ಗಾಳಿಪಟ 2 ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕು ಭಾರೀ ಮೊತ್ತಕ್ಕೆ ಸೇಲ್…!!!
2008 ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ ಸ್ಯಾಂಡಲ್ ಸಿನಿಮಾ ಗಾಳಿಪಟ… ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ , ದೂದ್ ಪೇಡ ನಟ ದಿಗಂತ್ , ಸಿಂಗರ್ ರಾಜೇಶ್ ಕೃಷ್ಣ ನಟಿಸಿ , ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿದ್ದರು.. ಇವರ ಕಾಂಬಿನೇಷನ್ ಹೊಸ ಸೆನ್ಷೇಷನ್ ಸೃಷ್ಟಿ ಮಾಡಿತ್ತು.. ಇದೀಗ ಯೋಗರಾಜ್ ಭಟ್ , ಗೋಲ್ಡನ್ ಗಣೇಶ್ , ದಿಗಂತ್ ಕಾಂಬಿನೇಷಬನಲ್ಲೇ ಗಾಳಿಪಟ 2 ಸಿನಿಮಾ ಕೂಡ ಬರುತ್ತಿದೆ.. ಈಗಾಗಲೇ ಶೂಟಿಂಗ್ ಮುಗಿದಿದ್ದು ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.. ಇದೀಗ ಗಾಳಿಪಟ-2 ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ ಮತ್ತು ಜೀ5 ಭಾರೀ ಮೊತ್ತಕ್ಕೆ ಖರೀದಿಸಿವೆ ಎನ್ನಲಾಗಿದೆ.
ಈ ವಿಷಯವನ್ನು ಗಾಳಿಪಟ-2 ನಿರ್ಮಾಪಕ ರಮೇಶ್ ರೆಡ್ಡಿ ಅವರೇ ಖಚಿತ ಪಡಿಸಿದ್ದಾರೆ. ಆನಂದ್ ಆಡಿಯೊಗೆ ಮಾರಾಟವಾದ ಸಂಗೀತದ ಹಕ್ಕುಗಳು ಸೇರಿದಂತೆ ಚಿತ್ರವು 8 ಕೋಟಿ ರೂಪಾಯಿಗೂ ಹೆಚ್ಚು ಪ್ರೀ-ರಿಲೀಸ್ ವಹಿವಾಟು ಮಾಡಿದೆ ಎಂದು ಕೂಡ ಹೇಳಲಾಗಿದೆ.
ಗಣೇಶ್ ಮತ್ತು ದಿಗಂತ್ ಜೊತೆಗೆ ಹಿರಿಯ ನಟ ಅನಂತ್ ನಾಗ್, ನಿರ್ದೇಶಕ-ನಟ ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ಮತ್ತು ಶರ್ಮಿಳಾ ಮಾಂಡ್ರೆ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಗಾಳಿಪಟ 2 ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಶೀಘ್ರದಲ್ಲೇ ಅಧಿಕೃತ ರಿಲೀಸ್ ದಿನಾಂಕ ಬಹಿರಂಗವಾಗುವ ನಿರೀಕ್ಷೆಯಿದೆ..