Darling Krishna : ಬೆಂಗಳೂರು : ಲವ್ ಮಾಕ್ಟೇಲ್ Love Mocktail ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ ಸಿನಿಮಾ. ಚಿತ್ರಮಂದಿರಗಳಿಂದ ಎತ್ತಂಗಡಿ ಆಗುವ ಸಂದರ್ಭದಲ್ಲಿ ಅಚ್ಚರಿ ರೀತಿಯಲ್ಲಿ ಗೆದ್ದು ಬೀಗಿದ ಚಿತ್ರ ಲವ್ ಮಾಕ್ಟೇಲ್. ಹೊಸ ರೀತಿಯ ಲವ್ ಸ್ಟೋರಿ ಹೇಳುವ ಮೂಲಕ ಚಿತ್ರರಸಿಕರ ಮನಗೆದ್ದಿದ್ದ ಚಿತ್ರತಂಡ ಇದೀಗ ಮತ್ತೆ ತೆರೆ ಮೇಲೆ ಕಮಾಲ್ ಮಾಡಲು ಬರುತ್ತಿದೆ. ‘ಲವ್ ಮಾಕ್ಟೇಲ್ 2’ ಮೂಲಕ Darling Krishna ಡಾರ್ಲಿಂಗ್ ಕೃಷ್ಣ ಪ್ರೇಮಿಗಳಿಗೆ ಮತ್ತೊಂದು ಸರ್ಪ್ರೈಸ್ ಕೊಡಲು ಸಿದ್ಧರಾಗಿದ್ದಾರೆ.
ಹೌದು..! ಲವ್ ಮಾಕ್ಟೇಲ್ ಸಿನಿಮಾದ ಮೊದಲ ಭಾಗದಲ್ಲಿ ಆದಿ ಮತ್ತು ನಿಧಿಮಾ ಪಾತ್ರಗಳಲ್ಲಿ ಡಾರ್ಲಿಂಗ್ ಕೃಷ್ಣ ಮಿಲನಾ ನಾಗರಾಜ್ Milana Nagaraj ಕಮಾಲ್ ಮಾಡಿದ್ದರು. ಲವರ್ಸ್ ಎಂದ್ರೆ ಆದಿ ಮತ್ತಿ ನಿಧಿಮಾ ರೀತಿಯಲ್ಲಿರಬೇಕೆಂದು ಎಲ್ಲಾ ಹುಡುಗ-ಹುಡುಗಿಯರು ಅಂದುಕೊಳ್ಳುತ್ತಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಈ ಪಾತ್ರಗಳು ಭಾರಿ ಸದ್ದು ಮಾಡಿದ್ವು. ಮೊದಲ ಭಾಗದಲ್ಲಿ ಎಲ್ಲರ ಹೃದಯ ಗೆದಿದ್ದ ‘ಆದಿ’ ಮತ್ತು ‘ನಿಧಿಮಾ’ ಲವ್ ಮಾಕ್ಟೇಲ್ 2 ಚಿತ್ರದಲ್ಲಿಯೂ ಮೋಡಿ ಮಾಡಲು ಬಯಸಿದೆ.
ಅಂದಹಾಗೆ ‘ಲವ್ ಮಾಕ್ಟೇಲ್ 2’ ಸಿನಿಮಾ ಇದೇ 11ರಿಂದ ರಾಜ್ಯದಾದ್ಯಂತ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ. ಡಾರ್ಲಿಂಗ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಿಡುಗಡೆ ಬಗ್ಗೆ ಸಂತಸದ ವಿಚಾರ ಹಂಚಿಕೊಂಡಿದ್ದಾರೆ. ಇನ್ನು ಲವ್ ಮಾಕ್ಟೇಲ್ 2 ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಹೀಗಾಗಿ ಬಿಡುಗಡೆ ದಿನಾಂಕವನ್ನು ತಡಮಾಡದೆ ‘ಲವ್ ಮಾಕ್ಟೇಲ್ 2’ ಚಿತ್ರತಂಡ ಘೋಷಣೆ ಮಾಡಿದೆ. ಒಟ್ಟಾರೆ ಈ ಹಿಂದೆ ಸಿಂಪಲ್ ಲವ್ ಸ್ಟೋರಿ ಹೇಳಿ ಸಿನಿಮಾ ಪ್ರೀಯರ ಮನ ಗೆದ್ದಿದ್ದ ಲವ್ ಮಾಕ್ಟೇಲ್ ಸಿನಿಮಾ ತಂಡ ಮತ್ತೆ ಮೋಡಿ ಮಾಡುತ್ತಾ ಎಂಬುದನ್ನ ಕಾದು ನೋಡಬೇಕು.
Gangubai Kathiawadi Controversy : ಮುಗಿಯದ ಗಂಗೂಬಾಯಿ ಟೈಟಲ್ ವಿವಾದ…