ಲತಾ ಮಂಗೇಶ್ಕರ್ ಅವರಿಗೆ ಕನ್ನಡದ ನಂಟು
ಭಾರತೀಯ ಸಿನಿಮಾರಂಗದ ಬಹುಮುಖ್ಯ ಕೊಂಡಿಯಾಗಿದ್ದ , ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು ಇಂದು ವಿಧಿವಶರಾಗಿದ್ದಾರೆ.. ಕೆಲ ದಿನಗಳಿಂದ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಲತಾ ಮಂಗೇಶ್ಕರ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.. ಆದರೆ ಇಂದು ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ.
ಅವರ ನಿಧನಕ್ಕೆ ಬಾಲಿವುಡ್ , ಸ್ಯಾಂಡಲ್ ಸೇರಿದಂತೆ ಭಾರತೀಯ ಸಿನಿಮಾರಂಗ , ರಾಜಕೀಯ ಮುಖಂಡರು , ಗಣ್ಯರು , ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.. ಸುಮಾರು 22 ವಿವಿಧ ಭಾಷೆಗಳಲ್ಲಿ 10 ಸಾವಿರಕ್ಕೂ ಅಧಿಕ ಹಾಡುಗಳನ್ನ ಹಾಡಿರುವ ಲತಾ ಮಂಗೇಶ್ಕರ್ ಅವರು ಕನ್ನಡದ ಹಾಡುಗಳಿಗೂ ಧ್ವನಿಯಾಗಿರುವ ವಿಚಾರ ಎಲ್ರಿಗೂ ಗೊತ್ತಿದೆ..1967ರಲ್ಲಿ ಬಿಡುಗಡೆಯಾದ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ಕನ್ನಡ ಚಲನಚಿತ್ರದಲ್ಲಿನ “ಬೆಳ್ಳನೆ ಬೆಳಗಾಯಿತು” ಮತ್ತು “ಎಲ್ಲಾರೆ ಇರತೀರೋ ಎಂದಾರೆ ಬರತೀರೋ” ಹಾಡುಗಳನ್ನು ಹಾಡಿದ್ದಾರೆ.
1967ರಲ್ಲಿ ತೆರೆಕಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಹಾಲುಂಡ ತವರು ಸಿನಿಮಾಗಳಿಗೆ ಜನಪ್ರಿಯವಾದ ಹಡುಗಳಿಗೆ ಧ್ವನಿ ನೀಡಿದ್ದಾರೆ. 10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು 22 ಭಾಷೆಗಳಲ್ಲಿ ಹಾಡಿದ್ದಾರೆ. ಹಿಂದಿಯ ಪ್ರತಿಯೊಬ್ಬ ಗಾಯಕರ ಜೊತೆಗೂ ಲತಾ ಅವರು ಹಾಡಿದ್ದಾರೆ. ಹಿಂದಿಯಲ್ಲದೆ ಭಾರತದ ಪ್ರತಿಯೊಂದು ಭಾಷೆಯಲ್ಲೂ ಹಾಡಿದ್ದಾರೆ. ಲತಾ ಅವರ ಕುಟುಂಬದಲ್ಲಿ ಪ್ರತಿಯೊಬ್ಬರೂ ಸಂಗೀತ ಕ್ಷೇತ್ರದಲ್ಲಿದ್ದಾರೆ.