MediaOne : ಕೇರಳ : ಕೇಂದ್ರ ಸರ್ಕಾರವು “ಭದ್ರತಾ ಕಾರಣಗಳನ್ನು” ಉಲ್ಲೇಖಿಸಿ ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್ ಪ್ರಸಾರವನ್ನು 2ನೇ ಬಾರಿಗೆ ನಿರ್ಬಂಧಿಸಿದೆ. ಆದರೆ ಕೇರಳ ಹೈಕೋರ್ಟ್ ಆದೇಶದ ಅನುಷ್ಠಾನಕ್ಕೆ ಎರಡು ದಿನಗಳ ಕಾಲ ತಡೆ ನೀಡಿದೆ.ಕೇಂದ್ರದ ಈ ಕ್ರಮವನ್ನ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಇತರೇ ಪಕ್ಷಗಳು “ಪ್ರಜಾಪ್ರಭುತ್ವ ವಿರೋಧಿ” ಎಂದು ಬಣ್ಣಿಸಿ ಆಕ್ರೋಶ ಹೊರಹಾಕಿವಿ.
Ministry Of Information and Broadcast ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಯಾವುದೇ ಹೆಚ್ಚಿನ ಕಾರಣ ನೀಡದೆ ಕೇವಲ ‘ಭದ್ರತೆ ಕಾರಣ’ಕ್ಕಾಗಿ ಚಾನೆಲ್ ಪ್ರಸಾರವನ್ನು ತಡೆ ಹಿಡಿಯುತ್ತಿರುವುದಾಗಿ ಹೇಳಿದೆ.
ಮೀಡಿಯಾ ಒನ್ ಚಾನೆಲ್ನ ಎಡಿಟರ್ ಪ್ರಮೋದ್ ರಾಮನ್ Pramod Raman ಈ ಬಗ್ಗೆ ಮಾತನಾಡಿ, ಸರ್ಕಾರವು ಸೂಕ್ತ ಕಾರಣ ನೀಡದೆ ನಮ್ಮ ಚಾನೆಲ್ ನ ಪ್ರಸಾರವನ್ನು ತಡೆ ಹಿಡಿದಿದೆ. ನಾವು ನ್ಯಾಯಾಂಗ ಹೊರಾಟಕ್ಕೆ ಸಿದ್ಧರಾಗಿದ್ದೇವೆ. ಕೆಲವೇ ದಿನಗಳಲ್ಲಿ ಮತ್ತೆ ಚಾನೆಲ್ ಪ್ರಸಾರ ಆರಂಭಿಸುವ ಪ್ರಯತ್ನ ಪ್ರಾರಂಭಿಸಿದ್ದೇವೆ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ Kerala ವಿಧಾನಸಭೆ ವಿಪಕ್ಷ ನಾಯಕ ವಿಡಿ ಸತೀಸನ್, ಮೀಡಿಯಾ ಒನ್ ಚಾನೆಲ್ನ ಪ್ರಸಾರವನ್ನು ಯಾವುದೇ ಸ್ಪಷ್ಟ ಕಾರಣ ನೀಡದೆ ಏಕಾಏಕಿ ತಡೆ ಹಿಡಿದಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಕೇಂದ್ರ ಸರ್ಕಾರದ ಈ ಕ್ರಮ ನ್ಯಾಯದ ವಿರುದ್ಧವಾಗಿದೆ. ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಚಾನೆಲ್ ಅನ್ನು ರದ್ದು ಮಾಡಬೇಕೆಂದರೆ ಸ್ಪಷ್ಟ ಕಾರಣ ನೀಡಬೇಕು. ಆದರೆ ಇಲ್ಲಿ, ಸರ್ಕಾರವು ಆರ್ಎಸ್ಎಸ್ ಅಜೆಂಡಾವನ್ನು ಪ್ರಸಾರ ಮಾಡಲು ಮುಂದಾಗಿದ್ದು ಅದರ ಪ್ರತಿಯಾಗಿ ಈಗ ಚಾನೆಲ್ ಅನ್ನು ಬ್ಯಾನ್ ಮಾಡಿದೆ ಎಂದು ಹೇಳಿದ್ದಾರೆ.
2020ರ ದೆಹಲಿ ಗಲಭೆ ಸಮಯದಲ್ಲಿ ಮೀಡಿಯಾ ಒನ್ ಹಾಗೂ ಮಲಯಾಳಂ ಏಷಿಯನ್ ನೆಟ್ ಚಾನೆಲ್ ಎರಡನ್ನೂ 48 ಗಂಟೆಗಳ ಕಾಲ ಮಾಹಿತಿ ಮತ್ತು ಪ್ರಸಾರ ಇಲಾಖೆ ಬಂದ್ ಮಾಡಿತ್ತು. ಆಗಲೂ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.