KGF 2 : ಸಿನಿಮಾಗೆ ಬಾಲಿವುಡ್ ಬೆಡಗಿ ನೋರಾ ಫತೇಹಿ..!!!
ಭಾರತದಲ್ಲಿ ಸದ್ಯಕ್ಕೆ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾಗಳಲ್ಲಿ ಅಗ್ರ ಸ್ಥಾನದಲ್ಲಿರೋದು ಅದು ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನ ಕೆಜಿಎಫ್ 2 ಸಿನಿಮಾ… KGF ಸಿನಿಮಾ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಗೆ ಬಾಲಿವುಡ್ ನಲ್ಲಿಯೂ ಫ್ಯಾನ್ಸ್ ಗಳ ಸಂಖ್ಯೆ ಕಡಿಮೆಯಿಲ್ಲ.. ಅಲ್ಲೂ ರಾಕಿ ಭಾಯ್ ಹವಾ ಜೋರಾಗಿಯೇ ಇದೆ.. ಮೊದಲ ಭಾಗದಲ್ಲಿ ಒಂದು ಐಟಂ ಹಾಡಿತ್ತು.. ಜೋಕೆ ಸಾಂಗ್ ಸೇನ್ಷೇಷನ್ ಹುಟ್ಟುಹಾಕಿತ್ತು.. ಸೌತ್ ಇಂಡಿಯಾದಲ್ಲಿ ತಮನ್ನಾ ಈ ಹಾಡಿಗೆ ಹೆಜ್ಜೆ ಹಾಕಿದ್ರೆ , ಹಿಂದಿಯಲ್ಲಿ ಮೌನಿ ರಾಯ್ ಸೊಂಟ ಬಳುಕಿಸಿದ್ದರು..
ಇದೀಗ ಚಾಪ್ಟರ್ 2 ನಲ್ಲೂ ಒಂದು ಸ್ಪೆಷಲ್ ಹಾಡು ಇರಲಿದೆ ಎನ್ನಲಾಗ್ತಿದೆ.. ಮತ್ತೊಂದು ವಿಶೇಷತೆ ಅಂದ್ರೆ , ಸದ್ಯಕ್ಕೆ ಡ್ಯಾನ್ಸಿಂಗ್ ದೀವಾ ಅಂತಲೇ ಕರೆಸಿಕೊಳ್ತಿರುವ ಬಾಲಿವುಡ್ ನ ಸೆನ್ಷೇಷನಲ್ , ಗ್ಲಾಮರಸ್ ಡ್ಯಾನ್ಸರ್ ನೋರಾ ಫತೇಹಿ ರಾಕಿ ಭಾಯ್ ಗಾಗಿ ಬರುತ್ತಿದ್ದಾರೆ.. ಅಂದ್ರೆ KGF 2 ಸಿನಿಮಾದಲ್ಲಿ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗ್ತಿದೆ.. ಅಲ್ಲದೇ ಮತ್ತೆ ಚಿತ್ರತಂಡ ರೆಟ್ರೋ ಹಾಡುಗಳನ್ನ ರೀಮೇಕ್ ಮಾಡಬಹುದೆಂಬ ಸುದ್ದಿ ಸದ್ಯ ಸ್ಯಾಂಡಲ್ ನಲ್ಲಿ ಜೋರಾಗಿ ಸೌಂಡ್ ಮಾಡ್ತಿದೆ..
kgf 2 – saakshatv – nora fatehi – sandalwood
ಅಂದ್ಹಾಗೆ ಸಿನಿಮಾ ನಿಗದಿತ ದಿನಾಂಕ ಏಪ್ರಿಲ್ 14 ರಂದೇ ರಿಲೀಸ್ ಆಗೋದು ಬಹುತೇಕ ಖಚಿತ… ಅಲ್ಲದೇ ಯಶ್ ಬರ್ತ್ ಡೇ ದಿನವೇ ಸಿನಿಮಾತಂಡ ಅಧಿಕೃತವಾಗಿ ಈ ವಿಚಾರವನ್ನ ಬಹಿರಂಗ ಪಡಿಸಿ , ಕೋವಿಡ್ ನಿಯಂತ್ರಣಕ್ಕೆ ಬಂದಿದ್ದು ಥಿಯೇಟರ್ ಗಳಲ್ಲೂ ಪೂರ್ಣ ಪ್ರಮಾಣದ ಸೀಟಿಂಗ್ ಇದ್ದಲ್ಲಿ ಅಂದೇ ಸಿನಿಮಾ ರಿಲೀಸ್ ಪಕ್ಕ ಎಂದು ಸಿನಿಮಾ ತಂಡ ಯಶ್ ಪೋಸ್ಟರ್ ರಿಲೀಸ್ ಮಾಡಿ ತಿಳಿಸಿತ್ತು..
ತೆಲುಗಿನಲ್ಲಿ ರಿಲೀಸ್ ಆಗಲಿದೆ ಕೋಟಿಗೊಬ್ಬ 3…