Nagarjuna: ಟಾಲಿವುಡ್ ನ ಸ್ಟಾರ್ ಜೋಡಿ ಸಮಂತಾ ನಾಗಚೈತನ್ಯ 2021 ರ ಅಕ್ಟೋಬರ್ October ನಲ್ಲಿ ಡಿವೋರ್ಸ್ ಪಡೆಯೋ ಮೂಲಕ ಅಭಿಮಾನಿಳಿಗೆ ಶಾಕ್ ನೀಡಿದ್ದರು. ಇದಾದ ನಂತರ ಇಬ್ಬರೂ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಿದ್ದಾರೆ.. ಆದ್ರೆ ಕೆಲವೊಮ್ಮೆ ಇಬ್ಬರೂ ಡಿವೋರ್ಸ್ ಬಗ್ಗೆ ಕೆಲ ವಿಚಾರಗಳನ್ನ ಹಂಚಿಕೊಂಡಿರುವುದೂ ಉಂಟು..
ಇದೀಗ ನಾಗ ಚೈತನ್ಯ Naga Chaitanya ಅವರ ತಂದೆ ನಟ ನಾಗಾರ್ಜನ Nagarjuna ಅವರು ಈ ಬಗ್ಗೆ ಮಾತನಾಡಿದ್ದಾರೆ.. ಅಲ್ಲದೇ ಅಚ್ಚರಿಯ ಹೇಳಿಕೆಯಿಂದ ಸಾಕಷ್ಟು ಕುರತೂಹಲ ಮೂಡಿದೆ.. ಹೌದು
ಡಿವೋರ್ಸ್ ಗೆ ಕಾರಣ ಹುಡುಕಿದಾಗ ಸಾಕಷ್ಟು ಉತ್ತರಗಳು ಸಿಕ್ಕಿದ್ದವು.. ನಾಗಚೈತನ್ಯ ಹಾಗೂ ಅವರ ಕುಟುಂಬ ಸಮಂತಾರನ್ನು ಕಟ್ಟಿ ಹಾಕಲು ಯತ್ನಿಸಿತ್ತು ಎಂಬ ಮಾತು ಕೇಳಿಬಂದಿತ್ತು. ಸಿನಿಮಾಗಳಲ್ಲಿ Cinema ನಟನೆಗೆ ನಿರ್ಬಂಧ ಹೇರಿದ್ದರು. ಸಮಂತಾ ಬೋಲ್ಡ್ ಸೀನ್ಗಳಿಂದಲೇ ಡಿವೋರ್ಸ್ ಆಗಿದ್ದು ಅಂತೆಲ್ಲಾ ಹೇಳಲಾಗ್ತಿತ್ತು..
ಆದ್ರೆ ಅಸಲಿಗೆ ಡಿವೋರ್ಸ್ ಬಯಸಿದ್ದೇ ಸಮಂತಾ ಎಂದು ನಾಗಾರ್ಜುನ್ ಅವರು ಬಹಿರಂಗ ಪಡಿಸಿದ್ದಾರೆ.. ವಿಚ್ಛೇದನ ನೀಡಲು ನಿರ್ಧರಿಸಿದ ದಿನದಿಂದಲೂ ಸಮಂತಾ ಅಭಿಮಾನಿಗಳು ನಾಗಚೈತನ್ಯ ವಿರುದ್ಧ, ಹಾಗೂ ನಾಗಚೈತನ್ಯ ಅಭಿಮಾನಿಗಳು ಸಮಂತಾ ವಿರುದ್ಧ ಕಿಡಿಕಾರುತ್ತಲೇ ಇದ್ದರು.
ಸದ್ಯ ಡಿವೋರ್ಸ್ ಬಗ್ಗೆ ಮಾತನಾಡಿದ ನಾಗರ್ಜಿನ್ ಅವರು ಸಮಂತಾ ತೆಗೆದುಕೊಂಡ ನಿರ್ಧಾರವನ್ನು ನಾಗ ಚೈತನ್ಯ ಒಪ್ಪಿಕೊಂಡು ಗೌರವಿಸಿದ್ದು ಅವನಿಗೆ ನನ್ನ ಬಗ್ಗೆ ಆತಂಕವಿತ್ತು. ಕುಟುಂಬದ ಮರ್ಯಾದೆ ಏನಾಗುತ್ತೋ ಎನ್ನುವ ಬಗ್ಗೆ ಚಿಂತೆಯಿತ್ತು ಎಂದು ನಾಗರ್ಜುನ ಅವರು ಕಾಸಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅಲ್ಲದೇ ಡಿವೋರ್ಸ್ ಗೆ ಕಾರಣ ಕೇಳಿದಾಗ , ಅದು ನನ್ಗೆ ಗೊತ್ತಿಲ್ಲ ಎಂದಿರುವ ನಾಗಾರ್ಜುನ್ ಅವರು ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದರು. ಆದರೆ, ಈ ನಿರ್ಧಾರವನ್ನು ದಿಢೀರನೇ ಯಾಕೆ ತೆಗೆದುಕೊಂಡರು ಎನ್ನುವುದು ನನಗೆ ಗೊತ್ತಿಲ್ಲ. 2021ರ ಹೊಸ ವರ್ಷವನ್ನು ಇಬ್ಬರೂ ಒಟ್ಟಿಗೆ ಸಂಭ್ರಮಿಸಿದ್ದಾರೆ. ಇದಾದ ಬಳಿಕ ಸಮಸ್ಯೆ ಎದುರಾಗಿರಬಹುದು.” ಎಂದು ನಾಗಾರ್ಜುನ ತಿಳಿಸಿದ್ದಾರೆ.