Rajinikanth ಜನವರಿ 17 ರಂದು, ಧನುಷ್ Dhanush ಮತ್ತು ಐಶ್ವರ್ಯಾ ರಜನಿಕಾಂತ್ Aishwarya Rajinikanth ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಾವಿಬ್ಬರು ಇನ್ನು ಮುಂದೆ ದೂರವಾಗುವುದಾಗಿ ಘೋಷಿಸಿದ್ದರು. ಇದು ಅವರ ಕುಟುಂಬ ಸದಸ್ಯರು, ಅಭಿಮಾನಿಗಳು ಮತ್ತು ಸ್ನೇಹಿತರಿಗೆ ದೊಡ್ಡ ಆಘಾತವನ್ನುಂಟು ಮಾಡಿತ್ತು. ಇತ್ತೀಚಿನ ವರದಿಗಳ ಪ್ರಕಾರ ಐಶ್ವರ್ಯಾ ಅವರ ತಂದೆ, ನಟ ಸೂಪರ್ಸ್ಟಾರ್ ರಜನಿಕಾಂತ್, ತಮ್ಮ ಮಗಳು ಧನುಷ್ನೊಂದಿಗೆ ಮತ್ತೆ ಒಂದಾಗುವುದನ್ನ ಬಯಸುತ್ತಿದ್ದಾರೆ. ಈ ಕುರಿತು ಮಗಳೊಂದಿಗೆ ಮಾತನಾಡುತ್ತಿದ್ದಾರೆ ಎನ್ನಲಾಗಿದೆ.
ಐಶ್ವರ್ಯಾ ರಜನಿಕಾಂತ್ ಮತ್ತು ಧನುಷ್ ಮದುವೆಯಾಗಿ 18 ವರ್ಷಗಳು ಕಳೆದಿವೆ. ಜನವರಿ 17 ರಂದು ದಂಪತಿಗಳು ಡಿವೋರ್ಸ್ ಪಡೆದುಕೊಳ್ಳುವುದಾಗಿ ತಿಳಿಸಿದ್ದರು. ಅವರಿಬ್ಬರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪರಸ್ಪರ ದೂರವಾಗದ ನಂತರ ಇಬ್ಬರೂ ತಮ್ಮ ತಮ್ಮ ಪ್ರಾಜೆಕ್ಟ್ಗಳಲ್ಲಿ ಹೈದರಾಬಾದ್ನಲ್ಲಿ Hyderbad ನಿರತರಾಗಿದ್ದಾರೆ.
ಇತ್ತೀಚಿನ ವರದಿಗಳು ಧನುಷ್ ಮತ್ತು ಐಶ್ವರ್ಯಾ ಅವರ ವಿಚ್ಚೇದನ ನಂತರ ರಜನಿಕಾಂತ್ ಬೇಸರಿಸಿಕೊಂಡಿದ್ದಾರೆ. ಅವರ ಜೊತೆ ಮಾತುಕತೆ ನಡೆಸಿ ಮತ್ತೆ ಒಂದಾಗಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕ ಘೋಷಣೆ ಮಾಡಿದ ನಂತರ ಐಶ್ವರ್ಯ ಮತ್ತು ಧನುಷ್ ರಾಜಿ ಮಾಡಿಕೊಳ್ಳುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಅದೇ ರೀತಿ, ಧನುಷ್ ಅವರ ತಂದೆ ಮತ್ತು ನಿರ್ದೇಶಕ ಕಸ್ತೂರಿ ರಾಜ Kasturi Raja ಅವರು ದಂಪತಿಗಳು ಇನ್ನೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಬದಲಿಗೆ ಇದು ಸಾಮಾನ್ಯ ಕೌಟುಂಬಿಕ ಕಲಹ ಎಂದು ಹೇಳಿ ಇಬ್ಬರನ್ನೂ ಮಾತನಾಡಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ.
ಜನವರಿ 17 ರಂದು, ಧನುಷ್ ಅವರು ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ, “18 ವರ್ಷಗಳ ಸ್ನೇಹಿತರು, ದಂಪತಿಗಳು, ಪೋಷಕರು ಮತ್ತು ಹಿತೈಷಿಗಳಾಗಿ ಪರಸ್ಪರ ಒಗ್ಗೂಡಿಸಿದ್ದರು. ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಬಂದಿದೆ.
ಐಶ್ವರ್ಯ ಮತ್ತು ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ ಮತ್ತು ನಮ್ಮನ್ನು ಉತ್ತಮ ವ್ಯಕ್ತಿಗಳಾಗಿ ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಿ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ಎದುರಿಸಲು ನಮಗೆ ಅಗತ್ಯವಿರುವ ಗೌಪ್ಯತೆಯನ್ನು ನೀಡಿ. ಟ್ವೀಟ್ ಮಾಡಿದ್ದರು.