Bollywood : ಯುವ ನಟಿ ಜೊತೆ ಹೃತಿಕ್ ರೋಷನ್ ಹೊಸ ಲವ್ ಸ್ಟೋರಿ…
ಬಾಲಿವುಡ್ ನ ಸ್ಟಾರ್ ನಟ ಹೃತಿಕ್ ರೋಷನ್ ಸದ್ಯ ಇತ್ತೀಚೆಗೆ ಯುವ ನಟಿ ಜೊತೆಗೆ ಸುತ್ತಾಡಿಡರುವ ಕೈ ಹಿಡಿದುಕೊಂಡು ಕ್ಯಾಮೆರಾ ಮುಂದೆ ಪ್ರತ್ಯಕ್ಷವಾಗಿರುವ ವಿಡಿಯೋ ಫೋಟೋಗಳು ವೈರಲ್ ಆಗಿದ್ದು , ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿವೆ…
ಹೃತಿಕ್ ಹಾಗೂ ನಟಿ ಸಬಾ ಕೈ ಕೈ ಹಿಡಿದು ಬಹಿರಂಗವಾಗಿ ಕಾಣಿಸಿಕೊಂಡಿರುವುದು ಸ್ವತಃ ನಮಗೆ ಆಶ್ಚರ್ಯ ಮೂಡಿಸಿದೆ ಎಂದು ಹೃತಿಕ್ ಅವರ ಗೆಳೆಯರೊಬ್ಬರು ಹೇಳಿರುವುದಾಗಿ ರಾಷ್ಟ್ರೀಯ ಪತ್ರಿಕೆ ವರದಿ ಮಾಡಿದೆ.
ಸಬಾ ಅಜಾದ್ 2008ರಲ್ಲಿ ಬಿಡುಗಡೆ ಆದ ದಿಲ್ ಕಬಾಡಿ ಸಿನಿಮಾ ಮೂಲಕ ನಟನೆ ಆರಂಭಿಸಿದರು. ಈವರೆಗೆ ಅವರು ಎರಡು ಸಿನಿಮಾ ಹಾಗೂ ಮೂರು ಕಿರು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಜೊತೆಗೆ ಕೆಲವು ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದ್ಹಾಗೆ 2000 ರಲ್ಲಿ ಹೃತಿಕ್ ಸೂಸೆನ್ ಖಾನ್ ಅವರನ್ನ ವಿವಾಹವಾದರು. ಬಳಿಕ 2014ರಲ್ಲಿ ವಿಚ್ಛೇಧನ ಪಡೆದರು.. ಇವರಿಗೆ ಇಬ್ಬರು ಮಕ್ಕಳಿದ್ದು ಇಬ್ಬರ ಮಕ್ಕಳ ಸಮಾನ ಜವಾಬ್ದಾರಿಯನ್ನ ಇಬ್ಬರೂ ಹೊತ್ತಿದ್ದಾರೆ.. ಈ ನಡುವೆ ಹೃತಿಕ್ ಯುವ ನಟಿ ಜೊತೆಗೆ ಓಡಾಡುತ್ತಿದ್ದು ಇಬ್ಬರೂ ಸಹ ರಿಲೇಶನ್ ಶಿಪ್ ನಲ್ಲಿದ್ದಾರೆ ಎನ್ನಲಾಗ್ತಿದೆ..