Danish: ಪುನೀತ್ ರಾಜ್ ಕುಮಾರ್ ಅವರ ಹೋಮ್ ಬ್ಯಾನರ್ PRK Productions ಪಿ ಆರ್ ಕೆ ಪ್ರೋಡ್ಯೂಕ್ಷನ್ಸ್ ಒಡೆತನದಲ್ಲಿ ನಿರ್ಮಾಣವಾಗಿರುವ ದಾನೀಷ್ ಸೇಠ್ ಅಭಿನಯದ ಕಾಮಿಡಿ ಚಿತ್ರ One Cut Two Cut ಒನ್ ಕಟ್ ಟೂ ಕಟ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಗೋಪಿ ಎಂಬ ಶಿಕ್ಷಕನ ಪಾತ್ರದಲ್ಲಿ Danish Sait ದಾನೀಷ್ ಸೇಠ್ ಅಭಿನಯಿಸಿದ್ದಾರೆ. ಹೀರೋ ಗೆ ಜೊತೆಯಾಗಿ ಸಂಯುಕ್ತ ಹೊರನಾಡು ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ಬೆಳವಡಿ ವೀನೀತ್ ಬೀಪ್ ಕುಮಾರ್ ಸಂಪತ್ ಮೈತ್ರೇಯಾ ಇತರರು ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. Vamsidhar Bhogaraju ವಂಶಿಧರ್ ಭೋಗರಾಜು ಚಿತ್ರಕ್ಕೆ ನಿರ್ದೇಶನ ಮಾಡಿದ್ದು Ashwini PuneethRajkumar ಅಶ್ವಿನಿ ಪುನೀತ್ ರಾಜ್ ಕುಮಾರ್ ಗುರುದತ್ ತಲ್ವಾರ್ ನಿರ್ಮಾಣ ಮಾಡಿದ್ದಾರೆ. ಕಳೆದ ಭಾರಿ ಪ್ರೆಂಚ್ ಬಿರಿಯಾನಿ ನಂತರ Danish ದಾನೀಶ್ ಮತ್ತೆ ಅಮೇಜಾನ್ OTT ಮೂಲಕ ತೆರೆಗೆ ಬರುತ್ತಿದ್ದಾರೆ. ಆರ್ಟ್ಸ್ ಅಂಡ್ ಕ್ರಾಫ್ಟ್ ಶಿಕ್ಷಕನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದು, ಕಾಮಿಡಿ ಜೊತೆಗೆ ಶಿಕ್ಷಣದ ಗಂಭೀರತೆಯನ್ನ ಚಿತ್ರ ತೆರದಿಡಲಿದೆ. Cini Bazaar
Vikranth Rona Release Update : ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣಾ ಬಿಡುಗಡೆ ದಿನಾಂಕ ಮುಂದೂಡಿಕೆ…