ಹಿರಿಯ ನಟ ಅಶೋಕ್ ರಾವ್ ವಿಧಿವಶ…
ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ ಅಶೋಕ್ ರಾವ್ ಅವರು ವಿಧಿವಶರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಅವರು ತಡರಾತ್ರಿ ಕೊನೆಯುಸಿರೆಳೆದಿದ್ದಾರೆ..
ಕಳೆದ 15 ದಿನಗಳಿಂದ ಅಶೋಕ್ ರಾವ್ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಪ್ರತಿ ದಿನ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಕೂಡ ಚಿಕಿತ್ಸೆ ಪಡೆದ ನಂತರವೂ ಚೆನ್ನಾಗಿದ್ದರು. ಆದ್ರೆ ಮಧ್ಯರಾತ್ರಿ 12.30ಕ್ಕೆ ವಿದ್ಯಾರಣ್ಯಪುರದಲ್ಲಿರೋ ಮನೆಯಲ್ಲಿ ಕೊನೆಯುಸಿರೆಳೆದರು.
ನಟ ಅಶೋಕ್ ರಾವ್ ಪತ್ನಿ, ಮಗ ಹಾಗೂ ಸೊಸೆಯನ್ನು ಅಗಲಿದ್ದಾರೆ. ಇವರು ಕನ್ನಡದ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ವರನಟ ಡಾಕ್ಟರ್ ರಾಜ್ ಕುಮಾರ್ ಅವರ ‘ಪರಶುರಾಮ’ ಸಿನಿಮಾದಲ್ಲಿನ ಖಳನಾಯಕನ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು,..
ಸ್ಯಾಂಡಲ್ ವುಡ್ ಪಾಲಿಗೆ 2021 ರಿಂದ ಕರಾಳವಾಗಿ ಪರಿಣಮಿಸಿದೆ,,, ಕರುವಾಡಿನ ಹೃದಯನಾಡಿಯಾಗಿದ್ದ ಅಪ್ಪು ಅವರ ನೋವಿನಿಂದಲೇ ಹೊರಬರಲು ವರೆಗೂ ಸಾಧ್ಯವಾಗಿಲ್ಲ.. ಅವರಿಗೂ ಮುನ್ನ ಸಂಚಾರಿ ವಿಜಯ್ , ಚಿರಂಜೀವಿ ಸರ್ಜಾ, ಚಂದನವನದ ಹಿರಿಯ ನಿರ್ಮಾಪಕ ರಾಮು ಅವರನ್ನೂ ನಾವು 2021 ರಲ್ಲಿ ಕಳೆದುಕೊಂಡಿದ್ದೇವೆ.,,, ಅಪ್ಪು ಅವರ ಅಗಲಿಕೆ ನಂತರ ಹಿರಿಯ ನಟ ಶಿವರಾಂ , ಇತ್ತೀಚೆಗೆ ಕಿರಾತಕ ನಿರ್ದೇಶಕ ಪ್ರದೀಪ್ ರಾಜ್ , ಯುವ ಪ್ರತಿಭೆ ಸ್ಕ್ರಿಪ್ಟ್ ರೈಟರ್ ಹರ್ಷ , ಡಿಸೆಂಬರ್ನಲ್ಲಿ ನಿರ್ದೇಶಕ ಕೆವಿ ರಾಜು ಅವರು ಬಾರದ ಲೋಕಕ್ಕೆ ಪಯಣ ಬೆಳೆಸಿದರು.. ಇದೀಗ ಅಶೋಕ್ ರಾವ್ ಅವರ ಅಗಲಿಕೆ ಸ್ಯಾಂಡಲ್ ವುಡ್ ಪಾಲಿಗೆ ಮತ್ತೊಂದು ಆಘಾತವಾಗಿದೆ..