Garuda Gamana Vrishabha Vahana: ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಜೋಡಿಯ ಗರುಡ ಗಮನ ಮತ್ತು ವೃಷಭ ವಾಹನ ಚಿತ್ರ ಥಿಯೇಟರ್ ಗಳಲ್ಲಿ ಭರ್ಜರಿ ಹಿಟ್ ಆದ ನಂತರ ಈಗ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಸಂಕ್ರಾಂತಿ ಹಬ್ಬದಂದ ಜಿ 5 ಪ್ಲಾಟ್ ಪಾರ್ಮ್ ನಲ್ಲಿ ಬಿಡುಗಡೆಯಾದ ಸಿನಿಮಾ ಅಲ್ಲೂ ಸಹ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದೀಗ ಗರುಡ ಗಮನ ವೃಷಭ ವಾಹನ ಸಿನಿಮಾವನ್ನ ನೋಡಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಹಾಡಿ ಹೊಗಳಿದ್ದಾರೆ. ರಾಜ್ ಬಿ ಶೆಟ್ಟಿ ನನ್ನ ಫೆವರೀಟ್ ನಿರ್ದೇಶಕ ಎಂದು ಮೆಚ್ಚಿಕೊಂಡಿದ್ದಾರೆ.
ಸಿನಿಮಾ ಕುರಿತು ಮನಬಿಚ್ಚಿ ಮಾತನಾಡಿರುವ ಅನುರಾಗ್ ಒಟಿಟಿಯಲ್ಲೂ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಜ್ ಬಿ ಶೆಟ್ಟಿ ನನ್ನ ಫೆವರೇಟ್ ನಿರ್ದೇಶಕ . ಅಂಗಮಲೈ ಡೈರೀಸ್, ಪರುತಿವೀರನ್, ಸುಬ್ರಮಣ್ಯಪುರಂ, ಶೈಲಿಯ ಚಿತ್ರಗಳನ್ನ ನೋಡಿದಂತಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರು ಗರುಡ ಗಮನ ವೃಷಭವಾಹನ ಸಿನಿಮಾ ನೋಡುವಂತೆ ಅನುರಾಗ್ ಮನವಿ ಮಾಡಿದ್ದಾರೆ. ಇದು ಹೊಸ ಜಮಾನದ ಗ್ಯಾಂಗ್ ಸ್ಟಾರ್ ಸಿನಿಮಾ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅನುರಾಗ್ ಕಶ್ಯಪ್ ಮಾತ್ರವಲ್ಲದೆ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮ್ ಮತ್ತು ರಾಣಾ ದಗ್ಗುಬಾಟಿ ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.