ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ 2 ದಿನ ರಾಷ್ಟ್ರೀಯ ಶೋಕಾಚರಣೆ…
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ‘ಭಾರತದ ನೈಟಿಂಗೇಲ್’ ಎಂದು ಕರೆಯಲ್ಪಡುವ ಲತಾ ಮಂಗೇಶ್ಕರ್ ಅವರು ಮುಂಬೈನ ಕ್ಯಾಂಡಿ ಬ್ರೀಚ್ ಆಸ್ಪತ್ರೆಯಲ್ಲಿ ಭಾನುವಾರ ಮುಂಜಾನೆ ನಿಧನರಾದರು.
“ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಫೆಬ್ರವರಿ 6 ಮತ್ತು 7 ರಂದು ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಗುತ್ತದೆ. ಗೌರವದ ಸಂಕೇತವಾಗಿ ಎರಡು ದಿನಗಳ ಕಾಲ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗುತ್ತದೆ” ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಜನವರಿ 8 ರಂದು ಕೋವಿಡ್ -19 ಗೆ ಪಾಸಿಟಿವ್ ಪರೀಕ್ಷೆ ನಡೆಸಿದ ನಂತರ ಲತಾ ಮಂಗೇಶ್ಕರ್ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಕಳೆದೆರಡು ವಾರಗಳಿಂದ ಆಕೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು.
ಇತ್ತೀಚೆಗೆ ಸುಧಾರಣೆಯ ಲಕ್ಷಣಗಳನ್ನು ತೋರಿಸಿದ ನಂತರ, ಮತ್ತೆ ಅವರ ಆರೋಗ್ಯ ಸ್ಥಿತಿಯು ಹದಗೆಟ್ಟಿತು. ದುರದೃಷ್ಟವಶಾತ್ ಅವರು ಇಂದು ಇಹಲೋಕ ತ್ಯಜಿಸಿದ್ದು, ಇಡೀ ದೇಶವೇ ದುಃಖದಲ್ಲಿ ಮುಳುಗಿದೆ.
ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರವನ್ನು ಅವರ ಪೆದ್ದಾರ್ ರಸ್ತೆಯ ನಿವಾಸವಾದ ಪ್ರಭುಕುಂಜ್ಗೆ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಶ್ರದ್ಧಾಂಜಲಿಗಾಗಿ ತರಲಾಗುವುದು. ಬಳಿಕ ಆವರ ಪಾರ್ಥಿವ ಶರೀರವನ್ನು ಮುಂಬೈನ ಶಿವಾಜಿ ಪಾರ್ಕ್ಗೆ ಸಂಜೆ 4.30ರ ಸುಮಾರಿಗೆ ತೆಗೆದುಕೊಂಡು ಹೊಗಲಾಗುವುದು. ಶಿವಾಜಿ ಪಾರ್ಕ್ನಲ್ಲಿ ಕೊನೆಯ ವಿಧಿ ವಿಧಾನಗಳು ನಡೆಯಲಿವೆ..