Shiva Rajkumar : ಸ್ಯಾಂಡಲ್ ವುಡ್ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಮೈಸೂರಿನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದರು,.. ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು ಕೋವಿಡ್-19 ಸಂದರ್ಭದಲ್ಲಿ ಇಂತಹ ಆಸ್ಪತ್ರೆ ಬಹಳ ಅಗತ್ಯ.
ಅಪ್ಪು ಹೆಸರಿನಲ್ಲಿ ಚಿಕಿತ್ಸೆಗೆ ರಿಯಾಯಿತಿ ಕೊಡಲಾಗುತ್ತಿದೆ. ಅಪ್ಪುಗೆ ಯೋಗ, ಯೋಗ್ಯತೆ ಎರಡೂ ಇದೆ. ಹೀಗಾಗಿ ಈ ರೀತಿಯ ಸ್ಮರಣೆ ಆಗುತ್ತಿದೆ. ದೊಡ್ಡವರು, ಚಿಕ್ಕವರು ಎಂಬ ಬೇಧ ಇರದೆ ಎಲ್ಲರಿಗೂ ಸಮನಾಗಿ ಚಿಕಿತ್ಸೆ ನೀಡಿ ಎಂದಿದ್ದಾರೆ.
ಇದೇ ವೇಳೆ ಮಾತು ಮುಂದುವರೆಸಿದ ಶಿವಣ್ಣ ನಾನು ಲಾರ್ಡ್ ಶಿವ ಅಲ್ಲ. ನಾನು ನಿಮ್ಮ ಶಿವಣ್ಣ ಮಾತ್ರ. ನಾನು ಶಿವಣ್ಣ ಆಗಿರೋಕೆ ಮಾತ್ರ ಇಷ್ಟ ಪಡುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಅಭಿಮಾನಿಗಳನ್ನು ರಂಜಿಸಲು ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು ಎಂದು ಹಾಡನ್ನು ಹಾಡಿದ್ದಾರೆ. ನಂತರ ಆಸ್ಪತ್ರೆಗೆ ಅಪ್ಪು ಹೆಸರಿನಲ್ಲಿ ಎರಡು ಗಂಧದ ಗಿಡ ಕೊಟ್ಟಿದ್ದಾರೆ. ಅಂದ್ಹಾಗೆ ಈ ಆಸ್ಪತ್ರೆಯು ಉದ್ಯಮಿ ಕೆ.ಬಿ.ಕುಮಾರ್ ಕುಟುಂಬದ ಒಡೆತನದ್ದಾಗಿದೆ.
shiva-rajkumar – sandalwood – puneeth rajkumar
https://cinibazaar.com/2022/01/29/500-saplings-distribute-to-puneeth-rajkumar-fans/