Pushpa : 2021 ಡಿಸೆಂಬರ್ 17 ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದ ಕ್ರೇಜ್ ಈವರೆಗೂ ಕಡಿಮೆಯಾಗಿಲ್ಲ.. ಕ್ರಿಕೆಟರ್ ಗಳಿಂದ ಹಿಡಿದು ನೆಟಿಜನ್ಸ್ , ಸೋಷಿಯಲ್ ಮೀಡಿಯಾ ಸ್ಟಾರ್ ಗಳು , ಸಾರರ್ವಜನಿಕರಲ್ಲೂ ಈ ಸಿನಿಮಾದ ಹಾಡುಗಳು , ಡೈಲಾಗ್ಸ್ ಗಳ ಕ್ರೇಜ್ , ಅಲ್ಲು ಲುಕ್ಸ್ ನ ಕ್ರೇಜ್ ಸಿಕ್ಕಾಪಟ್ಟೆ ಇದೆ.. ಅಮೇಜಾನ್ ನಲ್ಲಿ ಈಗಲೂ ಸಿನಿಮಾ ಭರ್ಜರಿ ವೀವ್ಸ್ ಪಡೆಯುತ್ತಿದೆ…
ಈ ಸಿನಿಮಾ ಕೇವಲ ಹಿಂದಿ ವರ್ಷನ್ ನಿಂದಲೇ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.. ಇನ್ನೂ ಈ ಸುಕುಮಾರ್ ನಿರ್ದೇಶನದ ಸಿನಿಮಾದ ಪಾರ್ಟ್ 2 ಸಹ ಬರಲಿದೆ.. ಪುಷ್ಪ ದ ರೂಲ್ ಗಾಗಿ ಈಗಲಿಂದಲೇ ಕ್ರೇಜ್ ಶುರುವಾಗಿದ್ದು,,, ಈ ಸಿನಿಮಾ 2022 ಅಂದ್ರೆ ಈ ವರ್ಷ ಮತ್ತೆ ಡಿಸೆಂಬರ್ 17ರಂದೇ ರಿಲೀಸ್ ಆಗಲಿದೆ ಎನ್ನಲಾಗ್ತಿತ್ತು ಆದ್ರೆ ,,,
ಇದೀಗ ಪುಷ್ಪ ಸಿನಿಮಾ ಹಾಲಿವುಡ್ ನ ಆ ಒಂದು ಸಿನಿಮಾಗೆ ಹೆದರಿ ರಿಲೀಸ್ ಡೇಟ್ ಪೋಸ್ಟ್ ಮಾಡ್ತಿದೆ ಎನ್ನಲಾಗಿದೆ.. ಇಂತಹದೊಂದು ಸುದ್ದಿ , ಸದ್ಯ ಬಾಲಿವುಡ್ ಅಂಗಳದಲ್ಲಿ ಭಾರೀ ಸೌಂಡ್ ಮಾಡ್ತಿದೆ..
ಹೌದು …. ಅಂದ್ಹಾಗೆ ಆ ಹಾಲಿವುಡ್ ಸಿನಿಮಾ ಮತ್ಯಾವುದೂ ಅಲ್ಲ , ಡೀ ವಿಶ್ವವೇ ಕಾಯುತ್ತಿರುವ ಮೋಸ್ಟ್ ಆಂಟಿಸಿಪೇಟೆಡ್ ಹಿಸ್ಟರಿ ಕ್ರಿಯೇಟರ್ 3D ಸಿನಿಮಾ ಅವತಾರ್ 2…. ಹೌದು ಅವತಾರ್ ಭಾಗ ದು ರಿಲೀಸ್ ಆದ ಬರೋಬ್ಬರಿ 11 ವರ್ಷಗಳ ನಂತರ ಅವತಾರ್ ರಿಲೀಸ್ ಆಗ್ತಿದೆ.. ಇದು ಪುಷ್ಪ ಲಾಕ್ ಮಾಡಿಕೊಂಡಿದ್ದ ಡೇಟ್ ವೇಳೆಯೇ ರಿಲೀಸ್ ಆಗಲಿದೆ..
