Kotigobba 3: ಕನ್ನಡದಲ್ಲಿ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗಿ ಮಾಸ್ ಕಮರ್ಷಿಯಲ್ ಎಂಟರ್ಟೈನರ್ ಆಗಿ ಹೊರಹೊಮ್ಮಿತ್ತು.. ಚಿತ್ರವು ಅಕ್ಟೋಬರ್ 15 ರಂದು ಬಿಡುಗಡೆಯಾಗಿತ್ತು,.. Box Office ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿತ್ತು. Shiva Karthik ಶಿವ ಕಾರ್ತಿಕ್ ನಿರ್ದೇಶಿಸಿದ ಈ ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಸಾಧಾರಣ ವಿಮರ್ಶೆಗಳನ್ನು ಕಂಡಿತ್ತು. ಇದೀಗ ಈ ಸಿನಿಮಾದ ತೆಲುಗು ಆವೃತ್ತಿಯು ಫೆಬ್ರವರಿ 4, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.
ಹೌದು, ಮುಂಬರುವ ವಾರದಲ್ಲಿ ಕೋಟಿಗೊಬ್ಬ 3 ತೆಲುಗು ವರ್ಷನ್ ಕೋಟಿಕೊಕ್ಕಡು ಎಂಬ ಟೈಟಲ್ ನಲ್ಲಿ ರಿಲೀಸ್ ಆಗಲಿದೆ. ಸುದೀಪ್ ಈಗಾಗಲೇ ಈಗ ಚಿತ್ರದ ಮೂಲಕ ಟಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ, ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗಲಿರುವುದು ಕಿಚ್ಚನ ತೆಲುಗು ಅಭಿನಮಾನಿಗಳಿಗೆ ಖುಷಿ ತಂದಿದೆ.. ಕೋಟಿಗೊಬ್ಬ 3 ಚಿತ್ರದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ , ರವಿಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸುದೀಪ್ ಅವರ ಬಹುನಿರೀಕ್ಷೆಯ Vikranth Rona ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು , ಥಿಯೇಟರ್ ಗಳು ಎಂದಿನಂತೆ 100 % ಗೆ ಅನುಪತಿ ಪಡೆಯುವಲ್ಲಿ ಯಶಸ್ವಿಯಾದ್ರೆ , ಫೆಬ್ರವರಿ 24 ಕ್ಕೆ ಸಿನಿಮಾ ರಿಲೀಸ್ ಆಗೋದು ಪಕ್ಕಾ…
ಇದೊಂದು ಫ್ಯಾಂಟಸಿ ಥ್ರಿಲ್ಲರ್ ಸಿನಿಮಾವಾಗಿದ್ದು,, ಈಗಾಗಲೇ ಕೇವಲ ಗ್ಲಿಂಪ್ಸ್ ನಿಂದಲೇ ಹಾಲಿವುಡ್ ರೇಂಜ್ ಗೆ ಸೌಂಡ್ ಮಾಡ್ತಿದೆ.. ಅನೂಪ್ ಭಂಡಾರಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.. ಈ ಸಿನಿಮಾ 3ಡಿ ಯಲ್ಲಿ ಬರಲಿರುವುದು ವಿಶೇಷ..