ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಹಾಸ್ಯನಟ ಸುನಿಲ್ ಗ್ರೋವರ್
ಖ್ಯಾತ ಹಾಸ್ಯನಟ ಸುನಿಲ್ ಗ್ರೋವರ್ ಅವರು ಮುಂಬೈನಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಪುಣೆಯಲ್ಲಿ ವೆಬ್ ಸೀರೀಸ್ ಚಿತ್ರೀಕರಣದ ವೇಳೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದರು.
‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಮತ್ತು ‘ದಿ ಕಪಿಲ್ ಶರ್ಮಾ ಶೋ’ ನೊಡುವವರಿಗೆ ರಿಂಕು ಭಾಭಿ ಮತ್ತು ಡಾ ಮಶುಹರ್ ಗುಲಾಟಿ ಅವರ ಹೆಸರು ಚಿರಪರಿಚಿತ. ಹಾಸ್ಯನಟ ಸುನಿಲ್ ಗ್ರೋವರ್ ಗೆ ಐಡೆಂಟಿಟಿ ಕೊಟ್ಟ ಪಾತ್ರಗಳಿವು. ರಾತ್ರೋರಾತ್ರಿ ಜನಪ್ರಿಯತೆಯನ್ನು ತಂದುಕೊಟ್ಟಿತು.
ಮತ್ತೊಬ್ಬ ಹಾಸ್ಯ ನಟ ಭಯಾನಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸುನಿಲ್ ಅವರ ಹೆಲ್ತ್ ಅಪ್ಡೇಟ್ ಕೊಟ್ಟಿದ್ದಾರೆ. ಮುಂಬೈ ನಗರದ ಏಷ್ಯನ್ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಸುರಕ್ಷಿತ ವಾಗಿದ್ದಾರೆ ಯಾವುದೇ ಭಯಪಡುವ ಅಗತ್ಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಸುನಿಲ್ ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಮತ್ತು ‘ದಿ ಕಪಿಲ್ ಶರ್ಮಾ’ ಚಿತ್ರದ ಪ್ರಮುಖ ಭಾಗವಾಗಿದ್ದರು ಆದರೆ ಕಪಿಲ್ ಮತ್ತು ಸುನೀಲ್ ನಡುವೆ ದೊಡ್ಡ ಜಗಳವಾಗಿ, ಇಬ್ಬರ ನಡುವಿನ ಸಂಬಂಧಕ್ಕೆ ಬ್ರೇಕ್ ಬಿದ್ದಿದೆ. 2017ರಲ್ಲಿ ಕಪಿಲ್ ತಂಡ ಆಸ್ಟ್ರೇಲಿಯದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಈ ಜಗಳ ನಡೆದಿತ್ತು. ವಿಮಾನದಲ್ಲಿಯೇ ಕಪಿಲ್ ಮತ್ತು ಸುನಿಲ್ ನಡುವೆ ನಡುವೆ ತೀವ್ರ ವಾಗ್ವಾದ ನಡೆದಿತ್ತು. ನಂತರ ಸುನಿಲ್ ಕಪಿಲ್ ಅವರ ಕಾರ್ಯಕ್ರಮಗಳಲ್ಲಿ ನಟಿಸುವುದನ್ನ ಬಿಟ್ಟಿದ್ದರು.