Tollywood : ಕುಡಿಯಲು ಟಾಯ್ಲೆಟ್ ನೀರು ಕೊಡುತ್ತಾರೆ : ಮೇಕಾ ರಾಮಕೃಷ್ಣ
ಸಿನಿಮಾ ಜಗತ್ತು ಹೊರಗಿನಿಂದ ಎಷ್ಟು ಕಲರ್ ಫುಲ್ ಆಗಿ ಕಾಣಿಸುತ್ತದೆಯೋ ಅಷ್ಟೇ ಒಳಗಿನಿಂದ ಹುಳುಕಾಗಿದೆ ಎಂದು ಅನೇಕ ನಟ , ನಟಿಯರು ಟೆಕ್ನಿಷಿಯನ್ ಗಳು ಆಗಾಗ ಹೇಳಿಕೊಳ್ತಾ ಕರಾಳ ಅನುಭವಗಳನ್ನ ಬಿಚ್ಚಿಡುತ್ತಾರೆ..
ಅದ್ರಲ್ಲೂ ಕಿರಿಯ ನಟರು ಸಾಕಷ್ಟು ತೊಂದರೆಗಳು , ಬೇಧ ಭಾವಗಳನ್ನ ಎದುರಿಸುವರು.. ನೆಪೋಟಿಸಮ್ , ಕಾಸ್ಟಿಂಗ್ ಕೌಚ್ , ಚಾನ್ಸ್ ಗಾಗಿ ಪರದಾಟ ಿಂತಹ ಸಮಸ್ಯೆಗಳನ್ನ ಎದುರಿಸುವುದೂ ಉಂಟು.. ಇದೀಗ ಹಿರಿಯ ನಟ ಮೇಕಾ ರಾಮಕೃಷ್ಣ ಅವರು ಚಿಕ್ಕ ಕಲಾವಿದರನ್ನ (ಟಾಲಿವುಡ್ ) ಇಂಡಸ್ಟ್ರಿಯಲ್ಲಿ ಎಷ್ಟು ಕೆಟ್ಟದಾಗಿ ಕಾಣಲಾಗುತ್ತದೆ ಎಂಬ ಕರಾಳ ಸತ್ಯವನ್ನ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಹೌದು , ಬಾಹುಬಲಿ , ಸೈರಾದಂತಹ ಸಿನಿಮಾಗಳಲ್ಲಿ ಪ್ರೇಕ್ಷಕರ ಮನಗೆಲ್ಲುವ ಪಾತ್ರಗಳಲ್ಲಿಯೇ ನಟಿಸಿರುವ ನಟ ಮೇಕಾ ರಾಮಕೃಷ್ಣ ಅವರು ಅನೇಕ ಧಾರವಾಹಿಗಳಲ್ಲಿ ನಾಯಕನಾಗಿ ಬಣ್ಣ ಹಚ್ಚಿ ಚಿರಪರಿಚಿತರಾಗಿದ್ದಾರೆ.. 30 ವರ್ಷಗಳಿಂದಲೂ ಸಿನಿಮಾರಂಗದಲ್ಲಿದ್ದು ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ…ಸಾಕಷ್ಟು ಜನಪ್ರಿಯತೆ ಗಳಿಸಿದ್ದರೂ ಕೂಡ ರಾಮಕೃಷ್ಣ ಅವರು ಅವಮಾನಗಳನ್ನ ಎದುರಿಸಿದ್ದಾರೆ..
ಅಲ್ಲದೇ ಇಂಡಸ್ಟ್ರಿಯಲ್ಲಿ ನನಗೆ ಬೇಸರ ತರಿಸುವ ಘಟನೆಗಳು ಸಾಕಷ್ಟಿವೆ. ಜೀವನವೇ ವ್ಯರ್ಥ ಎಂದು ಕಣ್ಣೀರು ಹಾಕಿದ ಸಂದರ್ಭಗಳೂ ಇವೆ. ನೀವು ಯಾವುದೇ ಸಿನಿಮಾ ಸೆಟ್ ಗೆ ಹೋದರು ದೊಡ್ಡವರನ್ನೆಲ್ಲಾ ಒಂದು ರೀತಿ ನಡೆಸಿಕೊಳ್ಳುತ್ತಾರೆ. ಚಿಕ್ಕ ಕಲಾವಿದರನ್ನು ಇನ್ನೊಂದು ರೀತಿ ನಡೆಸಿಕೊಳ್ಳುತ್ತಾರೆ.
