Gangubai Kathiawadi : ಮುಂಬೈ: ಭಾರತದ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಕಾಥೇಯವಾಡಿ ನಟನೆಯ ಬಹು ನಿರೀಕ್ಷಿತ ಚಿತ್ರ ‘ಗಂಗೂಬಾಯಿ ಕಾಠಿಯಾವಾಡಿ’ ಕೂಡ ಒಂದು. ಈ ಚಿತ್ರ ಒಂದಲ್ಲಾ ಒಂದು ವಿಚಾರ, ವಿವಾದಗಳಿಂದ ಸುದ್ದಿಯಲ್ಲೇ ಇದೆ. ಈ ಸಿನಿಮಾ ಮೇಲೆ ಜನರಿಗೆ ಹೆಚ್ಚು ನಿರೀಕ್ಷೆ ಇರೊದಿಕ್ಕೆ ಮುಖ್ಯ ಕಾರಣ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಯುವ ನಟಿ ಆಲಿಯಾ ಕಾಂಬೊ.
ಕ್ಯೂಟ್ ನಟಿ ಆಲಿಯಾ ಮೊದಲಬಾರಿಗೆ ಇಷ್ಟು ಬೋಲ್ಡ್ ಆದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಒಂದೆಡೆ ಆದರೆ ಪದ್ಮಾವತ್ ನಂತಹ ಸೆನ್ಷೇಷನಲ್ ಸಿನಿಮಾ ನಿರ್ದೇಶಕ ಕಂಟೆಂಟ್ ಸಿನಿಮಾಗಳ ಸರದಾರ ಈ ಸಿನಿಮಾವನ್ನು ನಿರ್ದೇಶಿಸುತ್ತಿರುವುದೆ, ಈ ಸಿನಿಮಾ ಮೇಲಿನ ಕ್ರೇಜ್ ಹೆಚ್ಚುಸುತ್ತಿದೆ.
ಆದ್ರೆ ಈ ಸಿನಿಮಾ ಸತ್ಯಕಥೆಯಾಧಾರಿತ ಸಿನಿಮಾವಾಗಿದ್ದು , ಆಲಿಯಾ ಪಾತ್ರ ಜೊತೆಗೆ , ಟೈಟಲ್ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ… ಈ ಸಿನಿಮಾ ಮೇಲೆ ಈಗ ಕನ್ನಡಡ ಜಾಗೃತಿ ವೇದಿಕೆಯವರ ಕೆಂಗಣ್ಣು ಬಿದ್ದಿದೆ. ಹೌದು
ಗಂಗೂಭಾಯಿ ಅನ್ನೋ ಹೆಸರೇ ಈಗ ವಿವಾದಕ್ಕೆ ಕಾರಣವಾಗಿದೆ. ಅದಕ್ಕೆ ಕಾರಣ ಕರ್ನಾಟಕದ ಹಿರಿಯ ಗಾಯಕಿ ಗಂಗೂಬಾಯಿ ಹಾನಗಲ್ ಅವರ ಹೆಸರು ಈ ಟೈಟಲ್ ಗೆ ಇಡಲಾಗಿರೋದು.
ಈ ಸಿನಿಮಾ ಕಾಮಾಟಿಪುರದ ಡಾನ್ ಆಗಿ ಮೆರೆದಿದ್ದ ಗಂಗೂಬಾಯಿ ಅವರ ಜೀವನದ ಕಥೆ ಹೊಂದಿದೆ.. ಗಂಗೂಬಾಯಿ ಅವರು ಹೇಗೆ ತಮ್ಮ ಕನಸಿನ ಬೆನ್ನಟ್ಟಿ ಬಂದು ವಂಚನೆಗೆ ಒಳಗಾಗಿ ರೆಡ್ ಲೈಟ್ ಏರಿಯಾಗೆ ಸೇರುತ್ತಾರೆ… ಅದೇ ಕಾಮಾಟಿ ಪುರ ರಿಯಾಗೆ ಮುಂದೆ ಡಾನ್ ಆಗ್ತಾರೆ ಅನ್ನೋದನ್ನ ಕಥೆಯಲ್ಲಿ ತೋರಿಸಲಾಗಿದೆ. ಅಲ್ಲದೇ ಈ ಸಿನಿಮಾದಲ್ಲಿ ಕೆಲವು ಅಸಭ್ಯ ದೃಶ್ಯಗಳಿದ್ದು ಇದಕ್ಕೆ ಗಂಗೂಭಾಯಿ ಟೈಟಲ್ ಇಟ್ಟಿರುವುದು , ಕನ್ನಡದ ಕೀರ್ತಿ , ಸಂಗೀತ ಕ್ಷೇತ್ರದ ಮಹಾರಥಿ ಗಂಗೂಬಾಯಿ ಹಾನಗಲ್ ಅವರಿಗೆ ಅಪಮಾನ ಆಗಿದೆ. ಹೀಗಾಗಿ ಸಿನಿಮಾದ ಟೈಟಲ್ ಬದಲಾಯಿಸಬೇಕೆಂದು ಆಗ್ರಹಿಸಿದ್ದಾರೆ.
Pushpa 2 Release Update : ಅಬ್ಬಾ..!!! ಅದೊಂದು ಸಿನಿಮಾಗೆ ಹೆದರಿದ ‘ಪುಷ್ಪ’… ರಿಲೀಸ್ ಡೇಟ್ ಪೋಸ್ಟ್ ಪೋನ್…!!!