ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ ಮೋಹಕ ತಾರೆ ರಮ್ಯಾ…!!!!
ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ದಶಕಗಳ ಕಾಲ ಸಿನಿಮಾರಂಗದಲ್ಲಿ ಮೆರೆದು ನಂತರ ಕೆಲ ವರ್ಷಗಳಿಂದ ಸಿನಿಮಾರಂಗ ಜೊತೆಗೆ ರಾಜಕೀಯದಿಂದಲೂ ದೂರ ಉಳಿದಿದ್ದಾರೆ.. ಆದ್ರೆ ಎವರ್ ಗ್ರೀನ್ ನಟಿ , ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಈಗಲೂ ಫ್ಯಾನ್ ಫಾಲೋವರ್ ಗಳೇನು ಕಡಿಮೆಯಿಲ್ಲ.. ಈಗಲೂ ಅವರು ಸಿನಿಮಾ ರಂಗಕ್ಕೆ ಮರಳಬೇಕೆಂದು ಅಭಿಮಾನಿಗಳು ಕಾಯ್ತಿದ್ದಾರೆ.. ಇದೀಗ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುವ ಮನಸ್ಸು ಮಾಡಿದ್ದಾರೆ ರಮ್ಯಾ…
ಹೌದು.. ಇತ್ತೀಚೆಗೆ ಬೀದಿ ನಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ರಮ್ಯಾ ರಾಜಕಾರಣಿ, ಉದ್ಯಮಿ ಆದಿಕೇಶವಲು ಮೊಮ್ಮಗ ಆದಿನಾರಾಯಣನ ವಿರುದ್ಧ ಆಕ್ರೋಶ ಹೊರಹಾಕಿದ್ದರು.. ಈತ ರಸ್ತೆ ಬದಿ ಮಲಗಿದ್ದ ಲಾರಾ ಹೆಸರಿನ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಅದನ್ನ ಸಾಯಿಸಿ ವಿಕೃತ ಮೆರೆದಿದ್ದ.. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ,, ಅನೇಕ ನಟ ನಟಿಯರು ಆಕ್ರೋಶ ಹೊರಹಾಕಿದ್ದರು.. ಇದೇ ನಾಯಿಯ ಅಂತಿಮ ಸಂಸ್ಕಾರದಲ್ಲಿ ರಮ್ಯಾ ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಿನಿಮಾ ರಂಗಕ್ಕೆ ಮರಳುವುದಾಗಿ ಹೇಳಿದ್ದಾರೆ.
ಅಲ್ಲದೇ ಈ ಬಗ್ಗೆ ಮಾರ್ಚ್ ನಲ್ಲಿ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.. ಸಾಕಷ್ಟು ಅವಕಾಶಗಳು ಬರುತ್ತಲೇ ಇವೆ. ನಾನೀಗ ಕೆಲವು ಚಿತ್ರಕತೆಗಳನ್ನು ಓದುತ್ತಿದ್ದೇನೆ. ಆದಷ್ಟು ಬೇಗ ಈ ಬಗ್ಗೆ ಮಾಹಿತಿ ನೀಡುತ್ತೇನೆ. ನನ್ನ ಕಮ್ ಬ್ಯಾಕ್ ಸಿನಿಮಾದ ಬಗ್ಗೆ ಮಾರ್ಚ್ನಲ್ಲಿ ನಾನು ಮಾಹಿತಿ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ. ಅಲ್ಲದೇ ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಮಾಡಲು ಈಗಾಗಲೇ ದೇಹ ತೂಕ ಇಳಿಸಿಕೊಳ್ಳಲು ಶುರು ಮಾಡಿದ್ದಾರಂತೆ. ನಟನೆಗೆ ಬೇಕಾದ ದೇಹ ಸ್ಥಿತಿಯನ್ನು ಮರಳಿ ಪಡೆದುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ನಾನೀಗ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.