ಸಣ್ಣ ಕಲಾವಿದರನ್ನು ನಡೆಸಿಕೊಳ್ಳುವ ರೀತಿ ತೀರಾ ಅವಮಾನಕರವಾಗಿದೆ . ಅವರನ್ನು ಕೂಡ ಕಲಾವಿದರಂತೆ ನೋಡಿ.. ಕನಿಷ್ಠಪಕ್ಷ ಮನುಷ್ಯರಂತಾದರೂ ನೋಡುವ ಪ್ರಯತ್ನ ಮಾಡಿ. ಸಣ್ಣ ಕಲಾವಿದರೆಂದರೆ ಪ್ರೊಡಕ್ಷನ್ ಹುಡುಗರು ಕೂಡ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ತುಂಬಾ ನಾಚಿಕೆಗೇಡು ಅನಿಸುತ್ತದೆ.. ಅವರು ನಡೆಸಿಕೊಳ್ಳುವ ರೀತಿ ನರಕ ಅನಿಸುತ್ತದೆ ಎಂದು ಬೇಸರ ಹೊರಹಾಕಿದ್ದಾರೆ. ಪ್ರೊಡಕ್ಷನ್ ಬಾಯ್ಸ್ ಜೂನಿಯರ್ ಆರ್ಟಿಸ್ಟ್ ಗಳನ್ನು ಭಿಕ್ಷುಕರಗಿಂತ ಕಡೆಯಾಗಿ ನೋಡುತ್ತಾರೆ.
ಊಟಕ್ಕೂ ನಾಲ್ಕಾರು ಕ್ಯಾಟಗರಿ ಇದೆ. ಅಪ್ಪಿತಪ್ಪಿಯೂ ನಮಗೆ ನಿಯೋಜಿಸಿದ ಜಾಗದ ಬದಲು ಮುಂದಿನ ಜಾಗಕ್ಕೆ ಹೋದರೆ ಅವರನ್ನು ಕೆಟ್ಟದಾಗಿ ಕಾಣುತ್ತಾರೆ. ಪೋಷಕ ಕಲಾವಿದರು ಹಾಗೂ ಜೂನಿಯರ್ ಆರ್ಟಿಸ್ಟ್ ಗಳಿಗೆ ಪ್ರತ್ಯೇಕ ಟೆಂಟ್ ಹಾಕಲಾಗುತ್ತದೆ. ಅವರು ಅದರಲ್ಲಿ ಇರಬೇಕು.. ಅವರು ಅದರಲ್ಲಿಯೇ ತಿನ್ನಬೇಕು. ನಿರ್ಮಾಪಕರು, ಹೀರೋಗಳು, ಹೀರೋಯಿನ್ ಗಳಿಗೆ ಒಂದೆಡೆ.
ಪ್ರೊಡಕ್ಷನ್ ಹುಡುಗರು ತುಂಬಾ ಕೆಟ್ಟದಾಗಿ ವರ್ತಿಸುತ್ತಾರೆ. ಅವರು ತಮ್ಮ ಸ್ವಂತ ಮನೆಯಿಂದ ತಂದ ಹಣದಲ್ಲಿ ಇವರಿಗೆಲ್ಲ ಊಟ ಹಾಕುವಂತೆ ವರ್ತಿಸುತ್ತಾರೆ. ಎಷ್ಟೋ ಜನರು ಇವರ ವರ್ತನೆಗಳಿಂದ ಕಣ್ಣೀರು ಹಾಕಿಕೊಂಡಿದ್ದಾರೆ. ಎಷ್ಟೋ ಸಲ ತುಂಬಾ ವಿಕೃತವಾಗಿ ವರ್ತಿಸಿದ್ದಾರೆ. ನೀರು ಕೇಳಿದರೆ ಟಾಯ್ಲೆಟ್ ನೀರನ್ನು ಹಿಡಿದು ತಂದುಕೊಡುತ್ತಾರೆ. ಆದರೂ ಅನೇಕರು ಇದನ್ನೆಲ್ಲಾ ವಿಧಿ ಇಲ್ಲದೇ ಸಹಿಸಿಕೊಂಡು ಬಂದಿದ್ದಾರೆ ಎಂದು ಇಂಡಸ್ಟ್ರಿಯಲ್ಲಿನ ಕರಾಳ ಮುಖವಾಡವನ್ನ ಬಿಚ್ಚಿಟ್ಟಿದ್ದಾರೆ.