Souith India : ‘FIR’ ಜೊತೆಗೆ ‘ಕಡೈಸಿ ವಿವಸಾಯಿ’ ಬಾಕ್ಸ್ ಆಫೀಸ್ ಫೈಟ್
ಎಂ ಮಣಿಕಂದನ್ ನಿರ್ದೇಶನದ ಬಹುನಿರೀಕ್ಷಿತ ‘ಕಡೈಸಿ ವಿವಸಾಯಿ’ ಗ್ರಾಮೀಣ ನಾಟಕವಾಗಿದ್ದು, ಇದರಲ್ಲಿ ನಟ ವಿಜಯ್ ಸೇತುಪತಿ ವಿಸ್ತೃತ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕೋವಿಡ್ ಅಡಚರಣಿಗಳನ್ನ ಎದುರಿಸಿ ಅಂತಿಮವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. COVID-19 ಸಾಂಕ್ರಾಮಿಕದಿಂದ ಹಲವಾರು ಬಾರಿ ಪೋಸ್ಟ್ ಪೋನ್ ಆದ ಇದೀಗ ವಿಜಯ್ ಸೇತುಪತಿ ನಟನೆಯ ಈ ಸಿನಿಮಾ ಫೆಬ್ರವರಿ 11, 2022 ರಂದು ಬಿಗ್ ಸ್ಕ್ರೀನ್ ಮೇಲೆ ಬರಲು ಸಜ್ಜಾಗಿದೆ.
ಕಾಕಾ ಮೊಟ್ಟೈ ಸಿನಿಮಾ ನಿರ್ದೇಶಿಸಿದ್ದ ಎಂ ಮಣಿಕಂದನ್ ಕಡೈಸಿ ವಿವಸಾಯಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಅಂದ್ಹಾಗೆ ಕಡೈಸಿ ವಿವಸಾಯಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ವಿಜಯ್ ಸೆತುಪತಿ ಕಾಣಿಸಿಕೊಂಡಿದ್ದರೂ ಲೀಡ್ ರೋಲ್ ನಲ್ಲಿ ರೈತರೊಬ್ಬರು ಬಣ್ಣ ಹಚ್ಚಿರುವುದು ವಿಶೇಷ.. ಹೌದು.. ನಟನೆ ಅನುಭವವೇ ಇಲ್ಲದ ರೈತ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜೊತೆ ವಿಜಯ್ ಸೇತುಪತಿ ಹಾಗೂ ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಆದ್ರೆ ಇದೇ ಹೊತ್ತಿಲ್ಲೇ ತಮಿಳಿನ ಮತ್ತೊಬ್ಬ ನಟ ವಿಷ್ಣು ವಿಶಾಲ್ ಅಭಿನಯದ FIR ಸಿನಿಮಾ ಕೂಡ ಬಿಡುಗಡೆಯಾಗಲಿದೆ. ಈ ಸಿನಿಮಾಗೆ ವಿಷ್ಣು ವಿಶಾಲ್ ಅವರೇ ಬಂಡವಾಳ ಹೂಡಿದ್ದು, ಇದು ಕೂಡ ಬಹುನಿರೀಕ್ಷಿತ ಸಿನಿಮಾವೇ.. ಫೆಬ್ರವರಿ 11ರಂದು FIR ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ಆ್ಯಕ್ಷನ್ ಥ್ರಿಲ್ಲರ್ ಶೈಲಿಯ ಈ ಚಿತ್ರಕ್ಕೆ ಮನು ಆನಂದ್ ನಿರ್ದೇಶನ ಮಾಡಿದ್ದಾರೆ. ಈ ಎರೆಡೂ ಸಿನಿಮಾಗಳು ಒಟ್ಟಾಗಿ ರಿಲೀಸ್ ಆಗ್ತಿದ್ದು , ಬಾಕ್ಸ್ ಆಫೀಸ್ ನಲ್ಲಿ ಭಾರೀ ಫೈಟ್ ಏರ್ಪಡಲಿದೆ..