ಪುನೀತ್ ಗೆ ನಮನ ಸಲ್ಲಿಸಲು ಆಗಮಿಸಿದ ನಟ ಅಲ್ಲು ಅರ್ಜುನ್…
ಪುನೀತ್ ರಾಜ್ಕುಮಾರ್ ಅವರ ಸಮಾಧಿಗೆ ನಮಿಸಲು ಮತ್ತು ಕುಟುಂಬದವರಿಗೆ ಸಾಂತ್ವಾನ ಹೇಳಲು ನಟ ಅಲ್ಲು ಅರ್ಜನ್ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದ ಬೆಳಗ್ಗೆ 11 ಗಂಟೆ ಸುಮಾರಿಗೆ ಖಾಸಗಿ ವಿಮಾನದಲ್ಲಿ ಹೈದರಾಬಾದ್ನಿಂದ ಹೊರಟಿದ್ದರು. ಅಲ್ಲು ಅರ್ಜುನ್ 12 ಗಂಟೆಗೆ ಬೆಂಗಳೂರಿಗೆ ತಲುಪಿದ್ದಾರೆ.
ಮೊದಲು ಶಿವರಾಜ್ಕುಮಾರ್ ನಿವಾಸಕ್ಕೆ ತೆರಳಿರುವ ಅಲ್ಲು ಅರ್ಜುನ್ ಶಿವಣ್ಣ ದಂಪತಿಗಳೊಂದಿಗೆ ಮಾತನಾಡಿದ್ದಾರೆ. ಇಲ್ಲಿಂದ ಪುನೀತ್ ರಾಜ್ಕುಮಾರ್ ಮನೆಗೆ ಭೇಟಿ ನೀಡಲಿದ್ದಾರೆ. ಅಪ್ಪು ಕುಟುಂಬದ ಸದಸ್ಯರಿಗೆ ಅವರು ಸಾಂತ್ವನ ಹೇಳಿ ನಂತರ ಪುನೀತ್ ರಾಜ್ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಬಂದು ಅಲ್ಲು ಅರ್ಜುನ್ ನಮನ ಸಲ್ಲಿಸಲಿದ್ದಾರೆ.
ಹಾಗಾಗಿ ತಮ್ಮ ನೆಚ್ಚಿನ ನಟನನ್ನು ನೋಡಲು ಪುನೀತ್ ರಾಜ್ಕುಮಾರ್ ಮನೆ ಮುಂದೆ ಅಲ್ಲು ಅರ್ಜುನ್ ಅಭಿಮಾನಿಗಳು ಜಮಾಯಿಸಿದ್ದಾರೆ.