Shah Rukh Khan : ಗಾಯಕಿ ಲತಾ ಮಂಗೇಶಕರ್ ನಿಧನಕ್ಕೆ ಇಡಿ ದೇಶವೇ ಶೋಕಾಚರಣೆ ಆಚರಿಸುತ್ತಿದೆ. 92 ವರ್ಷದ ಗಾನ ಕೋಗಿಲೆ ಅಂತ್ಯ ಸಂಸ್ಕಾರ ನಿನ್ನೆ ಶಿವಾಜಿ ಪಾರ್ಕ್ ನಲ್ಲಿ ನಡೆಯಿತು. ಅಂತಿಮ ದರ್ಶನ ಪಡೆಯಲು ಪ್ರಧಾನಿ ಮೋದಿ ಸಚಿನ್ ತೆಂಡೂಲ್ಕರ್ ಮತ್ತು ಶಾರುಕ್ ಖಾನ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದು ನಮಿಸಿದರು. ಬಾಲಿವುಡ್ ನ ಘಟಾನುಗಟಿಗಳು ಇಲ್ಲಿ ಭಾಗವಹಿಸಿದ್ದರು.
ಕನ್ನಡಕ್ಕೆ ಮರಳಿದ ಪ್ರಭುದೇವ – ನಿರ್ಮಾಪಕ ಸಂದೇಶ ನಾಗರಾಜ್ ಜೊತೆ ಸಿನಿಮಾ
ಈ ವೇಳೆ ಶಾರುಖ್ ಖಾನ್ ನವರ ನಡೆ ಕೆಲವರಿಗೆ ಅಸಮಧಾನ ಸೃಷ್ಟಿಸಿತು. ಮತ್ತು ಅಸಹಜ ಎನಿಸಿತು. ಲತಾ ಮಂಗೇಶ್ಕರ್ ಅವರನ್ನ ನೋಡಲು ಮ್ಯಾನೇಜರ್ ಪೂಜ ದದ್ಲಾನಿ ಜೊತೆ ಆಗಮಿಸಿದ ಶಾರುಖ್ ಮುಸ್ಲಿಂ ಸಮುದಾಯದಂತೆ ದುವಾ (ಪ್ರಾರ್ಥನೆ ) ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾರುಕ್ ನಡೆದುಕೊಂಡ ರೀತಿಯ ವೀಡಿಯೋ ವೈರಲ್ ಆಗಿದೆ.
ಗಾಯನ ಲೋಕದ ಸಾಮ್ರಾಜ್ಞಿಯ ಅದ್ಭುತ 8 ದಶಕಗಳು….
ಲತಾ ಮಂಗೇಶ್ಕರ್ ಪಾರ್ಥಿವ ಶರೀರಕ್ಕೆ ಉಗಿದರು ಎಂಬ ಆರೋಪವನ್ನ ಕೆಲವರು ಮಾಡಿದ್ದಾರೆ. ಈ ಕುರಿತು ಚರ್ಚೆ ಶುರುವಾಗಿದೆ. ಆದರೆ ಇದನ್ನ ತಪ್ಪಾಗಿ ಅರ್ಥೈಸಲಾಗಿದೆ. ಶಾರುಖ್ ಖಾನ್ ಲತಾಜಿ ಮುಂದೆ ಪಾರ್ಥನೆ ಸಲ್ಲಿಸಿದ ನಂತರ ಗಾಳಿ ಊದಿದರು. ಮುಸ್ಲಿಂ ಸಮುದಾಯದಲ್ಲಿ ಈ ರೀತಿ ನಡೆದುಕೊಳ್ಳುವ ಪದ್ದತಿ ಇದೆ. ಗಾಳಿ ಊದಿದ್ದನ್ನ ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಲತಾ ಜಿ ಪಾರ್ಥಿವ ಶರೀರಕ್ಕೆ ಶಾರುಖ್ ಖಾನ್ ಉಗಿದರು ಎಂಬಂತೆ ತೋರಿಸಲಾಗಿದೆ.
ಹರಿಯಾಣದ ಬಿಜೆಪಿ ಮುಖಂಡ ಟ್ವೀಟರ್ ನಲ್ಲಿ ಮಾಡಿದ ಯಡವಟ್ಟಿನಿಂದ ಈ ರೀತಿ ನಡೆದಿದೆ. ಶಾರುಖ್ ದುವಾ ಮಾಡಿ ಮಾಸ್ಕ್ ತೆಗೆದು ಗಾಳಿ ಊದಿದ ವೀಡಿಯೋ ಶೇರ್ ಮಾಡಿ ಅರುಣ್ ಯಾದವ್ “ಅವರು ಉಗಿದ್ರಾ” ಎಂಬ ಕ್ಯಾಪ್ಶನ್ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನ ನೋಡಿದ ಹಲವರು ಶಾರುಖ್ ವಿರುದ್ದ ಕಿಡಿ ಕಾರಿದರೆ ಇದನ್ನ ತಪ್ಪಾಗಿ ಅರ್ಥೈಸಲಾಗಿದೆ ಅಂತ ಹಲವರು ಅರುಣ್ ಯಾದವ್ ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿನಿಮಾರಂಗದಲ್ಲಿ ಲತಾ ಮಂಗೇಶ್ಕರ್ ಜರ್ನಿ..
ಲತಾ ಮಂಗೇಶ್ಕರ್ ಬಹು ಅಂಗಾಗ ವೈಫಲ್ಯದಿಂದ ನಿನ್ನೆ ಬೆಳಿಗ್ಗೆ 8 ಗಂಟೆಗೆ ಕೊನೆಯುಸಿರೆಳೆದಿದ್ದರು. 92 ವರ್ಷ ವಯಸ್ಸಿನ ಲತಾ ಜಿ 29 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ವೈದ್ಯರ ಸತತ ಪ್ರಯತ್ನದ ನಂತರವು ಅವರನ್ನ ಉಳಸಿಕೊಳ್ಳಲಾಗಲಿಲ್ಲ..