Kajol : ಮುಂಬೈ : ಬಾಲಿವುಡ್ ನಟಿ ಕಾಜೋಲ್ ಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ದೇಶದಲ್ಲಿ ಒಮಿಕ್ರಾನ್ , ಕೋವಿಡ್ ಅಬ್ಬರದ ನಡುವೆ ಎಲ್ಲಾ ಸಿನಿಮಾಂದ ಹಲವು ತಾರೆಯರಿಗೆ ಈಗಾಗಲೇ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ… ಇತ್ತೀಚೆಗೆ ಟಾಲಿವುಡ್ ನ ಸೂಪರ್ ಸ್ಟಾರ್ ಚಿರಂಜೀವಿ ಅವರಿಗೂ ಕೋವಿಡ್ ಪಾಸಿಟಿವ್ ಬಂದಿತ್ತು.. ಇದೀಗ ಬಾಲಿವುಡ್ ನ ಎವರ್ ಗ್ರೀನ್ ನಟಿ ಕಾಜೋಲ್ ದೇವಗನ್ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದೆ..
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಜೋಲ್ ಅವರು ತಮ್ಮ ಮಗಳ ಫೋಟೋವನ್ನ ಶೇರ್ ಮಾಡಿ , ವಿಶ್ವದ ಸ್ವೀಟೆಸ್ಟ್ ಸ್ಮೈಲ್ ಅಂದ್ರೆ ತಮ್ಮ ಮಗಳನ್ನ ಮಿಸ್ ಮಾಡಿಕೊಳ್ತಿರುವುದಾಗಿ ಹೇಳಿಕೊಂಡಿದ್ದಾರೆ..
ಅಲ್ಲದೇ ಶೀತದಿಂದ ನನ್ನ ಮೂಗನ್ನು ತೋರಿಸಲು ನನಗೆ ಇಷ್ಟವಿಲ್ಲ. ನಾನು ವಿಶ್ವದ ಸಿಹಿಯಾದ ನಗುವನ್ನು ಪೋಸ್ಟ್ ಮಾಡುತ್ತೇನೆ ಮಿಸ್ ಯೂ ನೈಸಾ ದೇವ್ ಗನ್ ಎಂದು ಬರೆದುಕೊಂಡಿದ್ದಾರೆ.
ಸದ್ಯ ನಿರ್ದೇಶಕಿ ರೇವತಿ ಆ್ಯಕ್ಷನ್ ಕಟ್ ಹೇಳುತ್ತಿರುವ ದಿ ಲಾಸ್ಟ್ ಹುರ್ರೇ ಎಂಬ ಸಿನಿಮಾದಲ್ಲಿ ಕಾಜೋಲ್ ನಟಿಸಲು ಸಹಿ ಹಾಕಿದ್ದಾರೆ. ಕಾಜೋಲ್ ಪುತ್ರಿ ನೈಸಾ ಪ್ರಸ್ತುತ ಸಿಂಗಾಪುರದ ಗ್ಲಿಯನ್ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ನಲ್ಲಿ ಅಂತರರಾಷ್ಟ್ರೀಯ ಹಾಸ್ಪಿಟಾಲಿಟಿ ಅಧ್ಯಯನ ಮಾಡುತ್ತಿದ್ದಾರೆ.