ಥಿಯೇಟರ್ ಗಳಿಗೆ ನಿಯಮ ಸಡಿಲಿಕೆ ಬಗ್ಗೆ ಸುಧಾಕರ್ ಮಾತು
ಬೆಂಗಳೂರು : ಕೊರೊನಾ ಮೂರನೇ ಅಲೆ ಕಡಿವಾಣಕ್ಕೆ ಜಾರಿ ತಂದಿದ್ದ 50 : 50 ರೂಲ್ಸ್ ಗಳ ಪೈಕಿ ಕೆಲವು ನಿರ್ಬಂದಗಳಿಗೆ ಸರ್ಕಾರ ರಿಲೀಫ್ ಕೊಟ್ಟಿದೆ. film- minister dr k sudhakar reaction
ಆದರೇ ಸಿನಿಮಾ ಥಿಯೇಟರ್, ಮಲ್ಟಿ ಪ್ಲೆಕ್ಸ್ ಗಳ ಮೇಲಿನ ನಿರ್ಬಂಧ ಮುಂದುವರೆಸಲಾಗಿದೆ.
ಈ ಮಧ್ಯೆ ಸಿನಿಮಾ ಮಂದಿರಕ್ಕೆ ನಿಯಮ ಸಡಿಲ ಮಾಡಬೇಕೆಂದು ಮಾತುಗಳು ಕೇಳಿಬರುತ್ತಿದೆ.
ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ನಾನು ತೀರ್ಮಾನ ತೆಗೆದುಕೊಳ್ಳಲ್ಲ.
ಸಿಎಂ ಬೊಮ್ಮಾಯಿ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಿಎಂ ಯಾವ ನಿರ್ಧಾರ ಮಾಡ್ತಾರೆ ನಾವು ಅದಕ್ಕೆ ಬದ್ಧರಾಗಿದ್ದೇವೆಎಂದು ತಿಳಿಸಿದರು.
ಇದೇ ವೇಳೆ ಶಾಸಕ ಸೋಮಶೇಖರ್ ರೆಡ್ಡಿ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟ ಸಚಿವರು, ಅದೇನ್ ಆರೋಪ ಅಲ್ಲ, ಅವರು ನನ್ನ ಸ್ನೇಹಿತರು ಇದ್ದಾರೆ.
ನನಗೆ ಆರೋಗ್ಯ ಸರಿಯಿಲ್ಲದಾಗ ಪೋನ್ ಮಾಡಿದ್ರು. ಈಗ ಅವರ ಜೊತೆಗೆ ಮಾತನಾಡಿದ್ದೇನೆ. ಅದೇನು ಗಂಭೀರ ಆರೋಪ ಅಲ್ಲ ಎಂದರು.