ಅಮಿತಾಬ್ ನಟನೆಯ ಝುಂಡ್ ಮಾರ್ಚ್ 4 ತೆರೆಗೆ ….
ಅಮಿತಾಬ್ ಬಚ್ಚನ್ ಅಭಿನಯದ ಬಹು ನಿರೀಕ್ಷಿತ ಚಿತ್ರದ ಬಿಡುಗಡೆ ದಿನಾಂಕವನ್ನು ಕೊನೆಗೂ ಪ್ರಕಟಿಸಲಾಗಿದೆ. ಮಾರ್ಚ್ 4 ರಂದು ‘ಝುಂಡ್’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೋವಿಡ್-19 ಕಾರಣದಿಂದಾಗಿ ಹಲವು ಬಾರಿ ನಿರ್ಮಾಪಕರು ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಬೇಕಾಯಿತು. ಆದರೆ ಇದೀಗ ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದೆ.
ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡ ಅಮಿತಾಬ್ ಈ ಗುಂಪಿನೊಂದಿಗೆ ಸ್ಪರ್ಧಿಸಲು ಸಿದ್ಧರಾಗಿರಿ, ನಮ್ಮ ತಂಡವು ಬರುತ್ತಿದೆ… ‘ಝುಂಡ್’ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಎಂದು ಟ್ವೀಟ್ ಮಾಡಿದ್ದಾರೆ.
ಮರಾಠಿ ಬ್ಲಾಕ್ಬಸ್ಟರ್ ಚಿತ್ರ “ಸೈರಾಟ್” ಮತ್ತು “ಫ್ಯಾಂಡ್ರಿ” ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ನಾಗರಾಜ್ ಪೋಪತ್ರರಾವ್ ಮಂಜುಳೆ ಅವರು ಹಿಂದಿಯಲ್ಲಿ ಪ್ರಥಮ ಭಾರಿ ನಿರ್ದೇಶನ ಮಾಡುತ್ತಿದ್ದಾರೆ.
ಝಂಡ್ ಕಥೆಯು ‘ಸ್ಲಮ್ ಸಾಕರ್ ಫೌಂಡೇಶನ್’ ಸಂಸ್ಥಾಪಕ ಮತ್ತು ತರಬೇತುದಾರ ವಿಜಯ್ ಬರ್ಸೆ ಅವರ ಕಥೆಯನ್ನು ಆಧರಿಸಿದೆ. ವಿಜಯ್ ಬರ್ಸೆ ಪುಟ್ಬಾಲ್ ಆಟಗಾರ ಅಖಿಲೇಶ್ ಪಾಲ್ ಅವರ ಕೋಚ್ ಆಗಿದ್ದರು. ಚಿತ್ರದಲ್ಲಿ ಬಿಜಯ್ ಬರ್ಸೆ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ. ಟಿ-ಸೀರೀಸ್, ತಾಂಡವ್ ಫಿಲ್ಮ್ಸ್ ಎಂಟರ್ಟೈನ್ಮೆಂಟ್ ಮತ್ತು ಅಟ್ಪಟ್ ಬ್ಯಾನರ್ಗಳ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ.