Shiva Rajkumar : ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರು ನಟಿಸಿರುವ ‘ಜೇಮ್ಸ್’ ಅವರ ಕೊನೆಯ ಚಿತ್ರ. ಇದೇ ಕಾರಣಕ್ಕೆ ಅಪ್ಪು ಪಾತ್ರಕ್ಕೆ ಯಾರು ಧ್ವನಿ ನೀಡಬಹುದು ಎಂಬ ಕುತೂಹಲ ಇತ್ತು. ಇದೀಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಅಪ್ಪು ಅವರ ಪಾತ್ರಕ್ಕೆ ಸಹೋದರ ಶಿವರಾಜ್ ಕುಮಾರ್ ಡಬ್ ಮಾಡಿದ್ದಾರೆ ಎಂದು ಸ್ವತಃ ಅವರೇ ಮಾಹಿತಿ ನೀಡಿದ್ದಾರೆ,
James ‘ಜೇಮ್ಸ್’ಗೆ ಡಬ್ ಮಾಡಿದ್ದರ ಕುರಿತು ಮಾತನಾಡಿದ ಶಿವರಾಜ್ ಕುಮಾರ್ ಇದು ಬಹಳ ಕಷ್ಟದ ಕೆಲಸ. ಕಾರಣ, ತಮ್ಮನ ಮುಖ ನೋಡಿ ಧ್ವನಿ ನೀಡುವುದು ಬಹಳ ಸವಾಲಿನ ಕೆಲಸ. ಆದರೆ ಎಲ್ಲರೂ ಕೇಳಿದಾಗ ಇಲ್ಲ ಎನ್ನಲು ಆಗಲಿಲ್ಲ. ಡಬ್ ಮಾಡಿ ಮುಗಿಸಿದ್ದೇನೆ ಎಂದು ನುಡಿದಿದ್ದಾರೆ.
Dubbing ಡಬ್ಬಿಂಗ್ ಸಮಯದಲ್ಲಿನ ಸವಾಲಿನ ಕುರಿತು ಮಾತನಾಡಿದ ಅವರು, ಪುನೀತ್ ಧ್ವನಿಯನ್ನು ಹೊಂದಿಸುವುದು ಬಹಳ ಕಷ್ಟ. ಬೇರೆಯವರಿಗೆ ಹಾಡಬಹುದು. ಅಥವಾ ನನ್ನ ಪಾತ್ರಕ್ಕೇ ಡಬ್ ಮಾಡಬಹುದು. ಆದರೆ ಮತ್ತೊಬ್ಬ ಕಲಾವಿದರನ್ನು ಪ್ರವೇಶಿಸಿ ಧ್ವನಿ ನೀಡುವುದು ಬಹಳ ಕಷ್ಟ ಎಂದಿದ್ದಾರೆ. ಅದಾಗ್ಯೂ ಪ್ರಯತ್ನಪಟ್ಟಿದ್ದೇನೆ ಎಂದಿರುವ ಶಿವಣ್ಣ, ಎಲ್ಲರಿಗೂ ಇಷ್ಟವಾಗಬಹುದು ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.
ಗಾಳಿಪಟ 2 ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕು ಭಾರೀ ಮೊತ್ತಕ್ಕೆ ಸೇಲ್…!!!