ಸ್ಯಾಂಡಲ್ ವುಡ್ Sandalwood ಸಿನಿಮಾ ಮೂಲಕ ಹಿಟ್ ಆಗಿ ಟಾಲಿವುಡ್ ನಲ್ಲೇ ಬೇರು ಬಿಟ್ಟು , ಬಾಲಿವುಡ್ ನಲ್ಲಿ ಸ್ಟ್ರಗಲ್ ಮಾಡ್ತಿರೋ ರಶ್ಮಿಕಾ ಮಂದಣ್ಣ Rashmika Mandanna ಈಗಾಗಲೇ ಬಾಲಿವುಡ್ ನ 2 ಸಿನಿಮಾಗಳಲ್ಲಿ ನಟಿಸಿ ಆಗಿದೆ.. ಇತ್ತೀಚೆಗಷ್ಟೇ ಅವರ ಮತ್ತು ಅಲ್ಲು ಅರ್ಜುನ್ Allu Arjun ನಟನೆಯ ಪುಷ್ಪ ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾಗಳಿಗಿಂತ ಟ್ರೋಲ್ ಗಳಿಂದಲೇ ಹೆಚ್ಚು ಸುದ್ದಿಯಲ್ಲಿರೋ ರಶ್ಮಿಕಾ ಇತ್ತೀಚೆಗೆ ಏರ್ಪೋರ್ಟ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದ್ರು , ಆದ್ರೆ ಅವರ ಡ್ರೆಸ್ಸಿಂಗ್ ಸೆನ್ಸ್ ನಿಂದ ಟ್ರೋಲ್ ಆಗಿದ್ರೂ.. ಹೂಡಿ ಮತ್ತೆ ಶಾರ್ಟ್ಸ್ ಧರಿಸಿದ್ದ ರಶ್ಮಿಕಾಗೆ ಪ್ಯಾಂಟ್ ಎಲ್ಲಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿ ಟ್ರೋಲ್ ಮಾಡಿದ್ರು. ಇದ್ರ ಬೆನ್ನಲ್ಲೇ ಈಗ ರಶ್ಮಿಕಾ ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ Karan Johar ಕಚೇರಿಗೆ ಭೇಟಿ ನೀಡಿದ್ದು ಈ ಸುದ್ದಿ ಅವರ ಅಭಿಮಾನಿಗಳ ವಲಯ ಹಾಗೂ ಟಾಲಿವುಡ್ , ಬಿ ಟೌನ್ B Town ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ. ಅಲ್ಲದೇ ಬಾಲಿವುಡ್ ನಲ್ಲಿ ರಶ್ಮಿಕಾ 3ನೇ ಸಿನಿಮಜಾ ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ಎನ್ನಲಾಗ್ತಿದೆ.. ಅಷ್ಟೇ ಅಲ್ಲ ಬಿ ಟೌನ್ ನಲ್ಲಿ ಹರಿದಾಡ್ತಿರುವ ಮತ್ತೊಂದು ಸೆಸ್ಷೇಷನಲ್ ಕಬರ್ ಅಂದ್ರೆ ರಶ್ಮಿಕಾ ವಿಜಯ್ ದೇವರಕೊಂಡ Vijay Devarakonda ಈ ಸಿನಿಮಾದಲ್ಲಿ ನಾಯಕ ನಾಯಕಿಯಾಗಲಿದ್ದಾರೆ ಅನ್ನೋದು..
ಹೌದು… ಅಷ್ಟೇ ಅಲ್ಲ ದೇವರಕೊಂಡ ಅವರ ಲೈಗರ್ ಸಿನಿಮಾಗೆ ಸಹ ನಿರ್ಮಾಪಕರಾಗಿರುವ ಕರಣ್ ಜೋಹರ್ ಜೊತೆಗೆ ಮಾತನಾಡಿ ವಿಜಯ್ ದೇವರಕೊಂಡ ಅವರೇ ಮುಂದಿನ ಸಿನಿಮಾ ಬಗ್ಗೆ ಒಪ್ಪಿಸಿದ್ದಾರೆ , ರಶ್ಮಿಕಾ ಅವರಿಗೆ ಲೀಡ್ ರೋಲ್ ಪಡೆಯಲು ಸಹಾಯ ಮಾಡಿದ್ದಾರೆ ಎನ್ನಲಾಗ್ತಾಯಿದೆ. ಅಂದ್ಹಾಗೆ ಆನ್ ಸ್ಕ್ರೀನ್ ನಲ್ಲಿ ವಿಜಯ್ ರಶ್ಮಿಕಾರನ್ನ ಹೇಗೆ ಅಭಿಮಾನಿಗಳು ಒಟ್ಟಿಗೆ ಇಷ್ಟ ಪಡ್ತಾರೋ ಅಷ್ಟೇ ಅವರ ಆಫ್ ಸ್ಕ್ರೀನ್ ಕೆಮಿಸ್ಟ್ರಿಯೂ ಸದಾ ಚರ್ಚೆಯಲ್ಲೇ ಇರುತ್ತೆ.. ಅಲ್ಲದೇ ಇವರಿಬ್ಬರ ಸಂಬಂಧದ ಬಗ್ಗೆ ನಾನಾ ಊಹಾಪೋಹಗಳು ಇವೆ.. ಅದನ್ನ ಮೀರಿ ಇವರಿಬ್ಬರೂ ಸದಾ ಒಟ್ಟಿಗೆ ಕಾಣಿಸಿಕೊಳ್ತಾ ಇರುತ್ತಾರೆ.. ಟಾಲಿವುಡ್ ನಲ್ಲಿ ಗೀತಾ ಗೋವಿಂದಂ , ಡಿಯರ್ ಕಾಮ್ರೆಡ್ ಸಿನಿಮಾಗಳಲ್ಲಿ ಇವರ ಕೆಮಿಸ್ಟ್ರಿ ಅಧ್ಬುತವಾಗಿತ್ತು. ಇದೀಗ ಬಾಲಿವುಡ್ ನಲ್ಲಿ ಈ ಜೋಡಿ ಮತ್ತೆ ಒಂದಾಗ್ತಾರಾ , ಇಲ್ಲಿಯೂ ಮೋಡಿ ಮಾಡಲಿದ್ದಾರಾ ಅನ್ನೋದನ್ನ ಕಾದು ನೋಡಬೇಕಿದೆ.