ಕೋವಿಡ್ ನಿಂದ ಚೇತರಿಸಿಕೊಂಡ ಮೆಗಾಸ್ಟಾರ್ – ಚಿತ್ರಿಕರಣದಲ್ಲಿ ಭಾಗಿ…
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದು, ಮತ್ತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಸೌಮ್ಯ ಲಕ್ಷಣಗಳೊಂದಿಗೆ ಕೋವಿಡ್ 19 ಗೆ ಒಳಗಾಗಿದ್ದರು. ಈಗ ಪುಲ್ ಫಿಟ್ ಆಗಿ ಮುಂದಿನ ಚಿತ್ರಗಳಲ್ಲಿ ಚಿತ್ರೀಕರಣಕ್ಕೆ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಸಿನಿಮಾದ ಸೆಟ್ ನಿಂದ ಪೊಟೋಗಳನ್ನ ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿ ಮಾಹಿತಿ ನೀಡಿರುವ ಚಿರಂಜೀವಿ “ ಕೋವಿಡ್ ಪರೀಕ್ಷೆಯಲ್ಲಿ ನೆಗೆಟೀವ್ ಬಂದಿದೆ. ಪೂರ್ಣ ಉತ್ಸಾಹದೊಂದಿಗೆ ಮತ್ತೆ ಕೆಲಸಕ್ಕೆ ಹಿಂತಿರಗಿದ್ದೇನೆ, ನಿಮ್ಮೆಲ್ಲರ ಪ್ರೀತಿಗಾಗಿ ಮತ್ತು ನನ್ನ ಚೇತರಿಕೆಗಾಗಿ ಹಾರೈಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಎಂದು ಟ್ವೀಟ್ ಮಾಡಿದ್ದಾರೆ.
Tested Negative. Back to work & Back in Action with full steam 🙂 Heartfelt thanks for all your love and wishes for my recovery. Humbled & Energised! pic.twitter.com/zFqzrOxBCv
— Chiranjeevi Konidela (@KChiruTweets) February 6, 2022
ಚಿರಂಜೀವಿ ಪ್ರಸ್ತುತ ತೆಲುಗು ಚಿತ್ರ ಗಾಡ್ ಫಾದರ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ ಇದು ಮಲಯಾಳಂ ಚಿತ್ರ ಲೂಸಿಪರ್ ನ ರಿಮೇಕ್.
ಇದಲ್ಲದೇ ಚಿರಂಜೀವಿ ಕೊರಟಾಲ ಶಿವ ನಿರ್ದೇಶನದ ಆಚಾರ್ಯ ಚಲನಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ. ಪುತ್ರ ರಾಮ್ ಚರಣ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿರಂಜೀವಿಗೆ ಜೋಡಿಯಾಗಿ ಕಾಜಲ್ ಮತ್ತು ರಾಮ್ ಚರಣ್ ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ.