಲ್ದೇ ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾ ಹಾಗೂ ಯಶ್ ಅಭಿನಯದ KGF 2 ಸಿನಿಮಾದ ಫೋಟೋಗಳನ್ನ ಹಂಚಿಕೊಂಡಿದ್ದಾರೆ.. ನಟಿ ಕಂಗನಾ ರಣಾವತ್ ದಕ್ಷಿಣದ ಸೂಪರ್ ಸ್ಟಾರ್ ಗಳ ಕಂಟೆಂಟ್ ಏಕೆ ಸ್ಟ್ರಾಂಗ್ ಮತ್ತೆ ಪವರ್ ಫುಲ್ ಎಂದು ವಿವರಿಸಿದರು. ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ ದಿ ರೈಸ್ ಈ ವರ್ಷದ ಅತಿ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಯಿತು. ಬಾಲಿವುಡ್ ದಿಗ್ಗಜರೇ ಪುಷ್ಪರಾಗನನ್ನ ಕೊಂಡಾಡಿದರು.. ಅಲ್ಲದೇ ಸಾಕಷ್ಟು ಕಮೆಂಟ್ ಗಳು ಸಹ ಬಂದಿದ್ದವು.. ಅಲ್ಲು ಹಿಂದಿ ಸಿನಿಮಾ ಜಗತ್ತಿಗೆ ಕಾಲಿಡಬೇಕೆಂದೆಲ್ಲಾ,, ಯಶ್ ಗೂ ಕೂಡ ಹಿಂದಿ ಸಿನಿಮಾರಂಗಕ್ಕೆ ಬರುವಂತೆ ಅನೇಕ ನೆಟ್ಟಿಗರ ಒತ್ತಾಯವಿದೆ. ಆದ್ರೆ ಇನ್ಸ್ಟಾಗ್ರಾಮ್ ನಲ್ಲಿ ಸಲಹೆ ನೀಡಿರೋ ಕಂಗನಾ ವಿಕೆಲವು ಕಾರಣಗಳನ್ನ ತಿಳಿಸಿರುವ ಕಂಗನಾ , ದಕ್ಷಿಣ ಬಾರತೀಯ ಸಿನಿಮಾ ಸ್ಟಾರ್ ಗಳು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದಾರೆ, ಅವರು ತಮ್ಮ ಕುಟುಂಬಗಳನ್ನು ಪ್ರೀತಿಸುತ್ತಾರೆ ಮತ್ತು ಸಂಬಂಧಗಳು ಪಾಶ್ಚಾತ್ಯೀಕರಣಗೊಂಡಿಲ್ಲ, ಅವರ ವೃತ್ತಿಪರತೆ ಮತ್ತು ಉತ್ಸಾಹವಕ್ಕೆ ಸಾಟಿಯಿಲ್ಲ. ಬಾಲಿವುಡ್ ಅವರನ್ನು ಭ್ರಷ್ಟಗೊಳಿಸಲು ಅವರು ಬಿಡಬಾರದು ಎಂದು ಹೇಳಿದ್ದಾರೆ. ಅವರ ಪೋಸ್ಟ್ ನಲ್ಲಿ ಕೆಜಿಎಫ್ 2 ಮತ್ತೆ ಪುಷ್ಪ 2 ನ ಪೋಸ್ಟರ್ ಇರೋದು ವಿಶೇಷ..