ರಿಲೀಸ್ ಆಗುತ್ತಿದೆ ಅಲಾ ವೈಕುಂಠಪುರಂಲೋ ಹಿಂದಿ ಡಬ್ಬಿಂಗ್..!!
2020ರ ಆರಂಭದಲ್ಲಿ ರಿಲೀಸ್ ಆಗಿದ್ದ ಅಲ್ಲು ಅರ್ಜುನ್ ಹಾಗೂ ಪೂಜಾ ಹೆಗಡೆ ನಟನೆಯ ಅಲಾ ವೈಕುಂಠಪುರಮುಲು ತೆಲುಗು ಸಿನಿಮಾ ಸೂಪರ್ ಹಿಟ್ ಆಗಿತ್ತು.. ಇದೀಗ ಈ ಸಿನಿಮಾ ಹಿಂದಿಗೆ ಡಬ್ ಆಗಿ ರಿಲೀಸ್ ಆಗಲಿದೆ.
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರದ ಹಿಂದಿ ಟ್ರೇಲರ್ ಅನ್ನು ನಿರ್ಮಾಕರು ಬಿಡುಗಡೆ ಮಾಡಿದ್ದಾರೆ. ಚಿತ್ರದ ಹಿಂದಿ ಆವೃತ್ತಿಯು ಫೆಬ್ರವರಿ 13 ರಂದು ಪ್ರೀಮಿಯರ್ ಆಗಲಿದೆ. ಭಾರೀ ವಿವಾದಗಳ ನಂತರ ಬಿಡುಗಡೆ ದಿನಾಂಕವನ್ನು ನಿರ್ಧರಿಸಲಾಗಿದೆ. ಈ ಹಿಂದೆಯೇ ಚಿತ್ರದ ಬಿಡುಗಡೆಯನ್ನು ಕೈಬಿಡಲಾಗಿತ್ತು.
ಅಲ್ಲದೇ ಅಲಾ ವೈಕುಂಟಪುರಂಲೋ ಹಿಂದಿ ಡಬ್ಬಿಂಗ್ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ ಮಾಡಲಾಗಿದೆ.. ಅಲ್ಲು ಅರ್ಜುನ್ ನಟನೆಯ ಸಿನಿಮಾ ‘ಪುಷ್ಪ’ ಹಿಂದಿ ಆವೃತ್ತಿ ದೊಡ್ಡ ಹಿಟ್ ಆಗಿ 100 ಕೋಟಿಗೂ ಹೆಚ್ಚು ಹಣ ಗಳಿಸಿದ ಬೆನ್ನಲ್ಲೇ ಅಲ್ಲು ಅರ್ಜುನ್ ನಟನೆಯ ಈ ‘ಅಲಾ ವೈಕುಂಟಪುರಂಲೋ’ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಹೊಂದಿದ್ದ ಮನಿಶ್ ಗಿರಿ ಶಾ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದರು.
ಆದರೆ ‘ಅಲಾ ವೈಕುಂಟಪುರಂಲೋ’ ಸಿನಿಮಾವನ್ನು ‘ಶೆಹಜಾದಾ’ ಹೆಸರಿನಲ್ಲಿ ಹಿಂದಿಗೆ ರೀಮೇಕ್ ಮಾಡಲಾಗ್ತಿದೆ. ಈ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಮನೀಶ್ ಗಿರಿ ಶಾ ಅವರೊಟ್ಟಿಗೆ ಹಲವು ಸುತ್ತಿನ ಮಾತುಕತೆ ನಡೆಸಿ, ಅಲಾ ವೈಕುಂಟಪುರಂಲೋ ಸಿನಿಮಾದ ಹಿಂದಿ ಆವೃತ್ತಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗದಂತೆ ತಡೆದಿದ್ದಾರೆ.
ಆದರೆ ಮನೀಶ್ ಗಿರಿ ಶಾ ‘ಅಲಾ ವೈಕುಂಟಪುರಂಲೋ’ ಸಿನಿಮಾದ ಹಿಂದಿ ಆವೃತ್ತಿಯ ಟ್ರೇಲರ್ ಬಿಡುಗಡೆ ಮಾಡಿದ್ದು, ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಹಾಗಂತ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗ್ತಿಲ್ಲ… ಬದಲಾಗಿ ಟಿವಿ ಚಾನೆಲ್ ನಲ್ಲಿ ತೆರೆ ಬರುತ್ತಿದೆ.