ಏಕ್ತಾ ಡೇರಿಂಗ್ ರಿಯಾಲಿಟಿ ಶೋಗೆ ಕಾಂಟ್ರವರ್ಸಿ ಕ್ವೀನ್ ನಿರೂಪಕಿ..!!
ಬಾಲಿವುಡ್ ನಟಿ ಕಂಗನಾ ರಣೌತ್ ಹಾಗೂ ವಿವಾದಗಳಿಗೆ ಒಂದು ಅವಿನಾಭಾವ ಸಂಬಂಧವಿದೆ. ವಿವಾದಗಳೇ ಕಂಗನಾರನ್ನ ಬಿಟ್ರೂ ವಿವಾದಗಳು ಕಂಗನಾ ಬೆನ್ನು ಬಿಡಲ್ಲ.. ಎಷ್ಟು ಒಳ್ಳೆ ನಟಿ ಎಂಬ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೋ ಅದಕ್ಕಿಂತ 100 ಪಟ್ಟು ವಿವಾದಗಳ ಮೂಲಕವೇ , ಸದಾ ಏನಾದ್ರೂ ಒಂದು ವಿಚಾರವನ್ನ , ಯಾರದರೂ ಒಬ್ರನ್ನ ವಿರೋಧಿಸುತ್ತಲೇ , ನೇರವಾಗಿ ಮಾತನಾಡ್ತಾ ದಿಟ್ಟತನ ಪ್ರದರ್ಶಿಸುವ ನಟಿ..
ಒಂದ್ ರೀತಿ ಬಾಲಿವುಡ್ ‘ಕ್ವೀನ್’ ಗೆ ವಿವಾದಗಳಂದ್ರೆ ಭಾರೀ ಇಷ್ಟ ನ್ನುವಂತಾಗಿದೆ.. ಅವರ ಜನಪ್ರಿಯತೆಯೂ ಇತರರಿಗಿಂತ ಹೆಚ್ಚಿದೆ.. ಕಂಗನಾರ ಇದೇ ವಿವಾದ ಮೈಮೇಲೆ ಎಳೆದುಕೊಳ್ಳುವ ಗುಣ , ಅವರ ಪಾಪ್ಯುಲಾರಿಟಿಯನ್ನೇ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಈಗ ಬಂಡವಾಳ ಮಾಡಿಕೊಂಡಿದ್ದಾರೆ.. ಹೌದು.. ಏಕ್ತಾ ಕಪೂರ್ ಒಂದು ಡೇರಿಂಗ್ ರಿಯಾಲಿಟಿ ಶೋ ಆಯೋಜನೆ ಮಾಡ್ತಿದ್ದಾರೆ… ಇದನ್ನ ಫಿಯರ್ ಲೆಸ್ ನಟಿ ಕಂಗನಾ ನಿರೂಪಿಸಲಿದ್ದಾರೆ.
ಅಂದ್ಹಾಗೆ ಈ ಹಿಂದೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಕಂಗನಾ, ‘ಮೊದಲ ಬಾರಿಗೆ ರಿಯಾಲಿಟಿ ಶೋ ನಿರೂಪಣೆ ಮಾಡಲಿದ್ದೇನೆ. ಅದೂ ಸಹ ಬಾಸ್ ಲೇಡಿ ಏಕ್ತಾ ಕಪೂರ್ಗಾಗಿ’ ಎಂದಿದ್ದರು. ಆದರೆ ಬಳಿಕ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದರು.
ಅದಕ್ಕೆ ಕೆಲ ದಿನಗಳ ಹಿಂದಷ್ಟೆ ಏಕ್ತಾ ಕಪೂರ್ ಒಡೆತನದ ಆಲ್ಟ್ ಬಾಲಾಜಿ ಒಟಿಟಿಯು ಹೊಸದಾದ ಡೇಟಿಂಗ್ ರಿಯಾಲಿಟಿ ಶೋಗೆ ರೆಡಿಯಾಗಿ. ಈ ಡೇಟಿಂಗ್ ರಿಯಾಲಿಟಿ ಶೋ ಈವರೆಗೆ ಅತ್ಯಂತ ನಿರ್ಭೀತ, ಸತ್ಯವಂತ ರಿಯಾಲಿಟಿ ಶೋ ಆಗಿರಲಿದೆ. ದೊಡ್ಡ ಧಮಾಕಾಗೆ ಸಿದ್ಧವಾಗಿ ಎಂದು ಜಾಹೀರಾತು ನೀಡಿತ್ತು. ಈಗ ಅದೇ ಶೋ ಅನ್ನು ಕಂಗನಾ ರನೌತ್ ನಿರೂಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಏಕ್ತಾ ಕಪೂರ್ ನಿರ್ಮಾಣ ಮಾಡಲು ಹೊರಟಿರುವ ರಿಯಾಲಿಟಿ ಶೋ ಭಾರತದಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಳ್ಳಲಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಭಾರಿ ಸಂಖ್ಯೆಯ ಸ್ಪರ್ಧಿಗಳು, ವೀಕ್ಷಕರು, ದೊಡ್ಡ ಮಟ್ಟದ ಸೆಟ್ ಎಲ್ಲವೂ ಈ ರಿಯಾಲಿಟಿ ಶೋನಲ್ಲಿ ಇರಲಿದೆ ಎಂದು ಹೇಳಲಾಗಿದೆ.