ಅವತಾರ್ 2ಗೆ ವಿಶ್ವಾದ್ಯಂತ ಅದ್ರಲ್ಲೂ ಭಾರತದಲ್ಲಿ ದೊಡ್ಡ ಮಟ್ಟದ ಕ್ರೇಜ್ ಇದೆ.. ಇದು ವಿಶ್ವದ ಬಹುನಿರೀಕ್ಷೆಯ ಬಿಗ್ ಬಜೆಟ್ ಸಿನಿಮಾ. ಹೀಗಾಗಿ ಈ ಸಿನಿಮಾ 100 % ಅವತಾರ್ ಸಿನಿಮಾ ರಿಲೀಸ್ ಆದಾಗ ರಿಲೀಸ್ ಆಗುವುದಿಲ್ಲ ಎಂದು ಟಾಲಿವುಡ್ ಬಾಲಿವುಡ್ ಅಂಗಳಲ್ಲಿ ಕಬರ್ ಹರಿದಾಡ್ತಿದೆ..
ಅಂದ್ಹಾಗೆ ಪುಷ್ಪ ಸಿನಿಮಾ ಈ ಹಿಂದೆ ಪಾರ್ಟ್ 1 ರಿಲೀಸ್ ಟೈಮ್ ನಲ್ಲಿ ಸಿನಿಮಾತಂಡವು ರಿಸ್ಕ್ ತೆಗೆದುಕೊಂಡಿತ್ತು… ಅದೇ ಹೊತ್ತಲ್ಲೇ ಹಾಲಿವುಡ್ ನ ಮತ್ತೊಂದು ಅಂತರಾಷ್ಟ್ರಿಯ ಬಹುನಿರೀಕ್ಷೆಯ ಸಿನಿಮಾ ಸ್ಪೈಡರ್ ಮ್ಯಾನ್ ನೋ ವೇ ಹೋಮ್ ಸಹ ರಿಲೀಸ್ ಆಗಿತ್ತು.. ರಣ್ವೀರ್ ಸಿಂಗ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘83’ 24 ಕ್ಕೆ ರಿಲೀಸ್ ಆಗಿತ್ತು… ಆದ್ರೆ ಸ್ಪೈಡರ್ ಮ್ಯಾನ್ ಮುಂದೆಯೂ ಪುಷ್ಪ ಅಬ್ಬರಿಸಿ ಯಶಸ್ವಿಯಾಯ್ತು.. ಪುಷ್ಪರಾಜನ ಮುಂದೆ 83 ಮಂಡಿಯೂರಬೇಕಾಯ್ತು…
ಹಾಗಂತ ಅವತಾರ್ 2 ಗೆ ಟಕ್ಕರ್ ಕೊಡೋದು ಅಂದ್ರೆ ಅದು ಎಲ್ಲದಕ್ಕಿಂತ ದೊಡ್ಡ ರಿಸ್ಕ್.. ಯಾಕಂದ್ರೆ ಅವತಾರ್ ಗೆ ಇರುವ ಕ್ರೇಜೇ ನೆಕ್ಸ್ಟ್ ಲೆವೆಲ್ ,,, ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅವತಾರ್ ಕ್ರೇಜ್ ಇರುವವರೇ… ಈ ಸಿನಿಮಾ ಮುಂದೆ ಪುಷ್ಪ ರಿಲೀಸ್ ಆದರೂ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹೊಡೆತ ಬೀಳೋದ್ರಲ್ಲಿ ನೋ ಡೌಟ್.. ಹೀಗಾಗಿಯೇ ಸಿನಿಮಾ ರಿಲೀಸ್ ದಿನಾಂಕ ಮುಂದೂತ್ತದೆ ಎನ್ನಲಾಗ್ತಿದೆ.. ಹಾಗಂತ ಇನ್ನೂ ವರೆಗೂ ಸಿನಿಮಾ ತಂಡ ಎಲ್ಲೂ ಅಧಿಕೃತ ರಿಲೀಸ್ ದಿನಾಂಕವನ್ನ ಹೇಳಿಕೊಂಡಿಲ್ಲ.. ಆದ್ರೆ ಬಲ್ಲ ಮೂಲಗಳಿಂದ ಸಿಕ್ಕ ಮಾಹಿತಿ ಅಷ್ಟೇ..