‘ರಾಧೆ ಶ್ಯಾಮ್’ ರಿಲೀಸ್ ದಿನಾಂಕ ಫಿಕ್ಸ್….!!!!! ಯಾವಾಗ ಬಿಡುಗಡೆ..??
ಕೊರೊನಾ ಹಾವಳಿಯಿಂದಾಗಿ RRR , ರಾಧೆ ಶ್ಯಾಮ್ ಸೇರಿದಂತೆ ಹಲವು ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾಗಳ ರಿಲೀಸ್ ದಿನಾಂಕ ಮುಂದೂಡಿಕೆಯಾಯ್ತು.. ಈ ನಡುವೆ ಇತ್ತೀಚೆಗೆ ಹರಿದಾಡಿದ್ದ ಸೆನ್ಷೇಷನಲ್ ಸುದ್ದಿಯಂತೆ , ಬಾಹುಬಲಿ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ರಾಧೆ ಶ್ಯಾಮ್ ಸಿನಿಮಾಗೆ ಅಮೇಜಾನ್ ನಿಂದ ನೇರ ರಿಲೀಸ್ ಗಾಗಿ 350 ಕೋಟಿ ರೂ. ಆಫರ್ ಬಂದಿತ್ತು ಎನ್ನಲಾಗಿತ್ತು..
ಅಲ್ಲದೇ 400 ಕೋಟಿ ರೂಪಾಯಿಗೆ ನೆಟ್ ಫ್ಲಿಕ್ಸ್ ಆಫರ್ ಇಟ್ಟಿದ್ದು ಸಿನಿಮಾ ನೇರವಾಗಿ ಥಿಯೇಟರ್ ಗಳಲ್ಲಿಯೇ ರಿಲೀಸ್ ಆಗಲಿದೆ ಎನ್ನಲಾಗಿತ್ತು..
ಆದ್ರೀಗ ಊಹಾಪೋಹಗಳಿಗೆ ಅಂತ್ಯ ಹಾಡಿದೆ ಸಿನಿಮಾ ತಂಡ.. “ರಾಧೆ ಶ್ಯಾಮ್” ನಿರ್ಮಾಪಕರು ಸಿನಿಮಾ ಬಿಡುಗಡೆ ದಿನಾಂಕವನ್ನು ನಿರ್ಧರಿಸಿ ಆಗಿದೆ ಎನ್ನಲಾಗಿದೆ. ಚಿತ್ರವು ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆ ಎನ್ನಲಾಗಿದೆ..
ಮಾರ್ಚ್ 11 ಕ್ಕೆ ಸಿನಿಮಾ ರಿಲೀಸ್ ಬಹುತೇಕ ಖಚಿತ ಎನ್ನಲಾಗ್ತಿದೆ.. ಸಿನಿಮಾದ ಮೇಕರ್ಸ್ ಟಿ ಸಿರೀಸ್ ಮತ್ತು ಯುವಿ ಕ್ರಿಯೇಷನ್ಸ್ ಈ ದಿನಾಂಕವನ್ನು ಆಯ್ಕೆ ಮಾಡಿರುವುದಾಗಿ ತಿಳಿದುಬಂದಿದೆ..
ಅಲ್ಲದೇ ಆ ದಿನಾಂಕದಂದು ಯಾವುದೇ ಪ್ರಮುಖ ಪ್ಯಾನ್-ಇಂಡಿಯನ್ ಸಿನಿಮಾಗಳು ರಿಲೀಸ್ ಆಗ್ತಿಲ್ಲ.. ಅಲ್ಲದೇ ದೆಹಲಿ ಸರ್ಕಾರವೂ ಈಗಾಗಲೇ ಕರ್ಫ್ಯೂ ಹಿಂತೆಗೆದುಕೊಂಡಿರುವುದರಿಂದ ಸಿನಿಮಾ ಈ ದಿನ ರಿಲೀಸ್ ಆಗುವುದು ಸೂಕ್ತವೆಂಬುದು ಮೇಕರ್ಸ್ ಅಭಿಪ್ರಾಯ.
ಆಂಧ್ರಪ್ರದೇಶ ಸರ್ಕಾರವು ಫೆಬ್ರವರಿಯಲ್ಲಿ ಹೊಸ ಟಿಕೆಟ್ ದರಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ಇವೆಲ್ಲವನ್ನೂ ಪರಿಗಣಿಸಿ ತಯಾರಕರು ಈ ದಿನಾಂಕವನ್ನು ಆಯ್ಕೆ ಮಾಡಿದ್ದಾರೆ.
ರಾಧಾ ಕೃಷ್ಣ ಕುಮಾರ್ ನಿರ್ದೇಶನದ “ರಾಧೆ ಶ್ಯಾಮ್” ಚಿತ್ರದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.