ಸಮಂತಾ ಶರ್ಟ್ ಮೇಲೆ ಬರೀ… ಕೆಟ್ಟ ಪದಗಳೇ… ಗರಂ ಆದ ನೆಟ್ಟಿಗರು…!!!
ನಾಗ ಚೈತನ್ಯ ಜೊತೆಗೆ ಮದುವೆಯಾದ 4 ವರ್ಷಗಳ ಬಳಿಕ ಸಮಂತ ಡಿವೋರ್ಸ್ ಪಡೆದರು.. ಡಿವೋರ್ಸ್ ಪಡೆದು ತಿಂಗಳುಗಳೇ ಕಳೆದ್ರೂ ಈಗಲೂ ಚರ್ಚೆಯಲ್ಲಿದ್ದಾರೆ.. ಟ್ರೋಲ್ ಗಳಿಗೂ ಗುರಿಯಾಗ್ತಿದ್ದಾರೆ. ಆದ್ರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಸಮಂತಾ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಫ್ರೆಂಡ್ಸ್ ಜೊತೆಗೆ ಜಾಲಿ ಟ್ರಿಪ್ ಗಳನ್ನ ಎಂಜಾಯ್ ಮಾಡ್ತಿದ್ದಾರೆ.. ಅದ್ರಲ್ಲೂ ಇತ್ತೀಚೆಗಷ್ಟೇ ಪುಷ್ಪ ಸಿನಿಮಾದಲ್ಲಿ ಮೊದಲ ಬಾರಿಗೆ ಐಟಂ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಕ್ಸಸ್ ಕಂಡಿದ್ದಾರೆ..
ಇದೀಗ ಸಮಂತಾ ತಮ್ಮ ಟಿ ಶರ್ಟ್ ವಿಚಾರದಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದಾರೆ..
ಮುಂಬೈನಲ್ಲಿ ಇತ್ತೀಚಿಗೆ ಸುತ್ತಾಡುತ್ತಿದ್ದ ವೇಳೆ ನಟಿ ಸಮಂತಾ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದರು.. ಈ ವಿಡಿಯೋ , ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ನೆಟ್ಟಿರ ಕೆಂಗಣ್ಣಿಗೆ ಗುರಾಯಿದ್ದಾರೆ ಸ್ಯಾಮ್ … ಅವರ ಶರ್ಟ್ ಫ್ಯಾಷನೇಬಲ್ ಆಗಿದೆ.. ಆದ್ರೆ ಅವರ ಟೀ ಶರ್ಟ್ ಮೇಲಿನ ಪದಗಳು ತೀರ ಅಸಭ್ಯವೆನಿಸುವಂತಿದೆ. ಇಂತಹ ತಪ್ಪು ವಾಕ್ಯಗಳು ಜನರನ್ನ ಅದ್ರಲ್ಲೂ ಟೀನೇಜರ್ಸ್ ಅನ್ನ ಕೆಟ್ಟ ರೀತಿಯಲ್ಲಿ ( ನೆಗೆಟಿವ್ ) ಪ್ರಚೋದಿಸುತ್ತದೆ ಎಂದು ನೆಟಿಜನ್ಸ್ ಸಮಂತಾ ವಿರುದ್ಧ ಕಿಡಿಕಾಡುತ್ತಿದ್ದಾರೆ..
ಸಮಂತಾ ಇತ್ತೀಚೆಗಷ್ಟೇ ಸ್ವಿಟ್ಜರ್ಲೆಂಡ್ ನ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಸ್ವಿಟ್ಜರ್ ಲ್ಯಾಂಡ್ ನಲ್ಲಿ ಸ್ಕೀಯಿಂಗ್ ಮಾಡಿರುವ ಗ್ಲಿಂಪ್ಸ್ ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಸಮಂತಾ…
ಪ್ರವಾಸದಿಂದ ಮರಳಿ ಮುಂಬೈಗೆ ಆಗಮಿಸಿದ್ದ ಸಮಂತಾ ಅವರು ಇಂತಹ ಟಿ ಶರ್ಟ್ ಧರಿಸಿ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದ್ದರು.. ಕೆಟ್ಟ ಪದಗಳನ್ನು ಜಾಹೀರಾತು ಮಾಡುವುದು ಒಳ್ಳೆಯದಲ್ಲ.. ಇದು ಮುಗ್ಧ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಟ್ವಿಟರ್ ಬಳಕೆದಾರರು ಸಮಂತಾ ಅವರ ಫೋಟೋಗೆ ಪ್ರತಿಕ್ರಿಯಿಸಿದ್ದಾರೆ.